‘ಮೇರಾ ನಾಮ್ ಜೋಕರ್’ ಖ್ಯಾತಿಯ ಬಾಲಿವುಡ್ ಹಿರಿಯ ನಟ ʻಜೂನಿಯರ್ ಮೆಹಮೂದ್ʼ ನಿಧನ

Date:

‘ಮೇರಾ ನಾಮ್ ಜೋಕರ್’ ಸಿನಿಮಾ ಖ್ಯಾತಿಯ ಹಾಗೂ ‘ಜೂನಿಯರ್ ಮೆಹಮೂದ್’ ಎಂದೇ ಪರಿಚಿತರಾಗಿದ್ದ ಬಾಲಿವುಡ್ ನಟ ನಯೀಮ್ ಸಯ್ಯದ್ ಮಾರಕ ಕ್ಯಾನ್ಸರ್‌ನಿಂದ ನಿಧನರಾಗಿದ್ದಾರೆ.

70ರ ದಶಕದಲ್ಲಿ ತಮ್ಮ ನಟನೆ ಮತ್ತು ಹಾಸ್ಯದ ಮೂಲಕ ಪ್ರೇಕ್ಷಕರನ್ನು ಮೆಹಮೂದ್ ರಂಜಿಸಿದ್ದರು. ಅವರಿಗೆ 67 ವರ್ಷ ವಯಸ್ಸಾಗಿತ್ತು.

ಹಲವು ದಿನಗಳಿಂದ 4ನೇ ಹಂತದ ಕ್ಯಾನ್ಸರ್‌ ವಿರುದ್ಧ ಮೆಹಮೂದ್ ಹೋರಾಡುತ್ತಿದ್ದರು. ಕಳೆದ ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ತಡ ರಾತ್ರಿ 2 ಗಂಟೆ ಸುಮಾರಿಗೆ ಮುಂಬೈನ ಅವರ ನಿವಾಸದಲ್ಲಿ ನಿಧನರಾಗಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

5 ದಶಕಗಳಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ಮೆಹಮೂದ್ 250ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದರು. ಮೆಹಮೂದ್ ಅವರು ಪತ್ನಿ, ಇಬ್ಬರು ಪುತ್ರರು, ಸೊಸೆ ಮತ್ತು ಮೊಮ್ಮಗನನ್ನು ಅಗಲಿದ್ದಾರೆ.

ಶುಕ್ರವಾರ ಮಧ್ಯಾಹ್ನದ ಪ್ರಾರ್ಥನೆಯ ನಂತರ ಸಾಂತಾಕ್ರೂಜ್ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

“ಮೆಹ್‌ಮೂದ್ ಅವರು ಕಳೆದ ಎರಡು ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಇದ್ದಕ್ಕಿದ್ದಂತೆ ಅವರ ದೇಹದ ತೂಕ ಭಾರೀ ಇಳಿಕೆಯಾಗತೊಡಗಿತು. ಬಳಿಕ, ವೈದ್ಯಕೀಯ ಪರೀಕ್ಷೆ ನಡೆಸಿದಾಗ ಅವರಿಗೆ ಮಾರಕ ಕ್ಯಾನ್ಸರ್ ಇರುವುದು ಗೊತ್ತಾಗಿದೆ. ವೈದ್ಯಕೀಯ ಚಿಕಿತ್ಸೆ ಮಾಡುವಾಗಲೇ ಕಾನ್ಸರ್ ನಾಲ್ಕನೇ ಹಂತಕ್ಕೆ ತಲುಪಿತ್ತು” ಎಂದು ಅವರ ಆಪ್ತ ಸ್ನೇಹಿತ ಸಲಾಂ ಖಾಜಿ ಹೇಳಿದ್ದಾರೆ.

ಮೆಹಮೂದ್ ಅವರ ಜೀವನ

ಜೂನಿಯರ್ ಮೆಹಮೂದ್ ಅವರ ನಿಜವಾದ ಹೆಸರು ನಯೀಮ್ ಸೈಯದ್. ಅವರು ನವೆಂಬರ್ 15, 1956 ರಂದು ಜನಿಸಿದರು. ಅವರು 1967ರಲ್ಲಿ ಸಂಜೀವ್ ಕುಮಾರ್ ಅವರ ‘ನೌನಿಹಾಲ್’ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಆಗ ಅವರಿಗೆ ಕೇವಲ 11 ವರ್ಷವಾಗಿತ್ತು.

ಸುಮಾರು 250 ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಮೆಹಬೂಬ್‌ ಅವರು ‘ಕಟಿ ಪತಂಗ್’, ‘ಬ್ರಹ್ಮಚಾರಿ’, ‘ಮೇರಾ ನಾಮ್ ಜೋಕರ್’, ‘ಹಾಥಿ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದರು.

