ಚಿಲಿಯಲ್ಲಿ ಭೀಕರ ಕಾಡ್ಗಿಚ್ಚು: 18 ಸಾವು, 50 ಸಾವಿರ ಮಂದಿ ಸ್ಥಳಾಂತರ

Date:

ದಕ್ಷಿಣ ಅಮೆರಿಕದ ಚಿಲಿ ದೇಶದ ದಕ್ಷಿಣ ಹಾಗೂ ಮಧ್ಯ ಭಾಗದಲ್ಲಿ ಹಬ್ಬಿರುವ ಭೀಕರ ಕಾಡ್ಗಿಚ್ಚಿಗೆ (Forest Fires) ಕನಿಷ್ಠ 18 ಜನರು ಬಲಿಯಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ. ಮುಂಜಾಗ್ರತಾ ಕ್ರಮವಾಗಿ 50,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

- Advertisement -

​ಪರಿಸ್ಥಿತಿಯ ಗಂಭೀರತೆಯನ್ನು ಅರಿತ ಚಿಲಿ ಅಧ್ಯಕ್ಷ ಗೇಬ್ರಿಯಲ್ ಬೋರಿಕ್ ಅವರು ಪೀಡಿತ ಪ್ರದೇಶಗಳಲ್ಲಿ ‘ವಿಪತ್ತು ಪರಿಸ್ಥಿತಿ’ಯನ್ನು (State of Catastrophe) ಘೋಷಿಸಿದ್ದಾರೆ.
​
ಬಯೋಬಿಯೊ (Biobio) ಮತ್ತು ನುಬಲ್ (Ñuble) ಪ್ರಾಂತ್ಯಗಳಲ್ಲಿ ಕಾಡ್ಗಿಚ್ಚು ವ್ಯಾಪಕವಾಗಿ ಹಬ್ಬಿದೆ. ಸುಮಾರು 24 ಕಡೆಗಳಲ್ಲಿ ಸಕ್ರಿಯವಾಗಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಪರಿಸ್ಥಿತಿಯನ್ನು ನಿಯಂತ್ರಿಸಲು ಮಿಲಿಟರಿ ನೆರವು ಪಡೆಯಲು ತುರ್ತು ಪರಿಸ್ಥಿತಿ ಘೋಷಣೆ ಅನುವು ಮಾಡಿಕೊಟ್ಟಿದೆ ಎಂದು ಆಂತರಿಕ ಸಚಿವ ಅಲ್ವಾರೊ ಎಲಿಜಾಲ್ಡೆ ತಿಳಿಸಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಅಮೆರಿಕದ ಮಧ್ಯಂತರ ಚುನಾವಣೆ: ಬೆಲೆ ಏರಿಕೆ, ಇರಾನ್ ಯುದ್ಧದ...

ಅಮೆರಿಕದಲ್ಲಿ ಏರುತ್ತಿರುವ ಪೆಟ್ರೋಲ್ ಬೆಲೆ, ದುಬಾರಿಯಾಗುತ್ತಿರುವ ದಿನಬಳಕೆಯ ವಸ್ತುಗಳು ಹಾಗೂ ಇರಾನ್ ವಿರುದ್ಧದ ಯುದ್ಧದ ಆರ್ಥಿಕ ಪರಿಣಾಮಗಳು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡಳಿತಕ್ಕೆ ದೊಡ್ಡ ರಾಜಕೀಯ ಸವಾಲಾಗಿವೆ. ನವೆಂಬರ್ 3ರಂದು ನಡೆಯಲಿರುವ ಮಧ್ಯಂತರ...

ಖಾಲಿದ್‌ರಂತೆ ಸಿಜೆಪಿ ನಾಯಕರನ್ನೂ ದೀರ್ಘ ಜೈಲುವಾಸದ ಸುಳಿಯಲ್ಲಿ ಸಿಲುಕಿಸುವ...

