ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಜಿಲ್ಲೆಯ ಕುಂದಗೋಳ ತಾಲೂಕಿನ ಕಳಸ ಗ್ರಾಮದಲ್ಲಿ ಮೂರು ತಿಂಗಳ ಕಾಲ ಉಚಿತ ಹೊಲಿಗೆ ತರಬೇತಿಯನ್ನು ಯಶಸ್ವಿಗೊಳಿಸಿದ ತರಬೇತುದಾರರಿಗೆ ಪ್ರಮಾಣ ಪತ್ರ ನೀಡಿತು.
ಈ ಸಮಯದಲ್ಲಿ ಕುಂದಗೋಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಹೇಶ್ ಕುರಿ ಮಾತನಾಡಿ, ಬಡ ಹೆಣ್ಣುಮಕ್ಕಳಿಗಾಗಿ ಹೊಲಿಗೆ ತರಬೇತಿಯನ್ನು ಹಮ್ಮಿಕೊಂಡಿದ್ದು ಸಂತಸದ ವಿಚಾರ. ಇಂತಹ ಸಾಮಾಜಿಕ ಕಾರ್ಯಗಳಿಗೆ ನಮ್ಮ ಸಹಕಾರ ಸದಾ ಇರುತ್ತದೆ. ಎಲ್ಲರೂ ಇಂತಹ ತರಬೇತಿಗಳ ಸದುಪಯೋಗ ಪಡಿಸಿಕೊಂಡು ಸಮಾಜವನ್ನು ನಿರುದ್ಯೋಗ ರಹಿತವನ್ನಾಗಿ ರೂಪಿಸಲು ಮುಂದಾಗಬೇಕಿದೆ.
ನಾವು ಕೆಲಸಗಳು ಸಿಗುವತನಕ ಕಾಯ್ದು ಕೂಡುವ ಬದಲು ನಾವೆ ಕೆಲಸ ಹುಡುಕುವುದರಲ್ಲಿ ಸಮಯ ವ್ಯರ್ಥ ಮಾಡುವ ಬದಲು ಸ್ವಂತ ಉದ್ಯೋಗಿಗಳಾಗಿ ರೂಪುಗೊಳ್ಳುವುದನ್ನು ಕಲಿಯಬೇಕಿದೆ ಎಂದು ತಿಳಿಸಿದರು. ಈ ವೇಳೆ ಗ್ರಾಕೂಸ ತಾಲೂಕು ಅಧ್ಯಕ್ಷ್ಯೆಸ್ಯಾಭಿರಾ ಇನ್ನಿತರರು ಉಪಸ್ಥಿತರಿದ್ದರು.