ಬೀದರ್‌ | ಕವಿ ಎಂ.ಜಿ ಗಂಗನಪಳ್ಳಿ ಅವರ ಬದುಕು ಸಮಾಜಕ್ಕೆ ಆದರ್ಶ: ಪ್ರೊ. ಬಸವರಾಜ ಬಲ್ಲೂರು

Date:

Advertisements

ದಿ.ಎಂ.ಜಿ.ಗಂಗನಪಳ್ಳಿ ಅವರು ತಮ್ಮ ಇಡೀ ಜೀವನವನ್ನು ಸಾಹಿತ್ಯಕ್ಕಾಗಿ ಮೀಸಲಿಟ್ಟಿದ್ದರು. ಅವರದ್ದು ಅಪರೂಪದ ಜೀವನ, ಸಾರ್ಥಕ ಬದುಕು, ಅವರ ಜೀವನದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ, ವಿದೇಶದ ನೆಲದಲ್ಲಿ ಮೂಡಿದ ಸಾನೆಟ್ ಕಾವ್ಯ ಪ್ರಕಾರವನ್ನು ಬೀದರ ಜಿಲ್ಲೆಗೆ ಪರಿಚಯಿಸಿದವರಲ್ಲಿ ಗಂಗನಪಳ್ಳಿ ಅಗ್ರಗಣ್ಯರು ಎಂದು ಉಪನ್ಯಾಸಕ, ಸಾಹಿತಿ ಡಾ.ಬಸವರಾಜ ಬಲ್ಲೂರು ಅಭಿಪ್ರಾಯಟ್ಟರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನ ಜಂಟಿಯಾಗಿ ಬೀದರ ನಗರದ ಕೃಷ್ಣಾ ರಿಜೇನ್ಸಿಯಲ್ಲಿ ಆಯೋಜಿಸಿದ್ದ ಜಿಲ್ಲೆಯ ಹಿರಿಯ ಸಾಹಿತಿ, ಸಾನೆಟ್ ಕವಿ ಎಂದೇ ಪ್ರಖ್ಯಾತರಾಗಿದ್ದ ಎಂ.ಜಿ. ಗಂಗನಪಳ್ಳಿಯವರ ʼಭಾವ ನಮನʼ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, “ಎಂ.ಜಿ.ಗಂಗನಪಳ್ಳಿ ಅವರು ಇದುವರೆಗೂ 14 ಕವನಸಂಕಲನ, 3 ಗದ್ಯ, 12 ಜೀವನಚರಿತ್ರೆ, 2 ಅನುವಾದ, 2 ಕ್ಷೇತ್ರದರ್ಶನ, 3 ಖಂಡ ಕಾವ್ಯಗಳು, 5 ವಿಮರ್ಶೆ, 3 ಚುಟುಕು, 2 ವಚನ ಸಾಹಿತ್ಯ, 3 ಸಂಪಾದನೆ, 3 ಸುಪ್ರಭಾತ ಸೇರಿದಂತೆ ಒಟ್ಟು 53 ಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ್ದಾರೆ” ಎಂದು ಹೇಳಿದರು.

“ಗಂಗನಪಳ್ಳಿಯವರು ಅನೇಕ ಉತ್ಕೃಷ್ಟ ಕೃತಿಗಳನ್ನು ರಚಿಸಿದ್ದಾರೆ. ಅವರ ಕಾವ್ಯ ವ್ಯಾಕರಣ ಬದ್ಧವೂ ಮತ್ತು ಗಟ್ಟಿ ಬರಹವೂ ಆಗಿದ್ದು, ಅವರ ಮೇಲೆ ವಿವೇಕಾನಂದರು, ರಾಮಕೃಷ್ಣ ಪರಮಹಂಸರು, ಶಾರದಾ ಮಾತೆಯ ಗಾಢ ಪ್ರಭಾವ ಇತ್ತು. ಹೀಗಾಗಿ ಅವರು ಆದರ್ಶ ಜೀವನ ನಡೆಸಿದ್ದರು. ಜಿಲ್ಲೆಯ ಅನೇಕ ಕವಿ, ಸಾಹಿತಿಗಳಿಗೆ ಮಾರ್ಗದರ್ಶಕರಾಗಿದ್ದ ಅವರು ಬದುಕಿರುವಾಗಲೇ ಅವರ ಕುರಿತು ಶಿಕ್ಷಕ ಸಂಜೀವಕುಮಾರ ಅತಿವಾಳೆಯವರು ʼಭಾವಗಂಗೆʼ ಎನ್ನುವ ಅಭಿನಂದನಾ ಗ್ರಂಥ ಅರ್ಪಿಸಿರುವುದು ಸ್ತುತ್ಯಾರ್ಹ” ಎಂದರು.

