ಬಿರಿಯಾನಿ ಕೇಳಿದರೆ ಕುಷ್ಕಾ ನೀಡಿದ ಹೋಟೆಲ್ ಮಾಲೀಕ; ₹1000 ದಂಡ ವಿಧಿಸಿದ ನ್ಯಾಯಾಲಯ

Date:

Advertisements

ಬಿರಿಯಾನಿ ನೀಡಿ ಎಂದು ಕೇಳಿದರೆ ಕುಷ್ಕಾ ನೀಡಿದ್ದ ಹೋಟೆಲ್ ಮಾಲೀಕನಿಗೆ ಗ್ರಾಹಕ ನ್ಯಾಯಾಲಯವು ₹1,000 ದಂಡ ವಿಧಿಸಿದೆ. ಜತೆಗೆ, ₹150 ಬಿರಿಯಾನಿ ಹಣವನ್ನು ಗ್ರಾಹಕನಿಗೆ ಹಿಂತಿರುಗಿಸುವಂತೆ ಆದೇಶಿಸಿದೆ.

ನಾಗರಭಾವಿ ನಿವಾಸಿ ಕೃಷ್ಣಪ್ಪ ಎಂಬುವವರು ಮನೆಯಲ್ಲಿ ಅಡುಗೆ ಅನಿಲ ಖಾಲಿಯಾದ ಹಿನ್ನೆಲೆ, 2023ರ ಏಪ್ರಿಲ್ 2ರಂದು ಐಟಿಐ ಲೇಔಟ್‌ನಲ್ಲಿರುವ ಹೋಟೆಲ್ ಪ್ರಶಾಂತ್‌ನಿಂದ ₹150 ಕೊಟ್ಟು ಬಿರಿಯಾನಿ ಪಾರ್ಸೆಲ್ ತಂದಿದ್ದರು.

ಮನೆಗೆ ಬಂದು ಪಾರ್ಸೆಲ್ ತೆರೆದು ನೋಡಿದಾಗ ತಾವು ಆರ್ಡ್‌ರ್ ಮಾಡಿದ್ದ ಬಿರಿಯಾನಿಯಲ್ಲಿ ಚಿಕನ್‌ ಪೀಸ್‌ ಇರಲಿಲ್ಲ. ಈ ಬಗ್ಗೆ ವಿಚಾರಿಸಲು ಕೃಷ್ಣಪ್ಪ ಅವರು ಹೋಟೆಲ್ ಪ್ರಶಾಂತ್ ಮಾಲೀಕನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಬಳಿಕ, ಹೋಟೆಲ್ ಮಾಲೀಕ ಮತ್ತೊಂದು ಬಿರಿಯಾನಿಯನ್ನು ಮನೆಗೆ ಕಳುಹಿಸಿ ಕೊಡುವುದಾಗಿ ತಿಳಿಸಿದ್ದಾರೆ.

Advertisements

ಇದನ್ನು ನಂಬಿ ಕೃಷ್ಣಪ್ಪ ದಂಪತಿ ಸುಮಾರು ಎರಡು ಗಂಟೆ ಊಟ ಮಾಡದೇ ಕಾದು ಕುಳಿತಿದ್ದಾರೆ. ಎಷ್ಟು ಕಾದರೂ ಚಿಕನ್ ಬಿರಿಯಾನಿ ಬರದ ಹಿನ್ನೆಲೆ, ಕುಷ್ಕಾ ತಿಂದೆ ರಾತ್ರಿ ಕಳೆದಿದ್ದಾರೆ.

ಎಪ್ರಿಲ್ 28 ರಂದು ಕೃಷ್ಣಪ್ಪ ಅವರು ಹೋಟೆಲ್ ಮಾಲೀಕನಿಗೆ ಈಗಾಗಿರುವ ತಪ್ಪಿನ ಬಗ್ಗೆ ಕಾನೂನಿನ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ. ಆದರೆ, ಮಾಲೀಕ ಉದಾಸೀನ ತೋರಿ ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದ್ದಾರೆ.

ಈ ಸುದ್ದಿ ಓದಿದ್ದೀರಾ? ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದ ಲೋಕಾಯುಕ್ತ ಅಧಿಕಾರಿಗಳು: ರಾಜ್ಯದ 63 ಕಡೆ ದಾಳಿ

ಕೃಷ್ಣಪ್ಪ ಅವರು ಪ್ರಶಾಂತ್ ಹೋಟೆಲ್ ಮಾಲೀಕ ₹30 ಸಾವಿರ ಪರಿಹಾರ ನೀಡುವಂತೆ ಕೋರಿ ಮೇ ತಿಂಗಳಿನಲ್ಲಿ ಶಾಂತಿನಗರದಲ್ಲಿರುವ ಬೆಂಗಳೂರು ನಗರ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ಹೋಟೆಲ್​ ಮಾಲೀಕರ ವಿರುದ್ಧ ದೂರು ದಾಖಲಿಸಿದ್ದರು.

ಹೋಟೆಲ್​ ಮಾಲೀಕ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ. ವಕೀಲ ಆಗಿರುವ ಕೃಷ್ಣಪ್ಪ ತಾವೇ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದರು.

“ಹೋಟೆಲ್ ಮಾಲೀಕ ಗ್ರಾಹಕನಿಂದ ಬಿರಿಯಾನಿಗೆ ಪೂರ್ತಿ ಹಣ ಪಡೆದು ತಪ್ಪಾದ ಪಾರ್ಸೆಲ್ ನೀಡಿದೆ. ಇದು ತಿಳಿದೋ ತಿಳಿಯದೇಯೋ ಆಗಿರುವ ತಪ್ಪಾಗಿದೆ. ಈ ಬಗ್ಗೆ ಗ್ರಾಹಕ ಹೋಟೆಲ್ ಮಾಲೀಕರಿಗೆ ತಿಳಿಸಿದರೂ, ಕೂಡ ಬದಲಿ ಬಿರಿಯಾನಿ ಪಾರ್ಸೆಲ್ ನೀಡಿಲ್ಲ. ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ಹೋಟೆಲ್‌ ಮಾಲೀಕ ವಿಫಲವಾಗಿದ್ದಾರೆ. ಹಾಗಾಗಿ, ತಪ್ಪಿಗೆ ₹1000 ಪರಿಹಾರ ಜತೆಗೆ ಬಿರಿಯಾನಿಗೆ ಪಾವತಿಸಿದ ₹150 ಹಣವನ್ನು ನೀಡಬೇಕು” ಎಂದು ಗ್ರಾಹಕ ನ್ಯಾಯಾಲಯ ನ್ಯಾಯಾಧೀಶರು 2023ರ ಅ.5 ರಂದು ಆದೇಶಿಸಿದ್ದಾರೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X