ಧಾರವಾಡದ ಫೋಟೋ ಮತ್ತು ವಿಡಿಯೋ ಗ್ರಾಫರ್ ಸಂಘದ ಹಿರಿಯ ಸದಸ್ಯ ಮತ್ತು ಸಂಯುಕ್ತ ಕರ್ನಾಟಕ ಹಾಗೂ ಉದಯವಾಣಿ ಪತ್ರಿಕೆಗಳಿಗೆ ಫೋಟೋಗ್ರಾಫರ್ ಆಗಿದ್ದ ರಾಮಚಂದ್ರ ಕುಲಕರ್ಣಿ ಮಂಗಳವಾರ ತಡ ರಾತ್ರಿ ನಿಧನರಾಗಿದ್ದಾರೆ.
ಧಾರವಾಡದ ಸ್ನೇಹಿತರ ಬಳಗದಲ್ಲಿ ‘ಆರ್‌ಕೆ’ ಎಂದೇ ಗುರುತಿಸಿಕೊಂಡಿದ್ದರು. ಕರಳು ಸಮಸ್ಯೆಯಿಂದ ಇತ್ತೀಚೆಗೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜನ್ಮದಿನದಂದೇ ಕೊನೆಯುಸಿರೆಳೆದಿದ್ದಾರೆ.
ರಾಮಚಂದ್ರ ಕುಲಕರ್ಣಿ ಅಂತ್ಯಸಂಸ್ಕಾರ ಹೊಸ ಯಲ್ಲಾಪುರದ ಸ್ಮಶಾನದಲ್ಲಿ ಬುಧವಾರ ಮಧ್ಯಾಹ್ನ ನಡೆಯಲಿದೆ ಎಂದು ಅವರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
ಸೂಕ್ಷ್ಮ ಮನಸ್ಸಿನ ಸ್ನೇಹಿತನ ಅಗಲಿಕೆ ಧಾರವಾಡದ ಪತ್ರಕರ್ತರು, ಫೋಟೋ ಜರ್ನಲಿಸ್ಟ್‌ಗಳು ಹಾಗೂ ಕವಿಪವಿ ಸದಸ್ಯರು ಸಂತಾಪ ಸೂಚಿಸಿದ್ದಾರೆ.