ಕಮಲನಗರ ತಾಲೂಕಿನ ಸುತ್ತಮುತ್ತಲಿರುವ ಹಳ್ಳಿಗಳಲ್ಲಿ ಅನಧಿಕೃತವಾಗಿ ಕಲ್ಕತ್ತಾ ನಕಲಿ ವೈದ್ಯರು ನಡೆಸುತ್ತಿರುವ ಕ್ಲಿನಿಕ್ ಹಾಗೂ ಲ್ಯಾಬೊರೇಟರಿಗಳ ಮೇಲೆ ಮಂಗಳವಾರ ಬೀದರ ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
“ಕೆ.ಪಿ.ಎಂ.ಇ. ಕಾಯ್ದೆ ಪ್ರಕಾರ ನೋಂದಣಿ ಮಾಡದೆ ಕ್ಲಿನಿಕ್ ನಡೆಸುತ್ತಿರುವ 2 ಕ್ಲಿನಿಕ್‌ಗಳಿಗೆ ಕೆ.ಪಿ.ಎಂ.ಇ. ಅಡಿಯಲ್ಲಿ ನೋಂದಣಿ ಮಾಡಿಸಲು ನೋಟಿಸ್ ನೀಡಲಾಗಿದೆ. ಕಲ್ಕತ್ತಾ ನಕಲಿ ವೈದ್ಯರು ನಡೆಸುತ್ತಿರುವ 3 ಕ್ಲಿನಿಕ್ ಹಾಗೂ 1 ಲ್ಯಾಬೊರೇಟರಿಯನ್ನು ಮುಚ್ಚಲಾಗಿದೆ” ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿ ಡಾ.ದಿಲೀಪ ಡೋಂಗ್ರೆ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ ಕಚೇರಿ ಎದುರು ಕಾರಂಜಾ ಸಂತ್ರಸ್ತರಿಂದ ಸಾಂಕೇತಿಕ ಧರಣಿ
ಈ ವೇಳೆ ಬೀದರ ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ದಿಲೀಪ ಡೋಂಗ್ರೆ, ಔರಾದ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಗಾಯತ್ರಿ, ಕೆ.ಪಿ.ಎಂ.ಇ ವಿಷಯ ನಿರ್ವಾಹಕ ಮಹೇಶ್ವರ್ ರೆಡ್ಡಿ, ಗ್ರೂಪ್-ಡಿ ನೌಕರ ಯಾಸೀನ್ ಖಾನ್, ಕಮಲನಗರ ಪಿ.ಎಸ್.ಐ, ಕಮಲನಗರ ಸಿ.ಪಿ.ಐ, ತಾ.ಪಂ.ಇ.ಒ. ಮಾಣಿಕರಾವ್ ಪಾಟೀಲ್ ಅವರು ಒಳಗೊಂಡ ತಂಡ ದಾಳಿ ನಡೆಸಿದೆ.