ಸೌಜನ್ಯಳ ನ್ಯಾಯಾಕ್ಕಾಗಿ ಅನುಗ್ರಹ ಬಯಸಿ ಮುಂಬೈನ ಮಣಿಕಂಠ ಭಕ್ತವೃಂದ ಸಾಕಿನಾಕಾ ಕೇಂದ್ರದಲ್ಲಿ ಸಾಮಾಜಿಕ ಕಾರ್ಯಕರ್ತ ಶ್ರೀನಾಥ್ ಶೆಟ್ಟಿ ಇವರು ಮುಂಬೈಯಲ್ಲಿ ಅಯ್ಯಪ್ಪ ಸ್ವಾಮಿಯ ವ್ರತಾಧಾರಿಯಾಗಿ ಮಾಲೆ ಧರಿಸಿದ್ದಾರೆ.
ಸೌಜನ್ಯಳನ್ನು ಅತ್ಯಾಚಾರ ಮಾಡಿದವರಿಗೆ ಶಿಕ್ಷೆ ಆಗುವುದರ ಜೊತೆಗೆ ಸೌಜನ್ಯ ಕುಟುಂಬಕ್ಕೆ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ಶ್ರೀನಾಥ್ ಶೆಟ್ಟಿಯವರು ಅಯ್ಯಪ್ಪ ವ್ರತಾ ಧಾರಿಯಾಗಿ ಮಾಲೆ ಧರಿಸಿರುತ್ತಾರೆ. ಆ ಸಲುವಾಗಿ ಶನಿವಾರ ರಾತ್ರಿ ವ್ರತಾಧಾರಿಗಳ ಶಿಬಿರದಲ್ಲಿ ಪಡಿಪೂಜೆ ಸೇವೆ ನೆರವೇರಿಸಿ ಭಕ್ತರಿಗೆ ಅನ್ನಸಂತರ್ಪಣೆ ನೆರವೇರಿಸಿದರು.
ಸ್ವಾಮಿಯ ಮಹಾಪೂಜೆಯ ಬಳಿಕ ಶಿಬಿರದ ಗುರುಸ್ವಾಮಿ ಹಾಗೂ ಎಲ್ಲ ಅಯ್ಯಪ್ಪ ಸ್ವಾಮಿ ವ್ರತಾಧಾರಿಗಳ ಜೊತೆಗೆ ಸೌಜನ್ಯ ಹೋರಾಟ ಸಮಿತಿ ಮುಂಬೈ ಇದರ ಸಂಚಾಲಕ ಸುರೇಶ್ ಶೆಟ್ಟಿ ಯೆಯ್ಯಾಡಿ ಇವರೆಲ್ಲರ ಸಮ್ಮುಖದಲ್ಲಿ ಸೌಜನ್ಯ ನ್ಯಾಯಕ್ಕಾಗಿ ಪ್ರಾರ್ಥಿಸಿದರು.
ಈ ಸುದ್ದಿ ಓದಿದ್ದೀರಾ? ತೆಲಂಗಾಣದಲ್ಲಿ ಕಾಂಗ್ರೆಸ್‌ಗೆ ಗ್ಯಾರಂಟಿಗಳು ಸಾಥ್ ನೀಡಿವೆ: ಸಚಿವ ಪ್ರಿಯಾಂಕ್ ಖರ್ಗೆ
ಈ ಸಂದರ್ಭದಲ್ಲಿ ಮುಂಬೈ ಸಮಿತಿಯ ಸದಸ್ಯ ಚಂದ್ರಕೃಷ್ಣಶೆಟ್ಟಿ ಬೆರ್ಮೋಟ್ಟು, ದಿನೇಶ್ ಶೆಟ್ಟಿ ಮುದ್ರಾಡಿ, ಸುಬಾಶ್ ಶೆಟ್ಟಿ ಮುನಿಯಾಲ್, ಸಂತೋಷ್ ಶೆಟ್ಟಿ ಡೊಂಬಿವಲಿ, ವಿಶ್ವನಾಥ್ ಪೂಜಾರಿ ಥಾಣೆ ಸೇರಿದಂತೆ ಇತರರು ಇದ್ದರು.