ಧಾರವಾಡ | ಥಿನ್ನರ್ ಬಾಟಲಿಗೆ ಬೆಂಕಿಬಿದ್ದು 4 ವರ್ಷದ ಬಾಲಕ ಸಾವು; ತಂದೆಯ ಸ್ಥಿತಿ ಚಿಂತಾಜನಕ

Date:

ಥಿನ್ನರ್ ಬಾಟಲಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ ಮನೆಯಲ್ಲಿದ್ದ ತಂದೆ ಮತ್ತು ಮಗ ಬೆಂಕಿಯಲ್ಲಿ ಸಿಲುಕಿಕೊಂಡು 4 ವರ್ಷದ ಬಾಲಕ ಮೃತಪಟ್ಟಿರುವ ಘಟನೆ ಧಾರವಾಡದ ಸಂತೋಷ ನಗರದಲ್ಲಿ ನಿನ್ನೆ (ಆ.15) ನಡೆದಿದೆ.

- Advertisement -

ಮೃತ ಬಾಲಕ ಅಗಸ್ತ್ಯ ಮಾಶ್ಯಾಳ್‌ನ ತಂದೆ ಚಂದ್ರಕಾಂತ್ ಅವರಿಗೆ ಸುಟ್ಟ ಗಾಯಗಳಾಗಿದ್ದು, ಸ್ಥಿತಿ ಚಿಂತಾಜನಕವಾಗಿದೆ. ಸದ್ಯ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕತ್ಸೆ ಪಡೆಯುತ್ತಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಪೊಲೀಸ್ ಇಲಾಖೆ ಸುಧಾರಣೆಗೆ 3 ಸಮಿತಿ; ಬದಲಾವಣೆ ಅಗತ್ಯವೇ?...

ಪೊಲೀಸ್‌ ಇಲಾಖೆಯ ಕಾರ್ಯವೈಖರಿಯಲ್ಲಿ ಸುಧಾರಣೆ, ಡಿಜಿಟಲ್‌ ಟಚ್‌ ಹಾಗೂ ನೇಮಕಾತಿ ವ್ಯವಸ್ಥೆಯ ಪುನರ್‌ರಚನೆಗೆ ರಾಜ್ಯ ಸರ್ಕಾರ ಉನ್ನತ ಮಟ್ಟದ 3 ತಜ್ಞರ ಸಮಿತಿಗಳನ್ನು ರಚಿಸಿದೆ. ಆದರೆ, ಪೊಲೀಸ್‌ ಠಾಣೆಗಳಲ್ಲಿ ಸಾರ್ವಜನಿಕರು ಎದುರಿಸುವ ಸಮಸ್ಯೆಗಳಿಂದ...

ಪಾಕಿಸ್ತಾನದಲ್ಲಿ ಅಹಿಂಸಾ ಮೂರ್ತಿಯ ‘ರಹಸ್ಯರಕ್ಷಣೆ’: ಕರಾಚಿಯಿಂದ ಇಸ್ಲಾಮಾಬಾದ್‌ಗೆ ಗಾಂಧಿ...

ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿರುವ ಭಾರತೀಯ ಹೈಕಮಿಷನ್ ಕಚೇರಿಯ ಪ್ರವೇಶ ದ್ವಾರದಲ್ಲಿ ಮಹಾತ್ಮ ಗಾಂಧೀಜಿಯವರ ಭವ್ಯ ಕಂಚಿನ ಪ್ರತಿಮೆ ಇಂದಿಗೂ ಗಾಂಭೀರ್ಯದಿಂದ ನಿಂತಿದೆ. ಕೈಯಲ್ಲಿ ಊರುಗೋಲು ಹಿಡಿದು ದೂರದ ದಿಗಂತವನ್ನು ದಿಟ್ಟಿಸುವಂತಿರುವ ಈ ಬಾಪೂ ಪ್ರತಿಮೆಯು...

ಗಾಂಧಿಯ ಆರ್ಥಿಕ ಸಾಮಾಜಿಕ ಸಂಕೇತಗಳು: ಉಪ್ಪು, ಖಾದಿ, ಚರಕ...

ಗ್ರಾಮೀಣ ಭಾರತದ ಆರ್ಥಿಕತೆ ಮನಗಂಡಿದ್ದ ಗಾಂಧಿ ಹಾಲಿನ ಬಗೆಗಿನ ಕಠೋರ ನಿಲುವನ್ನು ನಿರಾಕರಿಸಿ ತನ್ನನ್ನು ತಾನು ಮೇಕೆಯ ಮಮಕಾರದ ಹಾಲಿಗೆ ಕೊಟ್ಟುಕೊಂಡಿದ್ದರು. ಈಗಿನ ಪಶುಪಾಲಕ ಸಮುದಾಯಗಳ ಸಾವಯವ ಬದುಕಿನ ರೀತಿ ನೀತಿ ಗಮನಿಸಿ......

