ತೆಲಂಗಾಣದ ಮಾಜಿ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಪುತ್ರಿ, ಭಾರತ್ ರಾಷ್ಟ್ರ ಸಮಿತಿಯ ವಿಧಾನ ಪರಿಷತ್ ಸದಸ್ಯೆ ಕಲ್ವಕುಂಟ್ಲ ಕವಿತಾ ಅವರು ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆಯಿಂದ ಕೋಟ್ಯಂತರ ಹಿಂದೂಗಳ ಕನಸು ನನಸಾಗಲಿದೆ ಎಂದು ಹೇಳಿದ್ದಾರೆ.
ಈ ಬಗ್ಗೆ ಅವರು ರಾಮಮಂದಿರದ ವಿಡಿಯೋವನ್ನು ಹಂಚಿಕೊಂಡು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಅಯೋಧ್ಯೆಯಲ್ಲಿ ಶ್ರೀ ಸೀತಾರಾಮಚಂದ್ರ ಸ್ವಾಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಿದ ಶುಭ ಸಮಯದಲ್ಲಿ ತೆಲಂಗಾಣ ಸೇರಿದಂತೆ ಇಡೀ ದೇಶವೇ ಅದನ್ನು ಸ್ವಾಗತಿಸುತ್ತದೆ” ಎಂದು ಅವರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
శుభ పరిణామం..
అయోధ్యలో శ్రీ సీతారామ చంద్ర స్వామి వారి ప్రతిష్ట,
కోట్లాది హిందువుల కల నిజం కాబోతున్న శుభ సమయంలో…
తెలంగాణతో పాటు దేశ ప్రజలందరూ స్వాగతించాల్సిన శుభ ఘడియలు..జై సీతారామ్ pic.twitter.com/qzH7M32cQJ
— Kavitha Kalvakuntla (@RaoKavitha) December 10, 2023
ತೆಲಂಗಾಣದ ನೂತನ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಬಿಆರ್‌ಎಸ್ ಬಿಜೆಪಿಯ ಬಿ ಟೀಮ್ ಎಂದು ಆರೋಪಿಸಿದ್ದರು. ದೇಶದಾದ್ಯಂತ ವಿರೋಧ ಪಕ್ಷಗಳ ಬಹುತೇಕ ನಾಯಕರನ್ನು ಜೈಲಿಗೆ ಹಾಕಿದ ಮೋದಿ ಸರ್ಕಾರವು, ದೆಹಲಿ ಮದ್ಯ ನೀತಿ ಹಗರಣದಲ್ಲಿ ಆರೋಪಿಯಾಗಿದ್ದರೂ ಕವಿತಾ ಅವರನ್ನು ಬಂಧಿಸದೇ ಇರಲು ಅದೇ ಕಾರಣ ಎಂದಿದ್ದರು.
ಅಯೋಧ್ಯೆಯ ರಾಮಮಂದಿರವನ್ನು 2024ರ ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಕವಿತಾ ಅವರು ಎಕ್ಸ್ ಪೋಸ್ಟ್ ಹಂಚಿಕೊಂಡಿದ್ದಾರೆ. ಅವರ ಈ ಎಕ್ಸ್ ಪೋಸ್ಟ್ ಹಲವು ಮಾರ್ಮಿಕ ಸಂದೇಶಗಳನ್ನು ಒಳಗೊಂಡಿದೆ ಎಂದು ತೆಲಂಗಾಣದ ಮುಖಂಡರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.