ಪೊಲೀಸರ ವೇಷ ಧರಿಸಿದ ದರೋಡೆಕೋರರು ಉದ್ಯಮಿ ಮನೆಯೊಳಗೆ ನುಗ್ಗಿ 700 ಗ್ರಾಂ ಚಿನ್ನಾಭರಣ ಮತ್ತು 60 ಲಕ್ಷ ನಗದು ಹಣ ದೋಚಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಪೀಣ್ಯದಲ್ಲಿ ನಡೆದಿದೆ.
ಉದ್ಯಮಿ ಮನೋಹರ್ ಎಂಬುವವರ ಮನೆಯಲ್ಲಿ ಚಿನ್ನ ಮತ್ತು ನಗದು ಹಣ ಕಳ್ಳತನವಾಗಿದೆ. ಇವರು ಎಚ್ಎಂಟಿ ಲೇಔಟ್ನಲ್ಲಿರುವ ಎಸ್.ಎನ್.ಆರ್ ಪಾಲಿಫಿಲಮ್ಸ್ ಪ್ಯಾಕೇಜಿಂಗ್ ಕಂಪನಿ ಮಾಲೀಕರಾಗಿದ್ದಾರೆ.
ಉದ್ಯಮಿ ಮನೋಹರ ಅವರು ಮನೆಯಲ್ಲಿ ಇಲ್ಲದ ಸಮಯ ನೋಡಿಕೊಂಡ 7 ಜನ ಖದೀಮರು, ಪೊಲೀಸರ ವೇಷ ಧರಿಸಿ ರಾತ್ರಿ 7:30ರ ಸುಮಾರಿಗೆ ಮನೆಗೆ ನುಗ್ಗಿದ್ದಾರೆ. ಈ ಸಮಯದಲ್ಲಿ ಮನೆಯಲ್ಲಿ ಮನೋಹರ್ ಪತ್ನಿ ಸುಜಾತಾ ಮತ್ತು ಮಗ ರೂಪೇಶ್ ಇಬ್ಬರಿದ್ದರು.
ಪೊಲೀಸ್ ವೇಷ ಧರಿಸಿ ಮನೆಗೆ ನುಗ್ಗಿದ ಖದೀಮರು ಏಕಾಏಕಿ ಡ್ರ್ಯಾಗರ್ ಮತ್ತು ಮಚ್ಚು ತೋರಿಸಿ ಹಣ ಮತ್ತು ಚಿನ್ನ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಈ ವೇಳೆ, ರೂಪೇಶ್ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬಿರಿಯಾನಿ ಕೇಳಿದರೆ ಕುಷ್ಕಾ ನೀಡಿದ ಹೋಟೆಲ್ ಮಾಲೀಕ; ₹1000 ದಂಡ ವಿಧಿಸಿದ ನ್ಯಾಯಾಲಯ
700 ಗ್ರಾಂ ಚಿನ್ನಾಭರಣ ಹಾಗೂ 60 ಲಕ್ಷ ನಗದು ದರೋಡೆ ಮಾಡಿದ ದರೋಡೆಕೋರರು ಮನೆಯಲ್ಲಿನ ಸಿಸಿಟಿವಿ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ.
ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.