ಅಗಸ್ತ್ಯನ ತಾಯಿ ಬಾಣಂತಿ ಇರುವುದರಿಂದ ಬಿಸಿ ತಾಗಿಸಲು ಅಗ್ಗಿಷ್ಟಿಕೆಯನ್ನು ಬಳಸಲಾಗುತ್ತಿದ್ದು, ಅಗ್ಗಿಷ್ಟಿಕೆಗೆ ಬೆಂಕಿ ಹಚ್ಚಲು ಬಾಲಕನ ಅಜ್ಜಿ ಪ್ರಯತ್ನಿಸುತ್ತಿದ್ದರು. ನಿರಂತರ ಮಳೆಯಿಂದ ಅಗ್ಗಿಷ್ಟಿಕೆಯಲ್ಲಿದ್ದ ಕಟ್ಟಿಗೆ ಹಸಿಯಾಗಿ ಬೆಂಕಿ ಹತ್ತುತ್ತಿರಲಿಲ್ಲ. ಆಗ ಚಂದ್ರಕಾಂತ್, ಸ್ವಲ್ಪ ಥಿನ್ನರ್ ಹಾಕುವಂತೆ ಹೇಳಿದ್ದಾರೆ. ಥಿನ್ನರ್ ಹಾಕುತ್ತಿದ್ದಂತೆ ಬೆಂಕಿ ಜೋರಾಗಿ ಥಿನ್ನರ್ ಬಾಟಲ್​ಗೂ ಹೊತ್ತಿಕೊಂಡಿದೆ.

ದಿಢೀರನೆ ಥಿನ್ನರ್ ಬಾಟಲ್ ಅನ್ನು ಹೊರಗೆ ಎಸೆಯಲು ಅಗಸ್ತ್ಯನ ಅಜ್ಜಿ ಪ್ರಯತ್ನಿಸಿದಾಗ, ಬಾಟಲ್​ ತಪ್ಪಿ, ಚಂದ್ರಕಾಂತ್ ಮತ್ತು ಅಗಸ್ತ್ಯ ಇದ್ದ ಕೋಣೆಯೊಳಗೆ ಹೋಗಿದೆ. ಏಕಾಏಕಿ ಕೋಣೆಯಲ್ಲಿ ಬೆಂಕಿ ಹೊತ್ತಿಕೊಂಡು ಚಂದ್ರಕಾಂತ್ ಮತ್ತು ಆಗಸ್ತ್ಯ ಕೋಣೆಯಲ್ಲೇ ಸಿಲುಕಿಕೊಂಡಿದ್ದಾರೆ. ಕೋಣೆಯಲ್ಲಿದ್ದ ಚಂದ್ರಕಾಂತ್ ಮತ್ತು ಅಗಸ್ತ್ಯನನ್ನು ರಕ್ಷಿಸಿ ಹೊರಗೆ ಕರೆದುಕೊಂಡು ಬರುವಷ್ಟರಲ್ಲಿ ಇಬ್ಬರಿಗೂ ಸಾಕಷ್ಟು ಸುಟ್ಟಗಾಯಗಳಾಗಿದ್ದವು. ಇಬ್ಬರನ್ನೂ ಕೂಡಲೇ ಕಿಮ್ಸ್​ ಆಸ್ಪತ್ರೆಗೆ ದಾಖಲಿಸಿದರೂ ಕೂಡ, ಬಾಲಕ ಅಗಸ್ತ್ಯ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಧಾರವಾಡ | ನಿಜ ಜೀವನದಲ್ಲಿ ʼತಲೆದಂಡʼ ನಾಟಕದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು: ಡಿಸಿ ದಿವ್ಯ ಪ್ರಭು

ಈ ಕುರಿತು ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಆತ್ಮಪರಿಚಯದತ್ತ ಕರೆದೊಯ್ಯುವ ಗಾಂಧೀ ಚಿಂತನೆ

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ. ಶಿವರಾಮ ಕಾರಂತ ಟ್ರಸ್ಟ್ ಹಾಗೂ...

ಹಾವೇರಿ | ಗಾಂಧಿ ಕಂಡ ಕನಸನ್ನ ಸೌಹಾರ್ದಗೊಳಿಸೋಣ: ಬಸವರಾಜ ಪೂಜಾರ

"ಸರ್ಕಾರದ ಕಾರ್ಯಕ್ರಮದ ಭಾಗವಾಗಿ ಮಾತ್ರ ಗಾಂಧಿ ಜಯಂತಿ ಅತ್ಯಂತ ವಿಜೃಂಭಣೆಯಿಂದ ಆಚರಣೆ...

SIR: ಕೊಡಗಿನ ಬ್ಯಾಡಗೊಟ್ಟದಲ್ಲಿ 66 ಮುಸ್ಲಿಂ ಮತಗಳ ಅಳಿಸುವಿಕೆಗೆ Form-7 ಅರ್ಜಿ

ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯ ಸಂದರ್ಭದಲ್ಲಿ ಮತದಾರರ...

ಅ.4ರಿಂದ ವಿಜಯಪುರ – ತಿರುಪತಿ ದಸರಾ ಎಕ್ಸ್‌ಪ್ರೆಸ್ ರೈಲು ಸೇವೆ ಆರಂಭ

ದಸರಾ ಹಬ್ಬದ ಹಿನ್ನೆಲೆಯಲ್ಲಿ ತಿರುಪತಿ–ವಿಜಯಪುರ ನಡುವೆ ಪ್ರಯಾಣಿಕರ ಅನುಕೂಲಕ್ಕಾಗಿ ಸಾಪ್ತಾಹಿಕ ವಿಶೇಷ...