ಧಾರವಾಡ | ಶೈಕ್ಷಣಿಕ ಪ್ರಗತಿಯೊಂದೇ ಸಮುದಾಯದ ಉನ್ನತಿಗೆ ಕಾರಣ: ಶಿವಲೀಲಾ ವಿನಯ ಕುಲಕರ್ಣಿ

Date:

ಮುಸ್ಲಿಂ ಸಮುದಾಯವು ಶೈಕ್ಷಣಿಕವಾಗಿ ಮತ್ತು ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿದ್ದು, ಪ್ರಗತಿ ಹೊಂದಲು ಶೈಕ್ಷಣಿಕ ಜಾಗೃತಿಯೊಂದೇ ಪರಿಹಾರ ಮತ್ತು ಸಮುದಾಯಕ್ಕೆ ನೌಕರರ ಕೊಡುಗೆ ಅವಶ್ಯಕ ಎಂದು ವೈಶುದೀಪ ಪೌಂಡೇಶನ್ ಅಧ್ಯಕ್ಷೆ ಶಿವಲೀಲಾ ವಿನಯ ಕುಲಕರ್ಣಿ ಹೇಳಿದರು.

ಧಾರವಾಡದ ನೌಕರರ ಭವನದಲ್ಲಿ ನಡೆದ ಮುಸ್ಲಿಂ ಮುಖಂಡರಿಗೆ ಒಂದು ದಿನದ ಕಾರ್ಯಾಗಾರ ಹಾಗೂ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿಶೇಷ ಸಾಧಕರಿಗೆ ಮತ್ತು ಗರಿಷ್ಠ ದಾಖಲಾತಿ ಹೊಂದಿದ ಶಾಲೆಗಳಿಗೆ ಸನ್ಮಾನ ಸಮಾರಂಭ ಕಾರ್ಕ್ರಮ ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿ ಎಐಪಿಟಿಎಫ್‌ ಕಾರ್ಯಾಧ್ಯಕ್ಷ ಬಸವರಾಜ ಗುರಿಕಾರ ಮಾತನಾಡಿ, “ಸಾಮಾಜಿಕ ನ್ಯಾಯದ ಹಿನ್ನಲೆಯಲ್ಲಿ ನೌಕರರ ಮತ್ತು ಶಿಕ್ಷಕರ ಸಂಘಟನೆಗಳಲ್ಲಿ ಮುಸ್ಲಿಂ ಸಮುದಾಯಕ್ಕೆ ಆದ್ಯತೆ ನೀಡಬೇಕು. ಒಗ್ಗಟ್ಟಾಗಿ ಮುಂದುವರೆಯಿರಿ ಮತ್ತು ಸಂಘದ ಚಟುವಟಿಕೆಗಳಿಗೆ ಸದಾ ಬೆಂಬಲ‌ ಇರುತ್ತದೆ” ಎಂದು ತಿಳಿಸಿದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ‌ ಎಸ್ ಎಫ್ ಸಿದ್ಧನಗೌಡ್ರು ಮಾತನಾಡಿ, “ಈ ಸಂಘವು ಕ್ರಿಯಾಶೀಲವಾಗಿ ಸೇವೆ ಸಲ್ಲಿಸುತ್ತಿದ್ದು, ತನ್ನ ಕಾರ್ಯಗಳ ಮೂಲಕ ಸದಸ್ಯರ ಮನಗೆದ್ದಿದೆ” ಎಂದರು.

ಸಂಸ್ಥಾಪಕ ರಾಜ್ಯಾಧ್ಯಕ್ಷ ಜನಾಬ ಮಹಮದ್ ಸಲೀಮ್ ಹಂಚಿನಮನಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, “ಸಮುದಾಯಕ್ಕೆ ನಾವು ನಮ್ಮ ಕೊಡುಗೆಯನ್ನು ನೀಡುತ್ತಾ ಮುಸ್ಲಿಂ ನೌಕರರ ಕ್ಷೇಮಾಭಿವೃದ್ಧಿಗಾಗಿ ಸಂಘದ ಸ್ಥಾಪನೆಯಾಗಿದೆ” ಎಂದರು.

ಜಿಲ್ಲಾಧ್ಯಕ್ಷ ಆರ್ ಎಂ ದಫೇದಾರರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, “ನೌಕರರ ಹಿತ ಕಾಪಾಡುವುದರ ಜತೆಗೆ ಸಮುದಾಯಕ್ಕೆ ಶೈಕ್ಷಣಿಕ ಮಹತ್ವವನ್ನು ತಿಳಿಸುವ ಕಾರ್ಯ ಮಾಡುತ್ತಾ ಸಮುದಾಯದ ಪ್ರತಿಭೆಗಳನ್ನು ಇಂತಹ ಕಾರ್ಯಕ್ರಮದ ಮೂಲಕ ಪ್ರೋತ್ಸಾಹಿಸಲಾಗುತ್ತಿದೆ” ಎಂದರು.

