ಗಾಝಾದಲ್ಲಿ ಕ್ಷಾಮ ಉಲ್ಬಣ: ಸುತ್ತಲಿನ ಪ್ರದೇಶಗಳಿಗೂ ಬರ ಪರಿಸ್ಥಿತಿ ಸಾಧ್ಯತೆ

Date:

ಗಾಝಾದಲ್ಲಿನ ಕ್ಷಾಮ ಪರಿಸ್ಥಿತಿ ಮತ್ತಷ್ಟು ಹೆಚ್ಚಳವಾಗಿದೆ ಮತ್ತು ಅದು ಸುತ್ತಮುತ್ತಲಿನ ಪ್ರದೇಶಗಳಿಗೂ ಹಬ್ಬುತ್ತಿದೆ ಎಂದು ಜಾಗತಿಕ ಹಸಿವು ಮತ್ತು ಆಹಾರ ಭದ್ರತಾ ಮೇಲ್ವಿಚರಣಾ ಅಂತಾರಾಷ್ಟ್ರೀಯ ವ್ಯವಸ್ಥೆ ವರದಿ ಹೇಳಿದೆ.

- Advertisement -

ವಿಶ್ವಸಂಸ್ಥೆ ಬೆಂಬಲಿತ ಸಮಗ್ರ ಆಹಾರ ಭದ್ರತಾ ಹಂತದ ವರ್ಗೀಕರಣ (ಐಪಿಸಿ) ಗಾಝಾ ಗವರ್ನೆಟ್‌ (Gaza Governorate) ಕ್ಷಾಮ ಪರಿಸ್ಥಿತಿ ಅತ್ಯುನ್ನತ ಮಟ್ಟವಾದ 5ನೇ ಹಂತಕ್ಕೆ ಏರಿದೆ ಎಂದು ಹೇಳಿದೆ. ಹಸಿವು, ನಿರ್ಗತಿಕತೆ ಮತ್ತು ಸಾವಿನ ಪ್ರಮಾಣ ಆಧಾರದಲ್ಲಿ ಕ್ಞಾಮದ ಹಂತ ನಿರ್ಧರಿಸಲಾಗುತ್ತದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ದಿವಾಳಿ ಕಂಪನಿಗಳ ಬಿಡ್‌ನಲ್ಲಿ ಅದಾನಿಯದ್ದೇ ಮೇಲುಗೈ; ಸಾಲಗಾರರಿಗೆ ₹97,700...

ಭಾರತದ ದಿವಾಳಿ ಹಂತದಲ್ಲಿದ್ದ ಕಂಪನಿಗಳ ಬಿಡ್‌ ಪ್ರಕ್ರಿಯೆಗಳಲ್ಲಿ ಅದಾನಿ ಗ್ರೂಪ್‌ನ ಅಸಾಧಾರಣ ಯಶಸ್ಸಿನ ಹಿಂದೆ ರಹಸ್ಯವೊಂದಿದೆ! ಪ್ರತಿ ಐದರಲ್ಲಿ ಮೂರು ಬಿಡ್‌ಗಳನ್ನು ಗೆದ್ದು, ದೇಶದ ಅತಿ ದೊಡ್ಡ ಕಾರ್ಪೊರೇಟ್ ಸ್ವಾಧೀನದಾರನಾಗಿ ಹೊರಹೊಮ್ಮಿರುವ ಅದಾನಿ...

ಇದನ್ನು ಓದಿದ್ದೀರಾ? ಗಾಝಾ ಪಟ್ಟಿಯನ್ನು ತಲೆಕೆಳಗಾಗಿ ದುರ್ಬೀನು ಹಿಡಿದು ನೋಡಬೇಡಿ

ಸೆಪ್ಟೆಂಬರ್ ಅಂತ್ಯದ ವೇಳೆಗೆ, ಕ್ಷಾಮಾ ಸ್ಥಿತಿಯು ಮಧ್ಯ ಗಾಝಾದ ಡೀರ್ ಎಲ್-ಬಲಾಹ್ ಮತ್ತು ದಕ್ಷಿಣದ ಖಾನ್ ಯೂನಿಸ್‌ಗೂ ವಿಸ್ತರಿಸುವ ಸಾಧ್ಯತೆಯಿದೆ. ಇದು 500,000ಕ್ಕೂ ಹೆಚ್ಚು ಜನರ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗಿದೆ.

