ಚಾಮರಾಜನಗರ ತಾಲೂಕಿನ ಕೊತ್ತಲವಾಡಿ ಗ್ರಾಮದ ಬಳಿ ಕೊಳೆತ ಸ್ಥಿತಿಯಲ್ಲಿ ಎರಡು ಹುಲಿಗಳ ಕಳೇಬರ ಪತ್ತೆಯಾಗಿವೆ.
ಹುಲಿಗಳು ಮೃತಪಟ್ಟು 10ರಿಂದ 15 ದಿನಗಳು ಆಗಿರಬಹುದು ಎಂದು ಹೇಳಲಾಗುತ್ತಿದ್ದು, ಹುಲುಗನಮುರಡಿ ವೆಂಕಟರಮಣಸ್ವಾಮಿ ದೇವಾಲಯದ ಬಳಿ ಬೆಟ್ಟದ ತಪ್ಪಲಿನಲ್ಲಿ ಪಾಳು ಬಿದ್ದ ಜಮೀನೊಂದರ ಬಳಿ ಎರಡೂ ಹುಲಿಗಳ ಕಳೇಬರ ಪತ್ತೆಯಾಗಿವೆ.
ಈ ಪ್ರದೇಶ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಚಾಮರಾಜನಗರ ಪ್ರಾದೇಶಿಕ ವಲಯಕ್ಕೆ ಸೇರಿದೆ. ವಿಷಯ ತಿಳಿಯುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹಾಸನ | ಆಲೂರಿನಲ್ಲಿ ರೈಲುಗಳ ನಿಲುಗಡೆಗೆ ಆಗ್ರಹ
ಈ ಎರಡೂ ಹುಲಿಗಳನ್ನು ಯಾರಾದರೂ ವಿಷವಿಕ್ಕಿ ಕೊಂದಿದ್ದಾರೆಯೇ ಅಥವಾ ಎರಡು ಹುಲಿಗಳು ಕಾಳಗದಿಂದ ಮೃತಪಟ್ಟಿವೆಯೇ ಎಂಬುದು ಹುಲಿಗಳ ಮರಣೋತ್ತರ ಪರೀಕ್ಷೆಯ ಬಳಿಕ ನಿಖರ ಕಾರಣ ಗೊತ್ತಾಗಲಿದೆ.