ಮನೆಯ ಜಿಪಿಎಸ್ ಮಾಡಿ ಬಾಕಿ ಹಣವನ್ನು ಬಿಡುಗಡೆ ಮಾಡಿಸಲು 3,000 ರೂ. ಲಂಚ ಪಡೆಯುತ್ತಿದ್ದ ವೇಳೆ ಗ್ರಾಮ ಪಂಚಾಯತಿ ಬಿಲ್ ಕಲೆಕ್ಟರ್ ಒಬ್ಬರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಹರನೂರು ಗ್ರಾಮ ಪಂಚಾಯತ್ ಬಿಲ್ ಕಲೆಕ್ಟರ್ ಬಾಬುರಾವ ಯಲಗೂರದಪ್ಪ ಬಂಧಿತ ಎಂದು ತಿಳಿದು ಬಂದಿದೆ.
ಹರನೂರು ಗ್ರಾಮದ ಈರಮ್ಮ ಮಾಡಿವಾಳ ಎಂಬುವರಿಗೆ ಬಸವ ವಸತಿ ಯೋಜನೆಯಡಿ ಮನೆ ಮಂಜೂರಾಗಿದ್ದು ಕೊನೆಯ ಕಂತು 30,000 ರೂ. ಬಾಕಿ ಇತ್ತು. ಇದಕ್ಕೆ ಜಿಪಿಎಸ್ ಮಾಡಿ ದಾಖಲೆ ಅಪ್ಲೋಡ್ ಮಾಡಲು 3,000 ರೂ.ಗೆ ಲಂಚಕ್ಕೆ ಬೇಡಿಯಿಟ್ಟಿದ್ದ, ಈ ಬಗ್ಗೆ ಈರಮ್ಮ ಗ್ರಾಮದ ನಾಗನಗೌಡ ಎಂಬುವರಿಗೆ ತಿಳಿಸಿದರು. ನಾಗನಗೌಡ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಅಪಾಯಕಾರಿ ಸುಳ್ಳು ಆರೋಪ: ತಪ್ಪು ಯತ್ನಾಳರದ್ದೋ, ಕಾಂಗ್ರೆಸ್ಸಿನವರದ್ದೋ?
ಜೇವರ್ಗಿ ಪಟ್ಟಣದ ನರಿಬೋಳ ಕ್ರಾಸ್ ಬಳಿ ಬೇಡಿಕೆಯಿಟ್ಟ ಹಣವನ್ನು ಮನೆಯ ಫಲಾನುಭನಿ ಈರಮ್ಮ ಬಿಲ್ ಕಲೆಕ್ಟರ್ ಬಾಬುರಾವ ಅವರಿಗೆ ಹಣ ತಲುಪಿಸುವ ವೇಳೆ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ನಾನಾಗೌಡ ಪಾಟೀಲ್ ನೇತ್ರತ್ವದ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದೆ.