2022 ರಲ್ಲಿ ದೇಶದಲ್ಲಿ 28,522 ಕೊಲೆ ಪ್ರಕರಣಗಳು ದಾಖಲು: ಉತ್ತರ ಪ್ರದೇಶ ಹೆಚ್ಚು

Date:

Advertisements

ದೇಶದಲ್ಲಿ 2022ರಲ್ಲಿ ಒಟ್ಟು 28,522 ಕೊಲೆಗಳ ಎಫ್ಐಆರ್‌ಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲುಗಳ ಬ್ಯೂರೋ(ಎನ್‌ಸಿಆರ್‌ಬಿ) ಅಂಕಿಅಂಶಗಳು ತಿಳಿಸಿವೆ.

ಎನ್‌ಸಿಆರ್‌ಬಿ ಪ್ರಕಾರ ಪ್ರತಿದಿನ ದೇಶದಲ್ಲಿ ಸರಾಸರಿ 78 ಕೊಲೆಗಳು ಅಥವಾ ಪ್ರತಿ ಗಂಟೆಗೆ ಮೂರಕ್ಕಿಂತ ಹೆಚ್ಚು ಕೊಲೆಗಳು ದಾಖಲಾಗುತ್ತಿವೆ. 2021 ರಲ್ಲಿ 29,272 ಮತ್ತು 2020 ರಲ್ಲಿ 29,193 ಪ್ರಕರಣಗಳು ದಾಖಲಾಗಿತ್ತು.

ಪ್ರಕರಣಗಳಲ್ಲಿ ‘ವೈಯಕ್ತಿಕ ದ್ವೇಷ ಅಥವಾ ದ್ವೇಷ’ ಮತ್ತು 1,884 ಪ್ರಕರಣಗಳಲ್ಲಿ ‘ಲಾಭದ ಉದ್ದೇಶಕ್ಕಾಗಿ” ಕೊಲೆಗಳು ನಡೆದಿವೆ ಎಂದು ಎನ್‌ಸಿಆರ್‌ಬಿ ವರದಿಯಲ್ಲಿನ ಅಂಕಿಅಂಶಗಳು ತಿಳಿಸಿವೆ. ಎನ್‌ಸಿಆರ್‌ಬಿ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ವರದಿಯ ಪ್ರಕಾರ ದೇಶಾದ್ಯಂತ ಪ್ರತಿ ಲಕ್ಷ ಜನಸಂಖ್ಯೆಗೆ ಕೊಲೆಯ ಪ್ರಮಾಣ 2.1 ರಷ್ಟಿದೆ.

Advertisements

ಅತೀ ಹೆಚ್ಚು 3491 ಎಫ್‌ಐಆರ್‌ಗಳು ಉತ್ತರ ಪ್ರದೇಶದಲ್ಲಿ ದಾಖಲಾಗಿವೆ. ನಂತರದ ಸ್ಥಾನಗಳಲ್ಲಿ ಬಿಹಾರ (2,930), ಮಹಾರಾಷ್ಟ್ರ (2,295), ಮಧ್ಯ ಪ್ರದೇಶ (1,978) ಮತ್ತು ರಾಜಸ್ಥಾನ (1,834) ರಾಜ್ಯಗಳಿವೆ. ಈ ಐದು ರಾಜ್ಯಗಳಲ್ಲಿ ಒಟ್ಟಾಗಿ ಶೇ. 43.92 ರಷ್ಟು ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ವರದಿಗಳಲ್ಲಿ ತೋರಿಸಿದೆ.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಚಳಿಗಾಲದ ಅಧಿವೇಶನದಲ್ಲಿ ಕಾಂಗ್ರೆಸಿನ ಚಳಿ ಬಿಡಿಸಲಿದೆಯೇ ಬಿಜೆಪಿ?

ಎನ್‌ಸಿಆರ್‌ಬಿ ಪ್ರಕಾರ, 2022 ರಲ್ಲಿ ಅತೀ ಕಡಿಮೆ ಕೊಲೆ ಪ್ರಕರಣಗಳನ್ನು ಹೊಂದಿರುವ ಮೊದಲ ಐದು ರಾಜ್ಯಗಳೆಂದರೆ ಸಿಕ್ಕಿಂ (9), ನಾಗಾಲ್ಯಾಂಡ್ (21), ಮಿಜೋರಾಂ (31), ಗೋವಾ (44), ಮತ್ತು ಮಣಿಪುರ (47).

