ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಕುರಿತಂತೆ ಡಿಸೆಂಬರ್ 12ರಂದು ನಗರದ ನೃಪತುಂಗ ಹೋಟೆಲ್ ಸಭಾಂಗಣದಲ್ಲಿ ಸಂಜೆ 5ಕ್ಕೆ ಎಲ್ಲ ಮುಖಂಡರೊಂದಿಗೆ ಮುಕ್ತ ಸಂವಾದ ಸಭೆ ನಡೆಸಿ ಮುಂದಿನ ಹೋರಾಟದ ಕುರಿತು ಚರ್ಚಿಲಾಗುತ್ತದೆ ಎಂದು ವೈಸ್ ಆಫ್ ಸೋಶಿಯಲ್ ಜಸ್ಟೀಸ್ ಫೋರಂ ರಾಜ್ಯ ಸಂಚಾಲಕ ಅಂಬಣ್ಣ ಆರೋಲಿ ಹೇಳಿದರು.
ರಾಯಚೂರು ನಗರದಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, “ಮಾದಿಗ ದಂಡೋರ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಮಂದಕೃಷ್ಣ ಇವರ ನೇತೃತ್ವದಲ್ಲಿ ಹೈದರಾಬಾದ್‌ನಲ್ಲಿ ನಡೆದ ಮಹಾಸಮಾವೇಶದ ನಂತರ ಒಳಮೀಸಲಾತಿ ಕುರಿತಂತೆ ದೇಶದ ಪ್ರಧಾನಿ ನರೇಂದ್ರ ಮೊದಿ ಹಾಗೂ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಒಳಮೀಸಲಾತಿ ಕುರಿತಂತೆ ಮಾತನಾಡಲು ಪ್ರಾರಂಭಿಸಿದ್ದಾರೆ. ಮೀಸಲಾತಿ ಹೋರಾಟಕ್ಕೆ ಮಂದ ಕೃಷ್ಣ ಮಾದಿಗರ ಕೊಡುಗೆ ದೊಡ್ಡದಿದೆ” ಎಂದು ಹೇಳಿದರು.
“ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಆಯೋಗ ಒಳಮೀಸಲಾತಿಗೆ ಸೂಚನೆ ನೀಡಿತ್ತು. ಆದರೆ ಆರ್‌ಎಸ್‌ಎಸ್ ಪ್ರೇರಿತ ಬಿಜೆಪಿ ನಾಯಕರು ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಜನವರಿ 17 ರಂದು ಸುಪ್ರಿಂಕೋರ್ಟಿನಲ್ಲಿ ಒಳಮೀಸಲಾತಿ ಕುರಿತು ವಿಚಾರಣೆ ಪ್ರಾರಂಭವಾಗಲಿದೆ. ಹೈದರಾಬಾದಿನ ಸಮಾವೇಶದ ನಂತರ ಸಮೂದಾಯ ಜನರನ್ನು ಒಂದು ಪಕ್ಷಕ್ಕೆ ಒತ್ತೆಯಿಡಲಾಗುತ್ತಿದೆ. ಎಂಬೆಲ್ಲ ಆರೋಪಗಳನ್ನು ತಿಳಿಗೊಳಿಸುವ ಮೂಲಕ ಮುಂದಿನ ಹೋರಾಟ ರೂಪಿಬೇಕಿದೆ. ಈಗಾಗಲೇ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಮಾಡಲಾಗಿದೆ. ಅದರೆ ಸ್ಪೃಷ್ಯ ಜಾತಿಗಳು ಸದಾಶಿವ ಆಯೋಗದ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ” ಎಂದರು.
“ಸದಾಶಿವ ಆಯೋಗದ ವರದಿಯಲ್ಲಿ ಭೋವಿ, ವಡ್ಡರ, ಕೊರಮ, ಕೊರಚ, ಲಂಬಾಣ ಸಮೂದಾಯಗಳಿಗೆ ಮೀಸಲು ಕಡಿತಗೊಳಿಸಲಾಗುತ್ತದೆ ಎಂಬ ಸುಳ್ಳು ಹರಡುವ ಕುತಂತ್ರ ನಡೆಸಲಾಗುತ್ತಿದೆ. ಪಕ್ಷಾತೀತವಾಗಿ ನಡೆಯುವ ಹೋರಾಟದಲ್ಲಿ ಸಮಾಜದ ಮುಖಂಡರುಗಳು ಭಾಗಿಯಾಗಿ ಮುಂದಿನ ಹೋರಾಟ ನಿರ್ಧರಿಸಬೇಕಿದೆ. ಆರ್‌ಎಸ್‌ಎಸ್ ಪ್ರಾಯೋಜಿತ ಮಾದಿಗ ಮುನ್ನಡೆ ಅಭಿಯಾನದ ಅಪಾಯಗಳ ಕುರಿತು ಚರ್ಚಿಸಲಾಗುತ್ತದೆ” ಎಂದರು.
“ಸದಾಶಿವ ಆಯೋಗದ ವರದಿ ಅಪ್ರಸ್ತುತವೆಂದು ಹೇಳಲಾಗದು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹಂಚಿಕೆಗೆ ರಾಜ್ಯದ ಶಿಫಾರಸಿನ ಮೇರೆಗೆ ಕೇಂದ್ರ ನಿರ್ಧಾರ ಕೈಗೊಳ್ಳಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ಭಾವುಕರಾಗಿ ಅಪ್ಪಿಕೊಂಡು ಮಾತನಾಡಿರುವುದು ಅಪರಾಧವೇನಲ್ಲ” ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಶೈಕ್ಷಣಿಕ ಪ್ರಗತಿಯೊಂದೇ ಸಮುದಾಯದ ಉನ್ನತಿಗೆ ಕಾರಣ: ಶಿವಲೀಲಾ ವಿನಯ ಕುಲಕರ್ಣಿ
“ಮಾನ್ವಿ ಮದ್ಲಾಪುರು ಪ್ರಸಾದ ಕೊಲೆ ಪ್ರಕರಣ ನಿಲ್ಲಿಸಿಲ್ಲ. ಅಧಿವೇಶನದ ನಂತರ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಲಾಗುತ್ತದೆ” ಎಂದರು.
ಈ ಸಂದರ್ಭದಲ್ಲಿ ಅಬ್ರಹಾಂ ಹೊನ್ನಟಗಿ, ಜನಾರ್ಧನ ಹಳ್ಳಿ ಬೆಂಚಿ, ನರಸಿಂಹಲು, ಶರಣಬಸವ, ಹನುಮೇಶ, ನರಸಿಂಹಲು, ಜಂಬಣ್ಣ ಇದ್ದರು.
ವರದಿ : ಹಫೀಜುಲ್ಲ