ಕಲಬುರಗಿಯಲ್ಲಿ ನಡೆದ ವಕೀಲ ಈರಣ್ಣ ಪಾಟೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ವಿರುದ್ಧ ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಮೂವರನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿಗಳನ್ನು ಉದನೂರು ಗ್ರಾಮದ ನಿವಾಸಿಗಳಾದ ನೀಲಕಂಠ ಪಾಟೀಲ್, ವಿಜಯಕುಮಾರ, ಸಿದ್ದಣ್ಣಗೌಡ, ಸಿದ್ರಾಮ, ಅವ್ವಣ್ಣ ಹಾಗೂ ಗುರು ಎಂದು ಗುರುತಿಸಿದ್ದಾರೆ.
ಹತ್ಯೆಯಾದ ನ್ಯಾಯವಾದಿ ಈರಣ್ಣ ಅವರ ಪತ್ನಿ ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಆರು ಮಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಹಿನ್ನಲೆ
ಈರಣ್ಣಗೌಡ ಬೈಕ್ನಲ್ಲಿ ಕೋರ್ಟ್ಗೆ ಹೋಗುವ ವೇಳೆ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿದ್ದು, ಬರೋಬ್ಬರಿ ಅರ್ಧ ಕಿಲೋಮೀಟರ್ ಅಟ್ಟಾಡಿಸಿಕೊಂಡು ಹೋಗಿ ನಗರದ ಸಾಯಿ ಮಂದಿರದ ಬಳಿಯಿರುವ ಅಪಾರ್ಟ್ಮೆಂಟ್ ಬಳಿ ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿದ್ದರು.
ಈ ಸುದ್ದಿ ಓದಿದ್ದೀರಾ? ಮುರುಘಾ ಮಠದ ಅಧಿಕಾರ ಮತ್ತೆ ಅತ್ಯಾಚಾರ ಆರೋಪಿ ಮುರುಘಾಶ್ರೀ ಕೈಗೆ!
ವಕೀಲ ಈರಣ್ಣಗೌಡನ ಹತ್ಯೆ ಬಳಿಕ ವಕೀಲರೆಲ್ಲರೂ ಒಗ್ಗೂಡಿ ವಕೀಲ ಸಂಘದಿಂದ ಪ್ರತಿಭಟನೆ ನಡೆಸಿದ್ದು, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಆರೋಪಿಗಳ ಬಂಧನಕ್ಕಾಗಿ ಪೊಲೀಸ್ ಇಲಾಖೆಯಿಂದ ಎರಡು ವಿಶೇಷ ತಂಡ ರಚನೆ ಮಾಡಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸಿದ್ದರು.