ಮೈ ತುಂಬಾ ಕೆಜಿಗಟ್ಟಲೇ ಬಂಗಾರದ ಒಡವೆ ಹಾಕಿಕೊಂಡು ಹಿಂದೆ ಮುಂದೆ ನಾಲ್ಕು ಹುಡುಗರನ್ನು ಇಟ್ಟುಕೊಂಡು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪಲೋಡ್ ಮಾಡುತ್ತಿದ್ದ ಕಿಂಗ್ ಮೇಕರ್ ದಾಸ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಬೇರೊಬ್ಬರ ಆಸ್ತಿ ವಿಚಾರದಲ್ಲಿ ಮೂಗು ತೂರಿಸಿದ ಈತನನ್ನು ಯಲಹಂಕ ಪೊಲೀಸರು ಬಂಧಿಸಿದ್ದು, ಇದೀಗ ಕಂಬಿ ಎಣಿಸುತ್ತಿದ್ದಾನೆ.
ಹೌದು, ಮೈ ತುಂಬಾ ಬಂಗಾರದ ಒಡವೆ ಹಾಕಿಕೊಂಡು, ಹಿಂದೆ ಮುಂದೆ ನಾಲ್ಕು ಹುಡುಗರನ್ನು ಇಟ್ಟುಕೊಂಡು ಓಡಾಡುವ ದಾಸ್ ಕಿಂಗ್ ಮೇಕರ್ ಎಂಬ ಹೆಸರಿನ ಈತ ನೆಗೆಟಿವ್ ಶೇಡ್‌ನಲ್ಲಿ ಜನಪ್ರಿಯತೆ ಗಳಿಸಲು ಮುಂದಾಗಿದ್ದಾನೆ.
View this post on Instagram
ಮಹಿಳೆ ಮತ್ತು ಓರ್ವ ವ್ಯಕ್ತಿಯ ನಡುವೆ ಆಸ್ತಿಯ ವಿಚಾರದಲ್ಲಿ ಗಲಾಟೆ ನಡೆದಿದೆ. ಆ ವ್ಯಕ್ತಿ ದಾಸ್‌ನ ಬಳಿ ಬಂದು ಸಮಸ್ಯೆಯ ಬಗೆಹರಿಸಿಕೊಡುವಂತೆ ಕೇಳಿದ್ದಾನೆ. ಇದಕ್ಕೆ ದಾಸ ತನ್ನ ಸಹಚರರನ್ನು ಮಹಿಳೆಯ ಮನೆಗೆ ಕಳುಹಿಸಿ ಬೆದರಿಕೆ ಹಾಕಿಸಿದ್ದಾನೆ. ಅಲ್ಲದೇ, ಮಹಿಳೆಯ ಮೇಲೆ ಹಲ್ಲೆಯೂ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ನಮ್ಮ ಮೆಟ್ರೋದಲ್ಲಿ ಮತ್ತೊಂದು ಲೈಂಗಿಕ ಕಿರುಕುಳ ಪ್ರಕರಣ
ಹಲ್ಲೆಗೊಳಗಾದ ಮಹಿಳೆ ದಾಸನ ಸಹಚರರು ಬಂದು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಯಲಹಂಕ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ.
ದೂರು ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಯಲಹಂಕ ಪೊಲೀಸರು ದಾಸನನ್ನು ಬಂಧಿಸಿದ್ದಾರೆ. ತನಿಖೆ ಮುಂದುವರೆದಿದೆ.