ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮೂರು ರಾಜ್ಯಗಳಲ್ಲಿ ದಾಳಿ ನಡೆಸಿದ್ದು, ಈವರೆಗೆ ಬರೋಬ್ಬರಿ 290 ಕೋಟಿ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
ಒಡಿಶಾ ಮೂಲದ ಡಿಸ್ಟಿಲ್ಲರಿಗೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿರುವ ದಾಳಿಗಳಲ್ಲಿ ಈವರೆಗೆ ಕನಿಷ್ಠ ₹290 ಕೋಟಿ ನಗದು ವಶಪಡಿಸಿಕೊಳ್ಳಲಾಗಿದ್ದು ದಾಳಿ ಮುಂದುವರಿದಿರುವುದರಿಂದ ಇನ್ನಷ್ಟು ನಗದು ವಶಪಡಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ವರದಿಯಾಗಿದೆ.
ಇದು ಈವರೆಗಿನ ಆದಾಯ ತೆರಿಗೆ ದಾಳಿಗಳಲ್ಲಿ ವಶಪಡಿಸಿಕೊಳ್ಳಲಾದ ಗರಿಷ್ಠ ಪ್ರಮಾಣದ ನಗದು ಎಂದು ಹೇಳಲಾಗುತ್ತಿದೆ. ಮೂರು ರಾಜ್ಯಗಳ ಮೂರು ಸ್ಥಳಗಳಲ್ಲಿನ ಒಂಬತ್ತು ಲಾಕರ್‌ಗಳು ಮತ್ತು ಏಳು ಕೊಠಡಿಗಳ ಪರಿಶೀಲನೆ ಇನ್ನಷ್ಟೇ ನಡೆಯಬೇಕಿದೆ ಎಂದು ಐಟಿ ಇಲಾಖೆ ಮೂಲಗಳು ತಿಳಿಸಿವೆ.
This is not the bank’s strong room; it’s Congress MP Dheeraj Sahu’s office, from where Rs 200 Crore cash was recovered during an Income Tax Department raid. While counting the money, two counting machines broke down, and 157 bags were used to transfer the cash into trucks. pic.twitter.com/MSRZk3Ebpc
— Gagandeep Singh (@Gagan4344) December 8, 2023
ಕಪಾಟುಗಳು ಮತ್ತು ಇತರ ಪೀಠೋಪಕರಣಗಳಲ್ಲಿ ನಗದು ಅಡಗಿಸಿಡಲಾಗಿತ್ತು. ಕಪಾಟಿನಲ್ಲಿ ನಗದು ಶೇಖರಿಸಿಟ್ಟಿರುವ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ.
ಒಡಿಶಾ ಮೂಲದ ಬೌದ್ ಡಿಸ್ಟಿಲ್ಲರಿ, ಈ ಕಂಪನಿಗೆ ಸೇರಿದ ಬಲದೇವ್ ಸಾಹು ಇನ್‌ಫ್ರಾ ಕಚೇರಿಗಳು ಹಾಗೂ ಸಂಸ್ಥೆಗೆ ಸೇರಿದ ಅಕ್ಕಿ ಮಿಲ್‌ನಲ್ಲಿ ಶೋಧ ನಡೆದಿದೆ. ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಸಂಸದ ಧೀರಜ್ ಕುಮಾರ್ ಸಾಹು ಅವರಿಗೆ ಸೇರಿದ ಸ್ಥಳಗಳಲ್ಲಿ ಕೋಟ್ಯಂತರ ನಗದು ಪತ್ತೆಯಾಗಿದೆ.