1.07 ಮಿಲಿಯನ್ ಗಾಝಾ ನಿವಾಸಿಗಳ ಜನಸಂಖ್ಯೆಯಲ್ಲಿ ಶೇಕಡ 54ರಷ್ಟು 4ನೇ ಹಂತದ ‘ತುರ್ತು’ ಪರಿಸ್ಥಿತಿಗಳಲ್ಲಿದ್ದಾರೆ. ಅಂತೆಯೇ 3,96,000 (ಶೇಕಡ 20) ಜನರು 3ನೇ ಹಂತದ ಅಥವಾ ‘ಬಿಕ್ಕಟ್ಟಿನ’ ಪರಿಸ್ಥಿತಿಗಳಲ್ಲಿದ್ದಾರೆ.

ಗಾಝಾದಲ್ಲಿ ಉಂಟಾಗುತ್ತಿರುವ ಬರಗಾಲಕ್ಕೆ ಪ್ರತಿಕ್ರಿಯಿಸಿದ ಐಪಿಸಿಯು ತನ್ನ 59 ಪುಟಗಳ ವರದಿಯಲ್ಲಿ “ಗಾಝಾ ಕ್ಷಾಮಕ್ಕೆ ಶೀಘ್ರವಾಗಿ ಪ್ರತಿಕ್ರಿಯೆಯ ಅಗತ್ಯವಿದೆ. ಈ ಬಗ್ಗೆ ಯಾರ ಮನಸ್ಸಿನಲ್ಲಿಯೂ ಯಾವುದೇ ಸಂದೇಹವೂ ಇರಬಾರದು” ಎಂದು ಹೇಳಿದೆ.

ಆದರೆ ಈ ವರದಿಯನ್ನು “ಸುಳ್ಳು ಮತ್ತು ಪಕ್ಷಪಾತ” ಎಂದು ಇಸ್ರೇಲ್ ತಳ್ಳಿಹಾಕಿದೆ. ಗಾಝಾಗೆ ನೆರವು ವಿತರಣೆಯ ಮೇಲ್ವಿಚಾರಣೆ ಮಾಡುವ ಮಿಲಿಟರಿ ಸಂಸ್ಥೆಯು “ಐಪಿಸಿಯ ವರದಿಯು ಹಮಾಸ್ ಭಯೋತ್ಪಾದಕ ಸಂಘಟನೆಯಿಂದ ಹುಟ್ಟಿದ ಭಾಗಶಃ ಡೇಟಾವನ್ನು ಅವಲಂಬಿಸಿದೆ” ಎಂದು ಹೇಳಿಕೊಂಡಿದೆ.

ಇದನ್ನು ಓದಿದ್ದೀರಾ? ಗಾಝಾದ ಆಸ್ಪತ್ರೆಯ ಮೇಲೆ ಇಸ್ರೇಲ್ ದಾಳಿ: ಬೈಡನ್ ಜೊತೆಗಿನ ಸಭೆ ರದ್ದುಗೊಳಿಸಿದ ಅರಬ್ ದೇಶಗಳ ನಾಯಕರು

ಐಪಿಸಿ ಪ್ರಕಾರ, ಒಂದು ಪ್ರದೇಶವನ್ನು ಕ್ಷಾಮ ಪೀಡಿತ ಪ್ರದೇಶ ಎಂದು ವರ್ಗೀಕರಿಸಬೇಕಾದರೆ, ಕನಿಷ್ಠ ಶೇಕಡ 20ರಷ್ಟು ಜನರು ತೀವ್ರ ಆಹಾರದ ಕೊರತೆಯನ್ನು ಎದುರಿಸಬೇಕಾಗುತ್ತದೆ. ಮೂರು ಮಕ್ಕಳಲ್ಲಿ ಒಬ್ಬರು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರಬೇಕು ಮತ್ತು ಪ್ರತಿ 10,000 ಜನರಲ್ಲಿ ಇಬ್ಬರು ಪ್ರತಿದಿನ ಹಸಿವು ಅಥವಾ ಹಸಿವು ಸಂಬಂಧಿತ ಕಾಯಿಲೆಯಿಂದ ಸಾವನ್ನಪ್ಪಿಬೇಕು.

