ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕು ಕೂಡಲಗಿ ಗ್ರಾಮದಲ್ಲಿ ಗ್ರಾಮಸ್ಥರು, ಮಹಿಳೆಯರು, ಯುವಜನತೆ ಹಾಗೂ ರಾಜ್ಯ ಮಹಿಳಾ ಒಕ್ಕೂಟ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆಯಿಂದ ಸಾರಾಯಿ ಮುಕ್ತ ಗ್ರಾಮವನ್ನಾಗಿ ಮಾಡಲು ಗ್ರಾಮದ ಪ್ರಮುಖ ಬೀದಿಯಲ್ಲಿ ಸಾರಾಯಿ ಮುಕ್ತ ಗ್ರಾಮ ಎಂದು ನಾಮಫಲಕ ಅನಾವರಣಗೊಳಿಸಿದ್ದಾರೆ.
ತಾಲೂಕಿನ ವಿವಿಧ ಸಂಘಟನೆಯ ಮಹಿಳೆಯರು ಮತ್ತು ಪುರುಷರು ಸೇರಿ ಸಭೆ ನಡೆಸಿ, ಸಭೆಯ ನಂತರ ಊರಿನ ಮುಂಭಾಗದಲ್ಲಿ ಫಲಕ ಹಾಕಿದ್ದಾರೆ. ಗ್ರಾಕೂಸ್ ಸಂಘಟನೆಯ ನಿಂಗಮ್ಮ ಸವಣೂರ ಮಾತನಾಡಿ, ಇನ್ನು ಮುಂದೆ ಸಾರಾಯಿ ಮಾರಾಟ ಮಾಡುವುದನ್ನು ನಿಲ್ಲಿಸಬೇಕು. ಇದುವರೆಗೂ ಮದ್ಯ ಮಾರಾಟ ಮಾಡುತ್ತಿರುವವರು ಈಗಲೇ ಬಂದ್ ಮಾಡಿ ನಾವು ಯಾವುದೇ ರೀತಿಯಾಗಿ ನಿಮಗೆ ತೊಂದರೆ ಕೊಡುವುದಿಲ್ಲ ಎಂದಿದ್ದಾರೆ ಎಂದು ಹೇಳಿದರು.
ನಂತರ ಮಾತನಾಡಿದ ಪೊಲೀಸ್ ಇನ್ಸ್ಪೆಕ್ಟರ್, ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆದರೆ ಮತ್ತು ಸರಾಯಿ ಮಾರಾಟ ಮಾಡುವುದನ್ನು ನಡೆಸಿದರೆ ʼ112ʼ ಈ ಸಂಖ್ಯೆಗೆ ಕರೆ ಮಾಡಬೇಕು ಎಂದು ವಿನಂತಿಸಿದರು.