Advertisements

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಪ್ರೊ.ಸಿದ್ರಾಮಪ್ಪ ಮಾಸಿಮಾಡೆ ಮಾತನಾಡಿ, “ಗಂಗನಪಳ್ಳಿ ಅವರದ್ದು ವಿಶೇಷ ವ್ಯಕ್ತಿತ್ವ, ಅವರು ಸಾಹಿತ್ಯದ ಭಂಡಾರವಾಗಿದ್ದರು, ಸಾಹಿತ್ಯದ ಸಾರ್ಥಕ ಬದುಕನ್ನು ಬಾಳಿದ ಅವರ ಆಚಾರ ವಿಚಾರಗಳನ್ನು ಜನಮನಕ್ಕೆ ಮುಟ್ಟಿಸಬೇಕಾಗಿದೆ” ಎಂದು ನುಡಿದರು.

ಹಿರಿಯ ಸಾಹಿತಿ ಡಾ.ಎಂ.ಜಿ.ದೇಶಪಾಂಡೆ ಮಾತನಾಡಿ, “ಸಾಹಿತಿ ಗಂಗನಪಳ್ಳಿಯವರು ವಿಶಾಲ ಹೃದಯಿಗಳಾಗಿದ್ದರು, ಜ್ಞಾನವಂತರಾಗಿದ್ದರು, ಅವರ ಸಾಹಿತ್ಯಕ್ಕೆ ಪ್ರೇರಣೆ ಅವರ ತಂದೆ, ಕುವೆಂಪು ಅವರ ಭೇಟಿ ಮತ್ತು ನಿಸರ್ಗದ ರಮ್ಯತೆ ಆಗಿತ್ತು. ಅವರ ಮಾತುಗಳು ತಾರ್ಕಿಕವಾಗಿರುತ್ತಿದ್ದವು, ಆಡಂಬರದ ಜೀವನ ಶೈಲಿಗೆ ಮಾರುಹೋಗದೇ ಸರಳತೆ ಮತ್ತು ಮಿತ ಆಹಾರ ಶೈಲಿಯನ್ನು ರೂಢಿಸಿಕೊಂಡಿದ್ದರು” ಎಂದು ನುಡಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ಜಿಲ್ಲಾ ಕಸಾಪ ಅಧ್ಯಕ್ಷ ಸುರೇಶ ಚನ್ನಶೆಟ್ಟಿ ಮಾತನಾಡಿ, “ನಮ್ಮಂತಹ ಅನೇಕ ಯುವಕರಿಗೆ ಗಂಗನಪಳ್ಳಿಯವರ ಬದುಕು ಮಾರ್ಗದರ್ಶಕವಾಗಿದೆ, ಜಿಲ್ಲೆಯ ಹಿರಿಯ ಸಾಹಿತಿಯಾಗಿದ್ದ ಗಂಗನಪಳ್ಳಿಯವರನ್ನು ಕಳೆದುಕೊಂಡು ಕನ್ನಡ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಅಭಿಮಾನಿಗಳಿಗೆ, ಕುಟುಂಬದವರಿಗೆ ನೋವು ಭರಿಸುವ ಶಕ್ತಿ ಸಿಗಲೆಂದು” ಹೇಳಿದರು.

ಅತಿವಾಳೆ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಡಾ.ಸಂಜೀವಕುಮಾರ ಅತಿವಾಳೆ ಪ್ರಾಸ್ತಾವಿಕ ಮಾತನಾಡಿ, “ಮುಂದಿನ ದಿನಗಳಲ್ಲಿ ಗಂಗನಪಳ್ಳಿಯವರ ಸಾಹಿತ್ಯದ ಕುರಿತಾದ ವಿಚಾರಗೋಷ್ಠಿಗಳನ್ನು ಏರ್ಪಡಿಸಲಾಗುವುದು” ಎಂದರು.

ಮುಖಂಡ ಪಂಡಿತರಾವ ಚಿದ್ರಿ, ಪತ್ರಕರ್ತ ಮಾಳಪ್ಪ ಅಡಸಾರೆ, ಹಿರಿಯ ಸಾಹಿತಿ ಶ್ರೀಮತಿ ಭಾರತಿ ವಸ್ತ್ರದ ಹಾಗೂ ಎಂ.ಜಿ.ಗಂಗನಪಳ್ಳಿ ಅವರ ಸಹೋದರ ರಾಮರಾವ ಗಂಗನಪಳ್ಳಿ ಮಾತನಾಡಿದರು.

ಸಾಹಿತಿ ರೇಣುಕಾ ಎನ್.ಬಿ. ಅವರು ಗಂಗನಪಳ್ಳಿಯವರು ರಚಿಸಿರುವ ಕವಿತೆಗೆ ಸ್ವರ ಸಂಯೋಜನೆ ಮಾಡಿ ಹಾಡಿದರು. ಇದೇ ಸಂದರ್ಭದಲ್ಲಿ ಡಾ.ಶ್ರೇಯಾ ಮಹೀಂದ್ರಕರ್ ಅವರು ಗಂಗನಪಳ್ಳಿಯವರನ್ನು ಕುರಿತು ರಚಿಸಿರುವ ‘ಬೀದರಿನ ಕೊಡುಗೆ’ ಹಾಗೂ ಮಾಣಿಕ ನೇಳಗೆ ರಚಿಸಿರುವ ‘ಮಾಗಿದ ಕಾಯಿ’ ಎನ್ನುವ ಕವನಗಳನ್ನು ವಾಚಿಸಿದರು.  ನಿಧನರಾದ ಎಂ.ಜಿ.ಗಂಗನಪಳ್ಳಿ ಮತ್ತು ಚಿತ್ರ ನಟಿ ಲೀಲಾವತಿ ಅವರಿಗೆ ಮೌನಾಚರಣೆಯ ಮೂಲಕ ಶೃದ್ಧಾಂಜಲಿ ಸಲ್ಲಿಸಲಾಯಿತು.

ಈ ಸುದ್ದಿ ಓದಿದ್ದೀರಾ? ಮಹುವಾ ಉಚ್ಚಾಟನೆ; ಉಳಿಗಾಲವಿಲ್ಲವೇ ಅದಾನಿ ಎದುರು ಹಾಕಿಕೊಂಡರೆ?

ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಗೌ.ಕಾರ್ಯದರ್ಶಿ ಶಿವಕುಮಾರ ಕಟ್ಟೆ ಸ್ವಾಗತಿಸಿದರು. ಗೌ.ಕೋಶಾಧ್ಯಕ್ಷ ಶಿವಶಂಕರ ಟೋಕರೆ ನಿರೂಪಿಸಿದರು. ಕಸಾಪ ತಾಲೂಕು ಅಧ್ಯಕ್ಷ ಎಂ.ಎಸ್.ಮನೋಹರ ವಂದಿಸಿದರು. ಎಂ.ಜಿ.ಗಂಗನಪಳ್ಳಿಯವರ ಸಾಹಿತ್ಯಾಭಿಮಾನಿಗಳು, ಕುಟುಂಬ ಸದಸ್ಯರು, ವಿದ್ಯಾರ್ಥಿಗಳು, ಸಾಹಿತ್ಯಾಸಕ್ತರು ಭಾಗವಹಿಸಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | KSRTC ನಗರ ಸಾರಿಗೆ ಬಸ್ ಮಲವಗೊಪ್ಪದ, ಚೆನ್ನಬಸವೇಶ್ವರ ದೇವಸ್ಥಾನ ಬಳಿ ಕಡ್ಡಾಯ ನಿಲುಗಡೆಗೆ ಆದೇಶ

ಶಿವಮೊಗ್ಗ, ಸಾರ್ವಜಕನಿಕ ಪ್ರಯಾಣಿಕರು/ಶಾಲಾ-ಕಾಲೇಜು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಶಿವಮೊಗ್ಗ-ಭದ್ರಾವತಿ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ನಗರ...

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ಮೈಸೂರು | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಅತ್ತಿಗೋಡು ಸರ್ಕಾರಿ ಪ್ರೌಢಶಾಲೆ

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಸಾಕಷ್ಟು ಸವಾಲುಗಳನ್ನು ಸಹ ಎದುರಿಸುತ್ತಿದೆ....

ಗದಗ | ಹಾಸ್ಟೆಲ್‌ ವಿದ್ಯಾರ್ಥಿನಿ ಕೊಲೆ ಪ್ರಕರಣ; ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಎಸ್‌ಎಫ್‌ಐ ಆಗ್ರಹ

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕೋವೆರ ಹಟ್ಟಿಯ ವರ್ಷಿತಾ ಎಂಬ ಪದವಿ...

Download Eedina App Android / iOS

X