ನೌನಿಹಾಲ್, ಕಾರವಾನ್, ಸುಹಾಗ್ ರಾತ್, ಕಟಿ ಪತಂಗ್, ಹರೇ ರಾಮ ಹರೇ ಕೃಷ್ಣ, ಗೀತ್ ಗಾತಾ ಚಲ್, ಇಮಾಂದಾರ, ಆಜ್ ಕಾ ಅರ್ಜುನ್, ಗುರುದೇವ್, ಛೋಟೆ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಸೆಳೆದಿದ್ದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಪ್ರೀತಿ ನಿರಾಕರಣೆ; ಬೆಂಕಿ ಹಚ್ಚಿಕೊಂಡು ಸಾವಿಗೆ ಶರಣಾದ ಯುವಕ

ಮೆಹಮೂದ್ ಕಿರಿಯ ಪುತ್ರ ಹಸ್ನೈನ್ ಮಾತನಾಡಿ “ನಮ್ಮ ತಂದೆ ಹೊಟ್ಟೆಯ ಕ್ಯಾನ್ಸರ್‌ ವಿರುದ್ಧ ಹೋರಾಡುತ್ತಿದ್ದರು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಕೊನೆಯುಸಿರೆಳೆದರು. ಕಳೆದ 17 ದಿನಗಳಿಂದ ಅವರ ಆರೋಗ್ಯ ಸ್ಥಿತಿ ಬಹಳ ಗಂಭೀರವಾಗಿತ್ತು. ಒಂದು ತಿಂಗಳಲ್ಲಿ 35-40 ಕೆಜಿ ತೂಕ ಕಳೆದುಕೊಂಡಿದ್ದರು” ಎಂದು ಮಾಹಿತಿ ನೀಡಿದ್ದಾರೆ.

ಇತ್ತೀಚೆಗೆ, ಹಾಸ್ಯನಟ ಜಾನಿ ಲಿವರ್, ನಟ ಜಿತೇಂದ್ರ ಹಾಗೂ ಸಚಿನ್ ಪಿಲ್ಗಾಂವ್ಕರ್ ಅವರು ಜೂನಿಯರ್ ಮೆಹಮೂದ್ ಅವರನ್ನು ಭೇಟಿಯಾಗಿದ್ದರು. ಹಿರಿಯ ನಟ ಜಿತೇಂದ್ರ ಮತ್ತು ಸಚಿನ್ ಪಿಲ್ಗಾಂವ್ಕರ್ ಅವರ ಜೊತೆ ಮೆಹಮೂದ್ ಹಲವು ಚಲನಚಿತ್ರಗಳಲ್ಲಿ ನಟಿಸಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪ್ರಧಾನಿ ಧರ್ಮ ರಾಜಕಾರಣ ಮಾಡುವ ಬಗ್ಗೆ ಎಂದಿಗೂ ಯೋಚಿಸಿಲ್ಲ ಎಂದ ರಾಜನಾಥ್ ಸಿಂಗ್!

ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ಪ್ರಚಾರ ಮಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು...

ಲೋಕಸಭೆ ಚುನಾವಣೆ| ಮಣಿಪುರದಲ್ಲಿ 3 ಬಾರಿ ಸ್ಫೋಟ; ಸೇತುವೆಗೆ ಹಾನಿ

ಮಣಿಪುರದ ಕೆಲವು ತಿಂಗಳುಗಳ ಕಾಲ ಕೊಂಚ ಕಡಿಮೆಯಾಗಿದ್ದ ಹಿಂಸಾಚಾರವು ಲೋಕಸಭೆ ಚುನಾವಣೆ...

ದಾರಿತಪ್ಪಿಸುವ ಜಾಹೀರಾತು ಪ್ರಕರಣ: ಮತ್ತೆ ಪತ್ರಿಕೆಗಳಲ್ಲಿ ಕ್ಷಮೆಯಾಚನೆ ಪ್ರಕಟಿಸಿದ ರಾಮ್‌ದೇವ್

ಪತಂಜಲಿ ಆಯುರ್ವೇದ್ ಲಿಮಿಟೆಡ್ ವಿರುದ್ಧ ದಾರಿತಪ್ಪಿಸುವ ಜಾಹೀರಾತು ಪ್ರಕರಣ ದಾಖಲಾಗಿದ್ದು, ಸುಪ್ರೀಂ...

ʼಈ ದಿನʼ ಸಮೀಕ್ಷೆ | ರೈತರಿಗೆ ಮೋದಿ ಮಹಾ ಮೋಸ; ‘ಬೆಂಬಲ ಬೆಲೆ’ ಕೊಡೋರಿಗೆ ನಮ್ಮ ಬೆಂಬಲ ಎಂದ ಮತದಾರರು!

ಭಾರತವು ಜಾಗತಿಕ ಆರ್ಥಿಕತೆಯಲ್ಲಿ 5ನೇ ಸ್ಥಾನದಲ್ಲಿದೆ. ಐದು ಟ್ರಿಲಿಯನ್ ಡಾಲರ್ ಆರ್ಥಿಕತೆ...