ಮೂರು ರಾಜ್ಯಗಳಲ್ಲಿ ಮುಂದುವರೆದ ಐಟಿ ದಾಳಿ: ಪತ್ತೆಯಾಯ್ತು ಬರೋಬ್ಬರಿ ₹290 ಕೋಟಿ

Date:

ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮೂರು ರಾಜ್ಯಗಳಲ್ಲಿ ದಾಳಿ ನಡೆಸಿದ್ದು, ಈವರೆಗೆ ಬರೋಬ್ಬರಿ 290 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.

ಒಡಿಶಾ ಮೂಲದ ಡಿಸ್ಟಿಲ್ಲರಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿಗಳಲ್ಲಿ ಈವರೆಗೆ ಕನಿಷ್ಠ ₹290 ಕೋಟಿ ನಗದು ವಶಪಡಿಸಿಕೊಳ್ಳಲಾಗಿದ್ದು ದಾಳಿ ಮುಂದುವರಿದಿರುವುದರಿಂದ ಇನ್ನಷ್ಟು ನಗದು ವಶಪಡಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.

ಇದು ಈವರೆಗಿನ ಆದಾಯ ತೆರಿಗೆ ದಾಳಿಗಳಲ್ಲಿ ವಶಪಡಿಸಿಕೊಳ್ಳಲಾದ ಗರಿಷ್ಠ ಪ್ರಮಾಣದ ನಗದು ಎಂದು ಹೇಳಲಾಗುತ್ತಿದೆ. ಮೂರು ರಾಜ್ಯಗಳ ಮೂರು ಸ್ಥಳಗಳಲ್ಲಿನ ಒಂಬತ್ತು ಲಾಕರ್‌ಗಳು ಮತ್ತು ಏಳು ಕೊಠಡಿಗಳ ಪರಿಶೀಲನೆ ಇನ್ನಷ್ಟೇ ನಡೆಯಬೇಕಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕಪಾಟುಗಳು ಮತ್ತು ಇತರ ಪೀಠೋಪಕರಣಗಳಲ್ಲಿ ನಗದು ಅಡಗಿಸಿಡಲಾಗಿತ್ತು. ಕಪಾಟಿನಲ್ಲಿ ನಗದು ಶೇಖರಿಸಿಟ್ಟಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.

ಒಡಿಶಾ ಮೂಲದ ಬೌದ್ ಡಿಸ್ಟಿಲ್ಲರಿ, ಈ ಕಂಪನಿಗೆ ಸೇರಿದ ಬಲದೇವ್ ಸಾಹು ಇನ್‌ಫ್ರಾ ಕಚೇರಿಗಳು ಹಾಗೂ ಸಂಸ್ಥೆಗೆ ಸೇರಿದ ಅಕ್ಕಿ ಮಿಲ್‌ನಲ್ಲಿ ಶೋಧ ನಡೆದಿದೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಸಂಸದ ಧೀರಜ್ ಕುಮಾರ್ ಸಾಹು ಅವರಿಗೆ ಸೇರಿದ ಸ್ಥಳಗಳಲ್ಲಿ ಕೋಟ್ಯಂತರ ನಗದು ಪತ್ತೆಯಾಗಿದೆ.

ಡಿಸ್ಟಿಲರೀಸ್ ಕಂಪನಿ ಮೇಲೆ ದಾಳಿ ಮಾಡಿದ ವೇಳೆ ಪತ್ತೆಯಾದ ಹಣವನ್ನು ಎಣಿಸಲು ಅಧಿಕಾರಿಗಳು ಬಳಸಿದ ನಗದು ಯಂತ್ರವೇ ಕೆಟ್ಟು ಹೋಗಿರುವುದಾಗಿಯೂ ವರದಿಯಾಗಿದೆ. ಈ ಎಲ್ಲ ದಾಳಿಗಳಲ್ಲಿ ಸುಮಾರು 150ರಷ್ಟು ಅಧಿಕಾರಿಗಳು ಭಾಗಿಯಾಗಿರುವುದಾಗಿ ವರದಿಯಾಗಿದೆ,

ಆದಾಯ ತೆರಿಗೆ ಅಧಿಕಾರಿಗಳ ಪ್ರತ್ಯೇಕ ತಂಡಗಳು ಎರಡನೇ ದಿನವೂ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿವೆ. ತೆರಿಗೆ ವಂಚನೆ ಆರೋಪದ ಮೇಲೆ ಬೋಲಂಗಿರ್, ಬೌಧ್, ಸಂಬಲ್ಪುರ, ಭುವನೇಶ್ವರ, ಸುಂದರ್ಗಢ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ನಗದು ವಶಪಡಿಸಿಕೊಂಡಿದ್ದಾರೆ.

