ಕೊಪ್ಪಳ | ವಿಜಯನಗರ ಸಾಮ್ರಾಜ್ಯದ ಮೂಲ ನೆಲೆ ಕುಮ್ಮಟದುರ್ಗ; ಶಾಸಕ ಗಾಲಿ ಜನಾರ್ದನರೆಡ್ಡಿ

Date:

Advertisements

ವಿಶ್ವದ ಶ್ರೀಮಂತ ರಾಜ ಮನೆತನಗಳಲ್ಲಿ ಒಂದಾದ ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಮೂಲ ಬೇರು ಕುಮ್ಮಟದುರ್ಗ ಎಂದು ಗಂಗಾವತಿ ಕ್ಷೇತ್ರದ ಶಾಸಕ ಜನಾರ್ದನರೆಡ್ಡಿ ಹೇಳಿದರು. ಇತ್ತೀಚೆಗೆ ಕುಮ್ಮಟದುರ್ಗದಲ್ಲಿ ಕಾರಟಗಿಯ ಗಂಡುಗಲಿ ಕುಮಾರರಾಮನ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ʼಕುಮ್ಮಟದುರ್ಗದಲ್ಲಿ ಕನ್ನಡ ರಾಜ್ಯೋತ್ಸವʼ ಎಂಬ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ವೈಭಯುತ ವಿಜಯನಗರ ಸಾಮ್ರಾಜ್ಯವನ್ನು ಕಟ್ಟಬೇಕೆಂಬ ಕನಸನ್ನು ಕಂಡಿದ್ದ ರಾಜ ಗಂಡುಗಲಿ ಕುಮಾರರಾಮ. ಆದರೆ, ಅದು ಕೈಗೂಡದಿದ್ದಾಗ ತನ್ನ ಸಹೋದರಿಯ ಮಕ್ಕಳ ಮೂಲಕ ವಿಜಯನಗರ ಸಾಮ್ರಾಜ್ಯ ತಲೆಯೆತ್ತುವಂತೆ ಮಾಡಿದ. ಹೀಗಾಗಿ ಈ ಸಾಮ್ರಾಜ್ಯದ ತಾಯಿ ಬೇರು ಅಂದರೆ ಅದು ಕುಮ್ಮಟದುರ್ಗ ಎಂದರು.

ಅದೇ ರೀತಿ ಈ ಐತಿಹಾಸಿಕ ತಾಣವನ್ನು ಪ್ರವಾಸೋದ್ಯಮ ಸ್ಥಳವನ್ನಾಗಿಸಲು ಹಾಗೂ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಮತ್ತು ಕಾರ್ಯಕ್ರಮ ಆಯೋಜಕರ ಬೇಡಿಕೆಯಂತೆ ಹಂಪಿ ವಿಶ್ವವಿದ್ಯಾಲಯದಲ್ಲಿ ಗಂಡುಗಲಿ ಕುಮಾರರಾಮ ಅಧ್ಯಯನ ಪೀಠ ಸ್ಥಾಪನೆ, ಗಂಡುಗಲಿ ಕುಮಾರರಾಮ ಅಭಿವೃದ್ಧಿ ಪ್ರಾಧಿಕಾರ, ಜಬ್ಬಲ ಗುಡ್ಡ ಗ್ರಾಮದಲ್ಲಿ ಗಂಡುಗಲಿ ಕುಮಾರರಾಮನ ಮೂರ್ತಿ ಪ್ರತಿಷ್ಠಾಪನೆ, ಕುಮ್ಮಟದುರ್ಗವನ್ನು ಪುರಾತತ್ವ ಇಲಾಖೆಯ ಅಡಿಯಲ್ಲಿ ತರಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

Advertisements

ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ವಿಧಾನಪರಿಷತ್ ಸದಸ್ಯರಾದ ಹೇಮಲತಾ ನಾಯಕರವರು ಕುಮ್ಮಟದುರ್ಗವನ್ನು ನಾನು ನೋಡಿಯೇ ಇರಲಿಲ್ಲ. ಇಷ್ಟು ಇತಿಹಾಸ ಪ್ರಸಿದ್ದವಾದ ತಾಣಕ್ಕೆ ರಕ್ಷಣೆ ಇಲ್ಲದಾಗಿದೆ. ಮೂಲಭೂತ ಸೌಕರ್ಯಗಳು ಮರಿಚಿಕೆಯಾಗಿದ್ದು ಮುಂದಿನ ದಿನಗಲ್ಲಿ ನಮ್ಮ ಅನುದಾನದಲ್ಲಿ ಹಾಗೂ ಶಾಸಕರ ಅನುದಾನದಲ್ಲಿ ಇದನ್ನು ಉತ್ತಮ ಪ್ರವಾಸಿ ತಾಣವಾಗಿ ರೂಪಿಸಲು ಪ್ರಯತ್ನಿಸಲಾಗುವದು ಎಂದು ಹೇಳಿದರು.

