ಕಾಮಗಾರಿ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಠಿಸಿ 46 ಲಕ್ಷ ರೂ. ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿ ಓಕಳಿ ಗ್ರಾಮ ಪಂಚಾಯತಿ ಪಿಡಿಒ ವಿರುದ್ಧ ಪ್ರಕರಣ ದಾಖಲಾಗಿದೆ.
ಕಲಬುಗರಿ ಜಿಲ್ಲೆಯ ಕಮಲಾಪುರ ತಾಲೂಕಿನ ಓಕಳಿ ಗ್ರಾಮ ಪಂಚಾಯತಿ ಪಿಡಿಒ ಪ್ರವೀಣ್ ಕುಮಾರ್ ವಿರುದ್ಧ ಕಮಲಾಪುರ ತಾಲೂಕು ಪಂಚಾಯತಿ ಇಒ ಅಂಬರೇಶ ಪಾಟೀಲ್ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ಕಲಬುರಗಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
15ನೇ ಹಣಕಾಸು ಅನುದಾನದಲ್ಲಿ ಪಿಡಿಒ ಪ್ರವೀಣ್ ಕುಮಾರ್ ಅವ್ಯವಹಾರ ನಡೆಸಿದ್ದಾರೆ. ನಡೆಯದೇ ಇರುವ ಕಾಮಗಾರಿಗಾಗಿ ಸಲಕರಣೆ ಖರೀದಿ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಠಿಸಿ 46 ಲಕ್ಷ ರೂ. ಹಣ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.
ಪ್ರವೀಣ್ ಕುಮಾರ್ ಮತ್ತು ಅಧ್ಯಕ್ಷ ಅಲ್ಕಾ ನರೋಣಿ ಅವರ ವಿರುದ್ಧ ಮಾಜಿ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಮತ್ತು ಅಂಬೇಡ್ಕರ್ ಯುವಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ತಳಕೇರಿ ದೂರು ನೀಡಿದ್ದಾರೆ. ಅವರ ದೂರಿನ ಆಧಾರದ ಮೇಲೆ ತನಿಕೆ ನಡೆಸಲಾಗಿದ್ದು, ಆರೋಪ ಸಾಬೀತಾಗಿದ್ದು, ಅಕ್ರಮ ನಡೆದಿರುವುದು ಕಂಡುಬಂದಿದೆ ಎಂದು ಇಒ ತಿಳಿಸಿದ್ದಾರೆ.
ಪಿಡಿಒ ಪ್ರವೀಣ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 406, 409, 420, 465, 468 ಮತ್ತು ಕರ್ನಾಟಕ ಗ್ರಾಮ ಸ್ವರಾಜ್ ಪಂಚಾಯತಿ ರಾಜ್ಯ ಕಾಯ್ದೆಯ ಕಲಂ 246 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.