ಡಿಸ್ಟಿಲರೀಸ್ ಕಂಪನಿ ಮೇಲೆ ದಾಳಿ ಮಾಡಿದ ವೇಳೆ ಪತ್ತೆಯಾದ ಹಣವನ್ನು ಎಣಿಸಲು ಅಧಿಕಾರಿಗಳು ಬಳಸಿದ ನಗದು ಯಂತ್ರವೇ ಕೆಟ್ಟು ಹೋಗಿರುವುದಾಗಿಯೂ ವರದಿಯಾಗಿದೆ. ಈ ಎಲ್ಲ ದಾಳಿಗಳಲ್ಲಿ ಸುಮಾರು 150ರಷ್ಟು ಅಧಿಕಾರಿಗಳು ಭಾಗಿಯಾಗಿರುವುದಾಗಿ ವರದಿಯಾಗಿದೆ,
IT swoop raid liquor manufacturers in Odisha, Jharkhand; ₹300 crore seized
Rs.150 crore alone was seized from the raids conducted at the premises of BDPL situated in Boudh, Raidih, Sambalpur, and Balangir districts of Odisha as well as in Ranchi and Lohardaga in Jharkhand. pic.twitter.com/obX6uTTtKF— Manas Behera. ANI (@manasbehera07) December 7, 2023
ಆದಾಯ ತೆರಿಗೆ ಅಧಿಕಾರಿಗಳ ಪ್ರತ್ಯೇಕ ತಂಡಗಳು ಎರಡನೇ ದಿನವೂ ವಿವಿಧ ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿವೆ. ತೆರಿಗೆ ವಂಚನೆ ಆರೋಪದ ಮೇಲೆ ಬೋಲಂಗಿರ್, ಬೌಧ್, ಸಂಬಲ್ಪುರ, ಭುವನೇಶ್ವರ, ಸುಂದರ್ಗಢ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. ಮಾಹಿತಿ ಮೇರೆಗೆ ಐಟಿ ಅಧಿಕಾರಿಗಳು ನಗದು ವಶಪಡಿಸಿಕೊಂಡಿದ್ದಾರೆ.
ಇನ್ನೊಂದೆಡೆ ಶಿವಗಂಗಾ ಎಂಬ ಕಂಪನಿ ಮೇಲೂ ಐಟಿ ದಾಳಿ ನಡೆದಿದೆ. ರಾಜ್ಯಾದ್ಯಂತ ತನ್ನ ಮಳಿಗೆಗಳ ಮೂಲಕ ಕಂಪನಿಯು ಬಿಲ್‌ಗಳು ಹಾಗೂ ವೋಚರ್‌ಗಳನ್ನು ನಿರ್ವಹಿಸದೆ ದೇಶೀಯ ಮದ್ಯವನ್ನು ಮಾರಾಟ ಮಾಡುತ್ತಿದೆ ಎಂಬ ಆರೋಪ ಕೇಳಿ ಬಂದಿತ್ತು. ಶಿವಗಂಗಾ ಕಂಪನಿಗೆ ಸಂಬಂಧಿಸಿದ ಆಸ್ತಿಯ ಮೇಲೆ ದಾಳಿ ನಡೆಸಲಾಗಿದೆ. ಕಂಪನಿಯ ಸುಳ್ಳು ಲೆಕ್ಕ ಸೇರಿದಂತೆ ಮಹತ್ವದ ಮಾಹಿತಿ ಕಲೆ ಹಾಕಲಾಗಿದೆ.
ಒಂದೇ ಕಚೇರಿಯಲ್ಲಿ ಬರೋಬ್ಬರಿ 150 ಕೋಟಿ ನಗದ ಪತ್ತೆ!
ಜಾರ್ಖಂಡ್‌ನ ರಾಂಚಿಯಲ್ಲಿರುವ ಮದ್ಯ ತಯಾರಿಕೆ ಮತ್ತು ಮಾರಾಟ ಸಂಸ್ಥೆಯಾದ ಬೌಧ್ ಡಿಸ್ಲಿಲರೀಸ್ ಪ್ರೈವೇಟ್ ಲಿಮಿಟೆಡ್‌ಗೆ ಸೇರಿದ ಹಲವು ಕಡೆಗಳಲ್ಲಿ ನಡೆಸಿದ ದಾಳಿ ವೇಳೆ ಒಂದೇ ಕಡೆ ಕಂತೆ ಕಂತೆ ಹಣವನ್ನು ನೋಡಿ ಐಟಿ ಅಧಿಕಾರಿಗಳಿಗೆ ದಂಗಾಗಿದ್ದಾರೆ.
500, 200 ಹಾಗೂ 100 ಮುಖ ಬೆಲೆಯ 150 ಕೋಟಿ ರೂಪಾಯಿ ಒಂದೇ ಕಡೆ ಪತ್ತೆಯಾಗಿದೆ. ಎಲ್ಲ ಕಡೆಗಳಿಂದ ಸೇರಿ ಈವರೆಗೆ ವಶಪಡಿಸಿಕೊಂಡಿರುವ 300 ಕೋಟಿ ರೂಪಾಯಿಗೂ ಅಧಿಕ ನಗದನ್ನು ಚೀಲಗಳಲ್ಲಿ ತುಂಬಿದ ನಂತರ ಟ್ರಕ್‌ನಲ್ಲಿ ಬೋಲಂಗಿರ್‌ನ ಎಸ್‌ಬಿಐ ಬ್ಯಾಂಕ್‌ಗೆ ಜಮಾ ಮಾಡಲಾಗಿದೆ ಎಂದು ವರದಿಯಾಗಿದೆ.