ಚುನಾವಣಾ ಆಯೋಗದ ಅಕ್ರಮ ಪ್ರಶ್ನಿಸಿದ ಸಿಜೆಪಿ ನಾಯಕರ ವಿರುದ್ಧ ಸರಣಿ ದೂರು ದಾಖಲಿಸಲಾಗುತ್ತಿದೆ. ಮೋದಿ ಸರ್ಕಾರದ ಅವಧಿಯಲ್ಲಿ ‘ವಿಚಾರಣೆಯೇ ಒಂದು ಶಿಕ್ಷೆ’ ಎನ್ನುವ ತಂತ್ರ ಪುನರಾವರ್ತನೆಯಾಗುತ್ತಿದೆಯೇ? ಉಮರ್‌ ಖಾಲಿದ್‌ ರೀತಿಯಲ್ಲೇ ಸೌರವ್ ದಾಸ್,...

ಎಚ್ಚೆತ್ತುಕೊಳ್ಳುತ್ತಿವೆ DMK, YSRCP; ಡಿಲಿಮಿಟೇಷನ್‌ ಮಸೂದೆ ಮತ್ತೆ ಸೋಲುವ...

ಮೋದಿಯವರ ಅಹಂಕಾರದ ಆಡಳಿತಕ್ಕೆ ದಕ್ಷಿಣ ಭಾರತವು ಎಂದಿಗೂ ತಲೆಬಾಗುವುದಿಲ್ಲ, ಮತ್ತು ಈ ಬಾರಿಯ ಅವರ ಹತಾಶೆಯ ರಾಜಕೀಯ ಕುತಂತ್ರಗಳು ಅವರ ಪಾಲಿಗೆ ತಿರುಗುಬಾಣವಾಗಿ ದೇಶದ ಪ್ರಜಾಪ್ರಭುತ್ವವು ಗೆಲ್ಲುವುದು ಖಚಿತ ಮಹಿಳಾ ಮೀಸಲಾತಿ ಎಂಬ ಪವಿತ್ರ...

​ರಾಷ್ಟ್ರೀಯ ಅರಣ್ಯ ಸಂಸ್ಥೆಯ ವರದಿಯಂತೆ, ಈವರೆಗೆ 8,500 ಹೆಕ್ಟೇರ್ (ಸುಮಾರು 21,000 ಎಕರೆ) ಅರಣ್ಯ ಪ್ರದೇಶ ಮತ್ತು ಜನವಸತಿ ಪ್ರದೇಶಗಳು ಬೆಂಕಿಗೆ ಆಹುತಿಯಾಗಿವೆ. ಮಧ್ಯರಾತ್ರಿಯ ನಂತರ ಹಠಾತ್ತನೆ ಆವರಿಸಿದ ಬೆಂಕಿಯಿಂದಾಗಿ ಜನರು ತಲ್ಲಣಗೊಂಡಿದ್ದಾರೆ. ಅನೇಕರು ಗಾಢ ನಿದ್ದೆಯಲ್ಲಿದ್ದಾಗಲೇ ಬೆಂಕಿಯ ಜ್ವಾಲೆಗಳು ಮನೆಗಳನ್ನು ಆವರಿಸಿಕೊಂಡಿವೆ. ಪರಿಣಾಮವಾಗಿ, ರಸ್ತೆ ಬದಿಗಳು, ವಾಹನಗಳು ಮತ್ತು ಹೊಲಗಳಲ್ಲಿ ಸುಟ್ಟು ಕರಕಲಾದ ಮೃತದೇಹಗಳು ಪತ್ತೆಯಾಗಿವೆ.
​ಬಯೋಬಿಯೊ ಪ್ರಾಂತ್ಯದ ಕಾನ್ಸೆಪ್ಸಿಯಾನ್ (Concepción) ನಗರವೊಂದರಲ್ಲೇ 253 ಮನೆಗಳು ಸಂಪೂರ್ಣವಾಗಿ ನಾಶವಾಗಿವೆ ಎಂದು ವರದಿಯಾಗಿದೆ. ಒಟ್ಟಾರೆ ಸಾವಿರಾರು ಮನೆಗಳು ಹಾನಿಗೊಳಗಾಗಿರುವ ಸಾಧ್ಯತೆಯಿದೆ ಎಂದು ಅಧ್ಯಕ್ಷ ಬೋರಿಕ್ ಕಳವಳ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಾದೇಶಿಕ ಪಕ್ಷಗಳನ್ನು ನುಂಗುವ ಬಿಜೆಪಿ ತಂತ್ರ ಅರಿಯಲು ಜೆಡಿಎಸ್‌ಗೆ ಸಕಾಲ!

