ಇಂಡಿಯ ದಲಿತ ವಿದ್ಯಾರ್ಥಿ ಪರಿಷತ್ ಹಾಗೂ ಪ್ರಗತಿಪರ ಸಂಘಟನೆಗಳು ಹಂಜಗಿ ಮತ್ತು ನಿಂಬಾಳ ಗ್ರಾಮಕ್ಕೆ ಸರಿಯದ ಸಮಯಕ್ಕೆ ಬಸ್ ಬರದೇ ಇರುವ ಕಾರಣಕ್ಕಾಗಿ ಪ್ರತಿಭಟನೆ ನಡೆಸಿವೆ.
ಬಸ್ ಸರಿಯಾದ ಸಮಯಕ್ಕೆ ಬಾರದೇ ಶಾಲಾ, ಕಾಲೇಜುಗಳಿಗೆ ಬಸ್‌ನಲ್ಲಿ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು, ಸರಿಯಾದ ಸಮಯಕ್ಕೆ ತಲುಪಲು ಸಮಸ್ಯೆಯಾಗುತ್ತಿದೆ. ಕಾರಣ, ಬಸ್ ತಡೆದ ಪ್ರತಿಭಟನಾಕಾರರು, ಹಂಜಗಿ ಗ್ರಾಮದಿಂದ ಏಳು ಕಿಲೋ ಮೀಟರ್‌ವರೆಗೆ ಬಸ್ ಡಿಪೋವರೆಗೆ ನಡೆಯುವ ಮೂಲಕ ಪ್ರತಿಭಟನೆ ಮಾಡಿ, ಬಸ್ ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದ್ದಾರೆ.
ಪ್ರತಿಭಟನೆಯಲ್ಲಿ ಡಿವಿಪಿ ತಾಲೂಕು ಅಧ್ಯಕ್ಷ ವಿನೋದ ಕಾಳೆ, ರಾಮ ಕಾಂಬಳೆ,ಜೆಡಿಎಸ್ ಮುಖಂಡ ಬಿ.ಡಿ. ಪಾಟೀಲ್, ಸೋಮು ಅಂಜುಟಗಿ, ಸೋಹೇಲ್ ಕುಣಬಿ, ತೌಶಿಫ್ ಕರೋಶಿ, ಸಾಗರ್ ಕಟ್ಟಿಮನಿ, ಖಾಷಿಮ್ ವಾಲಿಕಾರ, ಅಪ್ರಾನ ಬಿರಾದಾರ್, ಪೂಜಾ ರಾಠೋಡ್, ವೈಷ್ಣವಿ ಕಮಲಾಕರ್, ಪ್ರೀತಿ ಬಗಲಿ, ಹಾಗೂ ವಿದ್ಯಾರ್ಥಿಗಳ ಸಮೋಹ ಭಾಗಿಯಾಗಿತ್ತು.