ಉಡುಪಿ | ದಲಿತರು ಹಿಂದೆಯೂ ಹಿಂದುಗಳಾಗಿರಲಿಲ್ಲ, ಮುಂದೆಯೂ ಹಿಂದುಗಳಾಗುವುದಿಲ್ಲ: ಜಯನ್ ಮಲ್ಪೆ

Date:

Advertisements

ದಲಿತರು ಹಿಂದೆಯೂ ಹಿಂದೂಗಳಾಗಿರಲಿಲ್ಲ, ಮುಂದೆಯೂ ಹಿಂದೂಗಳಾಗುವುದಿಲ್ಲ. ದಲಿತರು ತಮ್ಮ ಮನೆಗಳಲ್ಲಿರುವ ದೇವರ ಪೋಟೋ ತೆಗೆದು, ಬುದ್ದ ಚಿಂತನೆಯನ್ನು ಅಳವಡಿಸಿಕೊಂಡರೆ ಮಾತ್ರ ಸಮಾಜ ಪರಿವರ್ತನೆಯಾಗುತ್ತದೆ. ಅಭಿವೃದ್ಧಿ ಹೊಂದುತ್ತದೆ ಎಂದು ದಲಿತ ಚಿಂತಕ ಹಾಗೂ ಜನಪರ ಹೋರಾಟಗಾರ ಜಯನ್ ಮಲ್ಪೆ ಹೇಳಿದ್ದಾರೆ.

ಉಡುಪಿ ಜಿಲ್ಲೆಯ ಮಲ್ಪೆಯಲ್ಲಿ ಅಂಬೇಡ್ಕರ್ ಯುವಸೇನೆ ಆಯೋಜಿಸಿದ್ದ ‘ಅಂಬೇಡ್ಕರ್‌ ಪರಿನಿಬ್ಬಾಣ ದಿನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಶತಮಾನಗಳಿಂದ ದಲಿತರು ತಮ್ಮ ಮನೆಗಳಲ್ಲಿ ದೇವರ ಪೋಟೋಗೆ ಪೂಜೆ ಮಾಡಿದರೂ, ಅವರ ಮೇಲಿನ ದೌರ್ಜನ್ಯ, ಅಸ್ಪೃಶ್ಯತೆ, ಕೊಲೆ, ಸುಲಿಗೆ, ಅತ್ಯಾಚಾರ, ಸಾವು, ನೋವುಗಳನ್ನು ತಡೆಗಟ್ಟಲು ಸಾಧ್ಯವಾಗಿಲ್ಲ. ಅಂಬೇಡ್ಕ‌ರ್ ಎಲ್ಲ ದೇವಾಧಿದೇವತೆಗಳ ಸಂಹಾರಕರಾಗಿ ಮುನ್ನಡೆಯುತ್ತಾರೆ ಎಂದ ಜಯನ್ ಮಲ್ಪೆ, ವೈದಿಕರು ದಲಿತರ ರಾಜಕೀಯ ಅಧಿಕಾವನ್ನು ಕಬಳಿಸಿ, ಅವರನ್ನು ಶಾಶ್ವತ ಗುಲಾಮರನ್ನಾಗಿಸಲೆಂದೇ ದೇವರನ್ನು ಸೃಷ್ಟಿಸಿದ್ದಾರೆ” ಎಂದರು.

ಹೋರಾಟಗಾರ ಸುರೇಶ್ ಪಾಲನ್ ಮಾತನಾಡಿ, “ಬದಲಾಗುತ್ತಿರುವ ಸಾಮಾಜಿಕ ಮೌಲ್ಯಗಳು, ಮರೆಯಾಗುತ್ತಿರುವ ಜೀವನಕ್ರಮಗಳು, ತಲ್ಲಣಗೊಳ್ಳುತ್ತಿರುವ ಸಿದ್ಧಾಂತಗಳ ರೋಗಕ್ಕೆ ಅಂಬೇಡ್ಕ‌ರ್ ವಿಚಾರಧಾರೆ ಮದ್ದು ಇದ್ದಂತ್ತೆ. ಜನರ ಬದುಕುಗಳನ್ನು ಅಸನುಮಾಡಲು ಪ್ರಯತ್ನಿಸಿದ ಭಾರತದ ಏಕೈಕ ಭಾಗ್ಯವಿಧಾತ ಅಂಬೇಡ್ಕರ್” ಎಂದರು.

Advertisements

ಹಿರಿಯ ದಲಿತ ಮುಖಂಡ ಗಣೇಶ್ ನೆರ್ಗಿ ಮಾತನಾಡಿ, “ದಲಿತ ಚಳುವಳಿಯ ನಾಯಕತ್ವ ಪಾಳೇಗಾರಿಕೆಯ ಸಂಸ್ಕೃತಿಯಿಂದ ಕೂಡಿದೆ. ಒಂದು ಸಮಸ್ಯೆಯ ಕುರಿತು ಹೋರಾಡಲು ದಲತ ಜನಾಂಗ ಒಂದಾಗಿ ಸಾಮೂಹಿಕ ನಾಯಕತ್ವ ಹುಟ್ಟಹಾಕಬೇಕಿದೆ.ದಲಿತ ನಾಯಕರು ವಯಕ್ತಿಕ ದ್ವೇಷ, ಅಸೂಯೆ ಬಿಡದೆ ಸಂಘಟನೆಗಳ ವಿಘಟನೆಗೆ ಕೊನೆಯಿಲ್ಲ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಲ್ಯಾನ್ ವಹಿಸಿದ್ದರು. ಯುವನಾಯಕರಾದ ಸಂತೋಷ್ ಕಪ್ಪೆಟ್ಟು, ಕೃಷ್ಣ ಶ್ರೀಯಾನ್, ಪ್ರಸಾದ್ ಮಲ್ಪೆ, ಅರುಣ್ ಸಾಲ್ಯಾನ್, ದೀಪಕ್ ಕೊಡವೂರು, ಶಂಕರ್ ನೆರ್ಗಿ, ವಿನಯ ಬಲರಾಮನಗರ, ಭಗವಾನ್ ಮಲ್ಪೆ, ಶಶಿಕಲಾ ತೊಟ್ಟಂ, ಪ್ರಮೀಳ ಹರೀಶ್, ಕಲಾವತಿ, ಸಂಕಿ ತೊಟ್ಟಂ, ವಿನೋದ ಜಯರಾಜ್, ಸಂಧ್ಯಾ ನೆರ್ಗಿ,ಶಶಿ ತೊಟ್ಟಂ ಮಾ.ಗ್ಯಾಬ್ರಿಯಲ್, ಮಾ.ಹರ್ಷಿಲ್ ಉಪಸ್ಥಿತರಿದ್ದರು. ಬಿ.ಎನ್.ಪ್ರಶಾಂತ್ ಸ್ವಾಗತಿಸಿ, ಸುಶೀಲ್ ಕುಮಾರ್ ಕೊಡವೂರು ವಂದಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X