​ಸರ್ಕಾರದ ವಿರುದ್ಧ ಆಕ್ರೋಶ
“ನಮ್ಮ ಸಮುದಾಯವೇ ಕಣ್ಣಮುಂದೆ ಹೊತ್ತಿ ಉರಿಯುತ್ತಿದ್ದರೂ, ಸರ್ಕಾರದ ಕಡೆಯಿಂದ ಸಮಯಕ್ಕೆ ಸರಿಯಾಗಿ ಯಾವುದೇ ನೆರವು ಸಿಗಲಿಲ್ಲ,” ಎಂದು ಪೆಂಕೊ ನಗರದ ಮೇಯರ್ ರೊಡ್ರಿಗೊ ವೆರಾ ಅಸಮಾಧಾನ ಹೊರಹಾಕಿದ್ದಾರೆ.

ಭಾನುವಾರ ತಾಪಮಾನವು 38 ಡಿಗ್ರಿ ಸೆಲ್ಸಿಯಸ್‌ಗೆ (100 F) ಏರಿಕೆಯಾಗಿದ್ದು, ಬಲವಾದ ಗಾಳಿ ಬೀಸುತ್ತಿರುವುದು ಬೆಂಕಿ ನಂದಿಸುವ ಕಾರ್ಯಕ್ಕೆ ಅಡ್ಡಿಯಾಗಿದೆ. ತೀವ್ರ ಉಷ್ಣಾಂಶ ಮತ್ತು ಬರಗಾಲದ ಪರಿಸ್ಥಿತಿಯು ಕಾಡ್ಗಿಚ್ಚು ವೇಗವಾಗಿ ಹಬ್ಬಲು ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚಿಲಿಯಲ್ಲಿ ಬೇಸಿಗೆಯ ಅವಧಿಯಲ್ಲಿ (ಫೆಬ್ರವರಿ) ಕಾಡ್ಗಿಚ್ಚು ಸಂಭವಿಸುವುದು ಸಾಮಾನ್ಯವಾದರೂ, ದೀರ್ಘಕಾಲದ ಬರಗಾಲ ಇದನ್ನು ತೀವ್ರಗೊಳಿಸಿದೆ. 2024ರ ಆರಂಭದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ 130ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ಇದೀಗ ನೆರೆಯ ಅರ್ಜೆಂಟೀನಾದಲ್ಲೂ ಪಟಗೋನಿಯಾ ಪ್ರಾಂತ್ಯದಲ್ಲಿ ಕಾಡ್ಗಿಚ್ಚಿನ ಹಾವಳಿ ಕಂಡುಬಂದಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸೌದಿ ಅರೇಬಿಯಾದ ಕಂಠನಾಳಕ್ಕೇ ಕೈಹಾಕಿರುವ ಯೆಮನ್!

ಸೌದಿ ಅರೇಬಿಯಾದ ಜೀವನಾಡಿಗೇ ಕೈಹಾಕಿರುವ ಯೆಮನ್‌ನ ಈ ಪ್ರತಿರೋಧವು ಕೇವಲ ಒಂದು...

ಅಲ್ಬೇನಿಯಾದಲ್ಲೇಕೆ ಜನಾಕ್ರೋಶ ಭುಗಿಲೆದ್ದಿದೆ? ಸುಪ್ರೀಂ ಕೋರ್ಟ್, ಪಾರ್ಲಿಮೆಂಟನ್ನು ಸುಟ್ಟದ್ದು ಸರಿಯೇ?

ಅಲ್ಬೇನಿಯಾ ರಾಜಧಾನಿ ತಿರಾನಾದ ಬೀದಿಗಳಿಂದ ಜಾಗತಿಕ ರಾಜಧಾನಿಗಳವರೆಗೆ… ಬೆಲೆ ಏರಿಕೆ, ಭ್ರಷ್ಟಾಚಾರ...