ಚಿಕ್ಕಮಗಳೂರಿನ ವಕೀಲ ಪ್ರೀತಮ್ ಎನ್.ಟಿ ಅವರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡಿದ ಪಿಎಸ್ಐ ಸೇರಿ ಆರು ಮಂದಿ ಪೊಲೀಸ್ ಸಿಬ್ಬಂದಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಜಯಪುರ ಜಿಲ್ಲೆಯ ಮುದ್ದೆಬಿಹಾಳದಲ್ಲಿ ವಕೀಲರು ಪ್ರತಿಭಟನೆ ನಡೆಸಿದ್ದಾರೆ.
ಮಂಗಳವಾರ ನ್ಯಾಯಾಲಯದಲ್ಲಿ ಕಲಾಪಗಳನ್ನು ಬಹಿಷ್ಕರಿಸಿ ವಕೀಲರು ಪ್ರತಿಭಟನೆ ನಡೆಸಿದ್ದು, ತಹಶೀಲ್ದಾರ್ ಬಲರಾಮ ಕಟ್ಟಿಮನಿ ಅವರಿಗೆ ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. “ಕಾನೂನುಗಳನ್ನು ಗೌರವಿಸುವುದು, ರಕ್ಷಣೆ ಮಾಡುವುದು ಮತ್ತು ಅವುಗಳನ್ನು ಕಾಪಾಡುವ ಜವಾಬ್ದಾರಿ ಪೊಲೀಸರಿಗಿದೆ. ಅದು ಬಿಟ್ಟು ಕಾನೂನು ಕೈಗೆ ತೆಗೆದುಕೊಳ್ಳುವ ಯಾವ ಅಧಿಕಾರವೂ ಪೊಲೀಸರಿಗಿಲ್ಲ. ಚಿಕ್ಕಮಗಳೂರು ವಕೀಲನ ಮೇಲೆ ಅವಾಚ ಶಬ್ದಗಳಿಂದ ನಿಂದಿಸಿರುವ ಪೊಲೀಸರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸಿದ್ದಾರೆ.
“ಸರ್ಕಾರ ಈ ವಿಷಯದಲ್ಲಿ ಸಿಐಡಿ ತನಿಖೆ ಪ್ರಕರಣವಹಿಸಿರುವುದನ್ನು ಸ್ವಾಗತಿಸುತ್ತೇವೆ. ಆದರೆ ತನಿಕಾ ಸಂಸ್ಥೆಯವರು ಆರೋಪಿಗಳು ಪೊಲೀಸರು, ಅಧಿಕಾರಿ ಎಂದು ನೋಡದೆ ನಿಷ್ಪಪಕ್ಷಪಾತವಾಗಿ ತನಿಖೆ ಮಾಡಿ ವಕೀಲರ ಸಂಘಕ್ಕೆ ನ್ಯಾಯ ಕೊಡಿಸಬೇಕು. ಪೊಲೀಸರ ವಿರುದ್ಧ ತನಿಖೆಗೆ ವಿಳಂಬ ಮಾಡಿದ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ದವು ಕ್ರಮ ಜರುಗಿಸಬೇಕು” ಎಂದು ಒತ್ತಾಯಿಸಿದ್ದಾರೆ.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಪದಾಧಿಕಾರಿಗಳಾದ ಎಚ್ ಜೆ ನಾಡಗೌಡ, ಪಿ ಬಿ ಗೌಡರ, ಬಿ ಪಿ ಮ್ಯಾಗೇರಿ, ಹಿರಿಯ ವಕೀಲರಾದ ಎಂ ಹೆಚ್ ಹಾಲಣ್ಣವರ್, ಜೆ ಎ ಚಿನಿವಾರ,ಆರ್ ಬಿ ಪಾಟೀಲ, ಬಿ ಆರ್ ನಾಡಗೌಡ, ಎಂ ಎ ಮುದ್ದೇಬಿಹಾಳ, ಎಂ ಎಸ್ ನಾವದಗಿ, ಎಸ್ ಎಂ ಗುಡಿದಿನ್ನಿ, ಬಿ ಎಂ ಮುಂದಿನಮನಿ, ಎಚ್ ವೈ ಪಾಟೀಲ, ಎನ್ ಬಿ ಮುದ್ನಾಳ್, ಎನ್ ಜಿ ಕುಲಕರ್ಣಿ, ಎಂ ಬಿ ಹುಡೆದ, ಎಸ್ ಎಂ ಕಿಣಗಿ, ಎನ್, ಆರ್, ಮೊಕಾಶಿ, ಎಸ್ ಎಂ ಚೇಲ್ಲಳಶೆಟ್ಟರ, ಎಸ್ ಎಂ ಬಾಗಲಕೋಟೆ, ಚೇತನ ಶಿವಶಿಂಪಿ, ಪಿ ಎಂ ಪಾಟೀಲ, ಮಹಾಂತಗೌಡ ಬಿರಾದಾರ, ಕೆ ಬಿ ದೊಡ್ಡಮನಿ, ಹಸೀನಾ ಅನಂತಪುರ, ರಶ್ಮಿ ಕುಲಕರ್ಣಿ, ಆರ್ ಬಿ ಪಾಟೀಲ, ಸಂತೋಷ ಎಚ್ ಎಂ, ಎಚ್ ಎಲ್ ಸರೋರ ಇತರರು ಇದ್ದರು.