ವಿಶೇಷ ಉಪನ್ಯಾಸಕರಾಗಿ ಆಗಮಿಸಿದ್ದ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನ ಉಪನ್ಯಾಸಕ ಹಾಗೂ ಸಂಶೋಧಕ ಡಾ. ಮೋಹನ್ ಚಂದ್ರಗುತ್ತಿ ಮಾತನಾಡಿ, ಭಾರತದ ಇತಿಹಾಸದಲ್ಲಿ ಜನರಿಂದ ದೇವರಂತೆ ಪೂಜಿಸಲ್ಪಡುವ ಏಕೈಕ ರಾಜನೆಂದರೆ ಅದು ಗಂಡುಗಲಿ ಕುಮಾರರಾಮ. ಆದರೆ, ಬಹುತೇಕ ಎಲ್ಲಾ ಕಡೆಗಳಲ್ಲಿಯೂ ಗಂಡುಗಲಿ ಕುಮಾರರಾಮನ ಮುಖವನ್ನ ಮಾತ್ರ ಪೂಜಿಸಲಾಗುತ್ತದೆ. ಹಾಗೆಯೇ ಕುಮಾರರಾಮನನ್ನ ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಜನರಿಗಿಂತ ಹೆಚ್ಚಾಗಿ ಆರಾಧಿಸುವ ಜನರು ನಮ್ಮ ಮಲೆನಾಡ ಭಾಗದಲ್ಲಿ ಇದ್ದಾರೆ. ಅದರಲ್ಲೂ ವಿಶೇಷವಾಗಿ ಈಡಿಗ ಜನಾಂಗದವರ ಮನೆದೇವರು ಕುಮಾರರಾಮನಾಗಿದ್ದಾನೆ.

ಶಿವಮೊಗ್ಗ, ಸೊರಬ, ತುಮಕೂರು, ಉಡುಪಿ, ಪಾವಗಡ ಸೇರಿದಂತೆ ಹಲವು ಕಡೆ ಕುಮಾರರಾಮನ ಹೆಸರಿನಲ್ಲಿ ವಾರಗಟ್ಟಲೆ ಜಾತ್ರೆಗಳು ನಡೆಯುತ್ತವೆ. ನಮ್ಮ ಪೂರ್ವಜರ ಮೂಲನೆಲೆಯು ಈ ಕುಮ್ಮಟದುರ್ಗವೇ ಆಗಿತ್ತು ಎಂದರು.

ಇನ್ನೊಬ್ಬ ವಿಶೇಷ ಉಪನ್ಯಾಸಕ ಗಂಗಾವತಿ ಎಸ್.ಕೆ.ಎನ್.ಜಿ ಕಾಲೇಜಿನ ಪ್ರಾಚಾರ್ಯರು ಹಾಗೂ ಸಂಶೋಧಕರಾದ ಡಾ.ಜಾಜಿ ದೇವೇಂದ್ರಪ್ಪ ಮಾತನಾಡಿ, ಗಂಡುಗಲಿ ಕುಮಾರರಾಮನನ್ನ ಒಬ್ಬ ರಾಜ ಎಂದು ಕರೆಯುವುದಕ್ಕಿಂತ ಅವನನ್ನ ಜನರ ಸರದಾರ ಎಂದು ಕರೆಯುವುದು ಸೂಕ್ತ ಎನಿಸುತ್ತದೆ. ಏಕೆಂದರೆ ಅವನೊಬ್ಬ ಜಾತ್ಯಾತೀತ ರಾಜ. ಅವನ ಹೆಸರಿನಲ್ಲಿ ಅನೇಕ ದೇವಸ್ಥಾನಗಳಿವೆ. ಸಂಡೂರು, ಗಂಗಾವತಿ, ಕೊಪ್ಪಳ, ಮಲೆನಾಡು ಭಾಗದ ಬಹುತೇಕ ಎಲ್ಲಾ ಜಾತಿಯ ಜನರು ಕೂಡಾ ಕುಮಾರರಾಮನ ಆರಾಧಕರಾಗಿದ್ದಾರೆ.

ಅಷ್ಟೇ ನೆರೆಯ ಆಂಧ್ರಪ್ರದೇಶದಲ್ಲಿಯೂ ಕೂಡಾ ಕುಮಾರರಾಮನ ಆರಾಧನೆ ನಡೆಯುತ್ತದೆ ಎಂದು ಹೇಳಿದರು. ಹಾಗೆಯೇ ಈ ಕುಮ್ಮಟದುರ್ಗವನ್ನು ಸಂರಕ್ಷಣೆ ಮಾಡಬೇಕಾದ ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ಅದರಲ್ಲೂ ವಿಶೇಷವಾಗಿ ಕುಮಾರರಾಮನ ವೀರಗಲ್ಲುಗಳು, ಕುದುರೆಕಲ್ಲುಗಳು ಇನ್ನಿತರ ಸ್ಮಾರಕಗಳನ್ನು ರಕ್ಷಣೆ ಮಾಡಬೇಕಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಗದ್ದೆಪ್ಪ ನಾಯಕ, ರಮೇಶ ನಾಡಿಗೇರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ರಾಮುನಾಯಕ, ಯಮನೂರ ಚೌಡಕಿ, ತಾಲೂಕ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ವ್ಯವಸ್ಥಾಪಕ ರಮೇಶ, ಗ್ರಾಮ ಪಂಚಾಯತಿ ಅಧ್ಯಕ್ಷ ಯಮನೂರಪ್ಪ ಸಂಗಟಿ, ವೀರೇಶ ತಳವಾರ, ಮೋಹನ ಕಿಶೋರ, ಮನೋಹರಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಸೋಮನಾಥ ದೊಡ್ಡಮನಿ, ಮಂಜುನಾಥ ಬಾದನಹಟ್ಟಿ, ಮಸ್ಕಿಯ ಅಶೋಕ ದಿದ್ದಗಿ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

ಬೆಳ್ತಂಗಡಿ | ಸೌಜನ್ಯ ಹೋರಾಟಗಾರರ ಮೇಲೆ ನಿರಂತರ ಎಫ್‌ಐಆರ್: ಗಿರೀಶ್ ಮಟ್ಟಣ್ಣನವರ್ ಆಕ್ರೋಶ

ಗುರುವಾರ ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ...

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

Download Eedina App Android / iOS

X