ಮುಸ್ಲಿಂ ಸಮುದಾಯಕ್ಕೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳ ಕುರಿತು ‌ಹಲವು ಇಲಾಖೆಗಳ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಕಾರ್ಯಾಗಾರ ನಡೆಸಿದರು. ಇದೇ ವೇಳೆ 124 ವಿದ್ಯಾರ್ಥಿಗಳಿಗೆ ಸನ್ಮಾನ, 20 ಶಾಲೆಗಳಿಗೆ ಪ್ರಶಸ್ತಿ ಮತ್ತು 17 ಜನ ವಿಶೇಷ ಸಾಧಕರಿಗೆ ಪುರಸ್ಕರಿಸಿದರು.

ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಸಾವಯವ ಪದ್ದತಿಯಲ್ಲಿ ತೊಗರಿ ಬೆಳೆ

ಈ ಸಮಾರಂಭದಲ್ಲಿ ದೇವಿದಾಸ್ ಶಾಂತಿಕರ, ಎಂ ಯು ಶಿರಹಟ್ಟಿ, ಎಸ್ ಎಂ ಹುಡೇದಮನಿ, ಅಕ್ಬರ್ ಅಲಿ ಖಾಜಿ, ಫರೀದಾ ನದಾಫ್, ಪೀರವಾಲೆ, ಶಾನವಾಜ್ ಪಠಾಣ್, ಸಲೀಮಾಬಿ ಕೋಳೂರ, ನಫೀಸಾ ದಾವಲಸಾಬನವರ, ಫರ್ಹಾತ್ ಜಲಗೇರಿ, ಜುಬೇರ್ ಖಂಡುನಾಯ್ಕ್, ಎ ಎ ಚಕೋಲಿ, ಎ ಕೆ ಮುಜಾವರ, ಎನ್ ಆರ್ ಪಟೇಲ್, ಸಂಗ್ರೇಶಕೊಪ್ಪ, ಅಕ್ಬರ್, ಎ ಆರ್ ಅಕ್ಕಿ, ಜಿಮಖಾನೆ, ನಸ್ರೀನ್ ಪಾಚಾಪುರ, ಜಾವೇದ್, ಅಬಿದಾ ಮುಲ್ಲಾ, ಅಬುತಾಹೀರ್ ಮುಲ್ಲಾ, ಜಾವೇದ್ ಖತೀಬ್ ಸೇರಿದಂತೆ ಹಲವು ಗಣ್ಯರು ಇದ್ದರು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಎಚ್‌ಡಿಕೆ ಹೇಳಿಕೆಗೆ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷರ ಖಂಡನೆ

ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು...

ಕಲಬುರಗಿ | ಪ್ರಜಾಪ್ರಭುತ್ವದ ಉಳಿವಿಗಾಗಿ ರಾಜ್ಯಾದ್ಯಂತ ಕಾಂಗ್ರೆಸ್‌ಗೆ ಬೆಂಬಲ: ದಸಂಸ

2024ರ ಲೋಕಸಭಾ ಚುನಾವಣೆಯಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿವಿಗಾಗಿ ರಾಜ್ಯಾದ್ಯಂತ ಕಾಂಗ್ರೆಸ್‌...

ದಾವಣಗೆರೆ | ಭಾರತ ದೇಶ ಇರುವವರೆಗೂ ಸಂವಿಧಾನ ಇರುತ್ತದೆ: ಪ್ರಾಂಶುಪಾಲ ಕಲ್ಲೇಶ್‌

ಭಾರತ ದೇಶ ಇರುವವರೆಗೂ ಸಂವಿಧಾನ ಇರುತ್ತದೆ. ಅದರ ಬದಲಾವಣೆ ಯಾರಿಂದಲೂ ಸಾಧ್ಯವಿಲ್ಲ...

ರಾಯಚೂರು | ಎಚ್‌ಡಿಕೆಯಿಂದ ಮಹಿಳೆಯರಿಗೆ ಅವಮಾನ, ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ

ರಾಜ್ಯ ಸರ್ಕಾರ ಜಾರಿಗೊಳಿಸಿರುವ ಐದು ಗ್ಯಾರಂಟಿ ಯೋಜನೆಗಳ ಕುರಿತು ಜೆಡಿಎಸ್ ರಾಜ್ಯಾಧ್ಯಕ್ಷ...