ಬೆಂಗಳೂರು-ಮಂಗಳೂರು ನಡುವೆ ಚಲಿಸುವ ರೈಲುಗಳು ಹಾಸನ ಜಿಲ್ಲೆಯ ಆಲೂರು ರೈಲ್ವೆ ನಿಲ್ದಾಣದಲ್ಲಿ ನಿಂತು ಹೊರಡುವ ಕಾಲ ಸನ್ನಿಹಿತವಾಗುತ್ತಿದೆ.
ಸ್ಥಳೀಯ ರಾಧಮ್ಮ, ಜನಸ್ಪಂದನ ಸಂಸ್ಥೆ ಅಧ್ಯಕ್ಷ ಹೇಮಂತಕುಮಾರ್, ದೆಹಲಿ ರೈಲು ಭವನದ ಮುಂದೆ ಪ್ರತಿಭಟನೆ ನಡೆಸಿ, ಆಲೂರಿನಲ್ಲಿ ರೈಲುಗಳ ನಿಲುಗಡೆಯಾಗಬೇಕೆಂದು ರೈಲ್ವೆ ಸಚಿವರಿಗೆ ಮನವಿ ಸಲ್ಲಿಸಿದ್ದರು.
ಮನವಿಯನ್ನು ಪರಿಗಣಿಸಿದ ರೈಲ್ವೆ ಇಲಾಖೆ ಸಚಿವಾಲಯ, ಸೂಕ್ತ ಕ್ರಮ ಕೈಗೊಳ್ಳಲು ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಲಯ ಮಹಾಪ್ರಬಂಧಕ ಕುಲದೀಪ್‍ಸಿಂಗ್ ಅವರಿಗೆ ಪತ್ರ ಬರೆದಿದ್ದರು.
ಹೇಮಂತಕುಮಾರ್ ಅವರು, ಹುಬ್ಬಳ್ಳಿಯಲ್ಲಿ ಕುಲದೀಪ್ ಸಿಂಗ್ ಅವರನ್ನು ಗುರುವಾರ ಭೇಟಿ ಮಾಡಿ ವಿಷಯ ಪ್ರಸ್ತಾಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಗದಗ | ಆಯೋಜಕರ ಬೇಜವಬ್ದಾರಿ ಧೋರಣೆ; ಮೂಲ ಸೌಕರ್ಯವಿಲ್ಲದೆ ಕ್ರೀಡಾಪಟುಗಳ ಆಕ್ರೋಶ
“ಡಿಜಿಎಂ ನಿರ್ದೇಶನದ ಮೇರೆಗೆ ಮೈಸೂರು ವಿಭಾಗದ ಕಮರ್ಷಿಯಲ್ ಇನ್ಸ್‌ಪೆಕ್ಟರ್ ಸಂತೋಷ್, ಶನಿವಾರ ಆಲೂರು ಪಟ್ಟಣದ ರೈಲು ನಿಲ್ದಾಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ” ಎಂದು ಹೇಮಂತಕುಮಾರ್ ತಿಳಿಸಿದ್ದಾರೆ.