ಕೇಂದ್ರಾಡಳಿತ ಪ್ರದೇಶಗಳ ಪೈಕಿ, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2022 ರಲ್ಲಿ 509 ಕೊಲೆ ಪ್ರಕರಣಗಳು ದಾಖಲಾಗಿವೆ. ನಂತರದಲ್ಲಿ ಜಮ್ಮು ಮತ್ತು ಕಾಶ್ಮೀರ (99), ಪುದುಚೇರಿ (30), ಚಂಡೀಗಢ (18), ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯು (16), ಅಂಡಮಾನ್ ಮತ್ತು ನಿಕೋಬಾರ್ ದ್ವೀಪ (7), ಲಡಾಖ್ (5) ಮತ್ತು ಲಕ್ಷದ್ವೀಪ (ಶೂನ್ಯ) ಪ್ರಕರಣಗಳು ದಾಖಲಾಗಿವೆ.

ಕಳೆದ ವರ್ಷದಲ್ಲಿ, ಜಾರ್ಖಂಡ್ (ಶೇ.4), ಅರುಣಾಚಲ ಪ್ರದೇಶ (ಶೇ. 3.6), ಛತ್ತೀಸ್‌ಗಢ ಮತ್ತು ಹರಿಯಾಣ (ಎರಡೂ ಸೇರಿ ಶೇ. 3.4), ಅಸ್ಸಾಂ ಮತ್ತು ಒಡಿಶಾ (ಎರಡೂ ಸೇರಿ ಶೇ. 3) ರಾಜ್ಯಗಳು ಶೇಕಡವಾರಿನಲ್ಲಿ ಅತ್ಯಧಿಕ ಕೊಲೆ ಪ್ರಕರಣ ದಾಖಲಾಗಿದೆ.

ವಯಸ್ಸಿನ ಪ್ರಕಾರ, ಕೊಲೆಯಾದವರಲ್ಲಿ ಶೇ. 95.4 ರಷ್ಟು ವಯಸ್ಕರು. 8,125 ಮಹಿಳೆಯರು ಮತ್ತು ಒಂಬತ್ತು ತೃತೀಯ ಲಿಂಗದ ವ್ಯಕ್ತಿಗಳು. ಕೊಲೆಯಾದವರಲ್ಲಿ ಪುರುಷರ ಶೇಕಡವಾರು ಸಂಖ್ಯೆ ಶೇ.70.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಗುಜರಾತ್‌ನ ಗ್ರಾಮವೊಂದರಲ್ಲಿ ಕೊನೆಗೂ ದಲಿತರಿಗೆ ಕ್ಷೌರದಂಗಡಿಗೆ ಮುಕ್ತ ಪ್ರವೇಶ: ಶತಮಾನಗಳ ಅನಿಷ್ಟ ಪದ್ದತಿಗೆ ತೆರೆ

ಗುಜರಾತ್‌ನ ಜುನಾಗಡ್‌ ಜಿಲ್ಲೆಯಲ್ಲಿ ಗಡ್ಡ ಮೀಸೆ ಬೆಳೆಸಿದ್ದಕ್ಕೆ ದಲಿತ ಯುವಕರಿಬ್ಬರ ಜಾತಿ...

ರಾಜಸ್ಥಾನ | ರಸ್ತೆ ಅಪಘಾತ: ಮಹಿಳೆ ಸೇರಿ ನಾಲ್ವರು ಕಾರ್ಮಿಕರ ಸಾವು, ಐವರಿಗೆ ಗಾಯ

ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ವ್ಯಾನ್‌ಗೆ ವಾಹನವೊಂದು ಡಿಕ್ಕಿ ಹೊಡೆದು ಮಹಿಳೆ ಸೇರಿ ನಾಲ್ವರು...

Download Eedina App Android / iOS

X