ಈ ಮಿತಿಯನ್ನು ಮೀರದಿದ್ದರೂ ಕೂಡಾ ಇಲ್ಲಿನ ಮನೆಗಳು ಬರಗಾಲದ ಪರಿಸ್ಥಿಯನ್ನು ಎದುರಿಸುತ್ತಿವೆ. ಇದು ಹಸಿವು ಬಡತನ ಮತ್ತು ಸಾವನ್ನು ವ್ಯಾಖ್ಯಾನಿಸುತ್ತದೆ ಎಂದು ಐಪಿಸಿಯು ತೀರ್ಮಾನ ನೀಡಿದೆ.

“ಗಾಝಾದಲ್ಲಿನ ಬರಗಾಲವು ಇಸ್ರೇಲ್ ಸರ್ಕಾರ ಕೈಗೊಂಡ ಕ್ರಮಗಳ ನೇರ ಪರಿಣಾಮವಾಗಿದೆ ಮತ್ತು ಹಸಿವಿನಿಂದ ಉಂಟಾದ ಸಾವುಗಳು ಯದ್ದಾಪರಾಧಗಳಿಗೆ ಕಾರಣವಾಗಬಹುದು” ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮುಖ್ಯಸ್ಥ ವೋಲ್ಕರ್ ಟರ್ಕ್ ಎಚ್ಚರಿಸಿದ್ದಾರೆ.

“ಇಸ್ರೇಲ್ ಮತ್ತು ಹಮಾಸ್ ನಡುವಿನ ಸುಮಾರು ಎರಡು ವರ್ಷಗಳ ಯುದ್ಧದ ಭೀಕರತೆಯಲ್ಲಿ ಉಂಟಾದ ಮಾನವೀಯ ಬಿಕ್ಕಟ್ಟು ಊಹಿಸಲಾಗದ ಮಟ್ಟವನ್ನು ತಲುಪಿದೆ” ಎಂಬ ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ ಮತ್ತು ಹಲವಾರು ಯುರೋಪಿಯನ್ ರಾಜ್ಯಗಳ ಎಚ್ಚರಿಕೆಗಳನ್ನು ಐಪಿಸಿ ಸಂಶೋಧನೆಯು ಪರಿಗಣಿಸಿದೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

2026ರ ನೊಬೆಲ್ ಸಾಹಿತ್ಯ ಪ್ರಶಸ್ತಿ: ಕೆನಡಾದ ಖ್ಯಾತ ಕವಯಿತ್ರಿ ‘ಆನ್ ಕಾರ್ಸನ್’ ಮುಡಿಗೇರಿದ ಗರಿ

ಸಾಹಿತ್ಯ ಲೋಕದ ಅತ್ಯಂತ ಪ್ರತಿಷ್ಠಿತ ಗೌರವವಾದ 2026ನೇ ಸಾಲಿನ 'ನೊಬೆಲ್ ಸಾಹಿತ್ಯ...

ಅಮೆರಿಕದಲ್ಲಿ ಓದಿದರೂ ಭಾರತೀಯರಿಗೆ ಉದ್ಯೋಗ ಅಸಾಧ್ಯ; ಒಪಿಟಿ ಶುಲ್ಕ 60 ಲಕ್ಷ ರೂ. ಏರಿಸಲು ಟ್ರಂಪ್ ಸರ್ಕಾರ ಚಿಂತನೆ

ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ತೆರಳುವ ಭಾರತೀಯ ವಿದ್ಯಾರ್ಥಿಗಳಿಗೆ ಮುಂದಿನ ದಿನಗಳಲ್ಲಿ ಭಾರೀ...

‘8 ಯುದ್ಧಗಳನ್ನು ನಿಲ್ಲಿಸಿದ್ದೇನೆ, ನನಗೇ ನೊಬೆಲ್ ಕೊಡಿ’: ಟ್ರಂಪ್ ಮತ್ತೆ ಪಟ್ಟು

ನಾರ್ವೇಜಿಯನ್ ನೊಬೆಲ್ ಸಮಿತಿಯು ಈ ಸಾಲಿನ ಪ್ರತಿಷ್ಠಿತ ‘ನೊಬೆಲ್ ಶಾಂತಿ ಪ್ರಶಸ್ತಿ’ಯನ್ನು...