ಇನ್ನೊಂದೆಡೆ ಶಿವಗಂಗಾ ಎಂಬ ಕಂಪನಿ ಮೇಲೂ ಐಟಿ ದಾಳಿ ನಡೆದಿದೆ. ರಾಜ್ಯಾದ್ಯಂತ ತನ್ನ ಮಳಿಗೆಗಳ ಮೂಲಕ ಕಂಪನಿಯು ಬಿಲ್‌ಗಳು ಹಾಗೂ ವೋಚರ್‌ಗಳನ್ನು ನಿರ್ವಹಿಸದೆ ದೇಶೀಯ ಮದ್ಯವನ್ನು ಮಾರಾಟ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಶಿವಗಂಗಾ ಕಂಪನಿಗೆ ಸಂಬಂಧಿಸಿದ ಆಸ್ತಿಯ ಮೇಲೆ ದಾಳಿ ನಡೆಸಲಾಗಿದೆ. ಕಂಪನಿಯ ಸುಳ್ಳು ಲೆಕ್ಕ ಸೇರಿದಂತೆ ಮಹತ್ವದ ಮಾಹಿತಿ ಕಲೆ ಹಾಕಲಾಗಿದೆ.

ಒಂದೇ ಕಚೇರಿಯಲ್ಲಿ ಬರೋಬ್ಬರಿ 150 ಕೋಟಿ ನಗದ ಪತ್ತೆ!
ಜಾರ್ಖಂಡ್‌ನ ರಾಂಚಿಯಲ್ಲಿರುವ ಮದ್ಯ ತಯಾರಿಕೆ ಮತ್ತು ಮಾರಾಟ ಸಂಸ್ಥೆಯಾದ ಬೌಧ್ ಡಿಸ್ಲಿಲರೀಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಹಲವು ಕಡೆಗಳಲ್ಲಿ ನಡೆಸಿದ ದಾಳಿ ವೇಳೆ ಒಂದೇ ಕಡೆ ಕಂತೆ ಕಂತೆ ಹಣವನ್ನು ನೋಡಿ ಐಟಿ ಅಧಿಕಾರಿಗಳಿಗೆ ದಂಗಾಗಿದ್ದಾರೆ.

500, 200 ಹಾಗೂ 100 ಮುಖ ಬೆಲೆಯ 150 ಕೋಟಿ ರೂಪಾಯಿ ಒಂದೇ ಕಡೆ ಪತ್ತೆಯಾಗಿದೆ. ಎಲ್ಲ ಕಡೆಗಳಿಂದ ಸೇರಿ ಈವರೆಗೆ ವಶಪಡಿಸಿಕೊಂಡಿರುವ 300 ಕೋಟಿ ರೂಪಾಯಿಗೂ ಅಧಿಕ ನಗದನ್ನು ಚೀಲಗಳಲ್ಲಿ ತುಂಬಿದ ನಂತರ ಟ್ರಕ್‌ನಲ್ಲಿ ಬೋಲಂಗಿರ್‌ನ ಎಸ್‌ಬಿಐ ಬ್ಯಾಂಕ್‌ಗೆ ಜಮಾ ಮಾಡಲಾಗಿದೆ ಎಂದು ವರದಿಯಾಗಿದೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೈಡನ್ ಅವರನ್ನು ಬೇಕಾದರೆ ಭೇಟಿ ಮಾಡಬಹುದು, ಆದರೆ ತೇಜಸ್ವಿಸೂರ್ಯ ಭೇಟಿಗೆ ಸಿಗ್ತಾ ಇಲ್ಲ!

ಗುರು ರಾಘವೇಂದ್ರ ಸಹಕಾರಿ ಬ್ಯಾಂಕ್ನಲ್ಲಿ ಹಣವಿಟ್ಟು ವಂಚನೆಗೊಳಗಾದ ಸಾವಿರಾರು ಜನರು ಸಂಸದ...

ಶಿವಮೊಗ್ಗ | ಹಣ, ಧರ್ಮದ ಹೆಸರಿನಲ್ಲಿ ನ್ಯಾಯವನ್ನು ಸೋಲಿಸಲು ಬಿಜೆಪಿ ಹೊರಟಿದೆ: ಸಚಿವ ಮಧುಬಂಗಾರಪ್ಪ

ರಾಜ್ಯದಲ್ಲಿ ಬಿಜೆಪಿ ಪಕ್ಷದವರು ಹಣ ಹಾಗೂ ಧರ್ಮದ ಹೆಸರಿನಲ್ಲಿ ನ್ಯಾಯವನ್ನು ಸೋಲಿಸಲು...

ತುಮಕೂರು | ಸಮೀಕ್ಷೆ ನಡೆಸಿ ಪುನರ್ವಸತಿ ಕಲ್ಪಿಸುವಂತೆ ಸ್ಲಂ ಸಮಿತಿ ಒತ್ತಾಯ

ಹೊಸದಾಗಿ ಸಮೀಕ್ಷೆ ನಡೆಸಿ ನೖಜ ಫಲಾನುಭವಿಗಳಿಗೆ ಪುನರ್ವಸತಿ ಕಲ್ಪಿಸಲು ಜಿಲ್ಲಾಡಳಿತ ಕ್ರಮಕೈಗೊಳ್ಳಬೇಕು...

‘ಇಂದ್ರಾಣಿ ಮುಖರ್ಜಿ’ ವೆಬ್‌ ಸೀರೀಸ್ ವೀಕ್ಷಿಸಿದ ಬಾಂಬೆ ಹೈಕೋರ್ಟ್: ಸಿಬಿಐ ಅರ್ಜಿ ತಿರಸ್ಕೃತ

ಶೀನಾ ಬೋರಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ ಕುರಿತ...