ಇದೇ ಡಿಸೆಂಬರ್ ೩೦ರಂದು ನಗರದ ಡಾ.ಪೂಜ್ಯ ಚೆನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಹಮ್ಮಿಕೊಂಡಿರುವ ಪ್ರಥಮ ಜಿಲ್ಲಾ ದಾಸ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಸಾಹಿತಿ ಬಿ.ಎಂ.ಅಮರವಾಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ ಚನ್ನಶೆಟ್ಟಿ ತಿಳಿಸಿದ್ದಾರೆ.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಸರ್ವಾನುಮತದ ತೀರ್ಮಾನ ತೆಗೆದುಕೊಂಡಿದ್ದು, ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಎಸ್.ಮನೋಹರ ಅವರು ಬಿ.ಎಂ.ಅಮರವಾಡಿ ಅವರ ಹೆಸರನ್ನು ಪ್ರಸ್ತಾಪಿಸಿದಾಗ ಜಿಲ್ಲಾ ಕೋಶಾಧ್ಯಕ್ಷರಾದ ಶಿವಶಂಕರ ಟೋಕರೆ ಮತ್ತು ವಿಜಯಕುಮಾರ ಸೋನಾರೆ ಅನುಮೋದಿಸಿದರು.
ಸಮೇಳನಾಧ್ಯಕ್ಷರ ಪರಿಚಯ :
ಬಿ.ಎಂ.ಅಮರವಾಡಿ ಅವರ ಮೂಲ ಹೆಸರು ಬಾಲಾಜಿ ಮೇತ್ರೆ, ಎಂ.ಎ., ಎಂ.ಎಸ್ಸಿ (ಬಿಎಡ್) ಪದವೀಧರರಾಗಿದ್ದು, ವೃತ್ತಿಯಲ್ಲಿ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದಾರೆ. ಜಿಲ್ಲೆಯ ಕಲೆ, ಸಾಹಿತ್ಯ, ಸಂಸ್ಕೃತಿಯ ಸಂವರ್ಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಶ್ರಮಿಸುತ್ತಿದ್ದಾರೆ. 2009ರಲ್ಲಿ ರಾಜ್ಯ ಮಟ್ಟದ ದಾಸ ಸಾಹಿತ್ಯ ಪರಿಷತ್ತನ್ನು ಬೀದರ್‌ನಲ್ಲಿ ಸ್ಥಾಪಿಸಿ, ಕಲಬುರ್ಗಿ ವಿಭಾಗದ ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಘಟಕಗಳು ರಚಿಸಿ ಸುಧೀರ್ಘ ಒಂದುವರೆ ದಶಕದಿಂದ ದಾಸ ಸಾಹಿತ್ಯದ ಪ್ರಸಾರ ಪ್ರಚಾರ ಕೆಲಸ ಮಾಡುತ್ತ ಬಂದಿದ್ದಾರೆ. 2013ರಲ್ಲಿ ಕರ್ನಾಟಕ ರಾಜ್ಯ ಮಟ್ಟದ ಪ್ರಥಮ ದಾಸ ಸಾಹಿತ್ಯ ಸಮ್ಮೇಳನ ಪ್ರೋ.ವಸಂತ ಕುಷ್ಟಗಿ ಅವರ ಸರ್ವಾಧ್ಯಕ್ಷತೆಯಲ್ಲಿ ಹಾಗೂ 2014ರಲ್ಲಿ ಅಖಿಲ ಕರ್ನಾಟಕ ದ್ವೀತಿಯ ದಾಸ ಸಾಹಿತ್ಯ ಸಮ್ಮೇಳನವನ್ನು ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ಸರ್ವಾಧ್ಯಕ್ಷತೆಯಲ್ಲಿ ನೆರವೇರಿಸಿ, ಬೀದರನಲ್ಲಿ ದಾಸ ಸಾಹಿತ್ಯ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
“ಈಗಾಗಲೇ ಅಮರವಾಡಿಯವರ ʼಸಂಪ್ರೀತಿʼ ಎಂಬ ಕವನ ಸಂಕನಲ ಪ್ರಕಟವಾಗಿದ್ದು, ವೈಚಾರಿಕ ಸಂತ ಕನಕದಾಸರು, ಪ್ರಪಂಚದ ಏಳು ಅದ್ಭುತಗಳು, ಕನ್ನಡದ ಅಸ್ಮಿತೆ, ಕನ್ನದೈಸಿರಿ ಎನ್ನುವ ಇತರ ನಾಲ್ಕು ಕೃತಿಗಳನ್ನು ರಚಿಸಿ ಪ್ರಕಟಣೆಯ ಸಿದ್ಧತೆಯಲ್ಲಿದ್ದಾರೆ. ಅಮರವಾಡಿಯವರಿಗೆ ಈಗಾಗಲೇ ಕನಕಶ್ರೀ ಪ್ರಶಸಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಕನಕ ಗೌರವ ಪುರಸ್ಕಾರ, ಕಲ್ಯಾಣ ಕರ್ನಾಟಕ ಯುವ ಸಾಹಿತ್ಯರತ್ನ ಪ್ರಶಸ್ತಿ, ಕನ್ನಡ ಸೇವಾರತ್ನ ಪ್ರಶಸ್ತಿಗಳು ಸಂದಿವೆ” ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಅಂಗನವಾಡಿಗಿಲ್ಲ ಸ್ವಂತ ಕಟ್ಟಡ; ಬಯಲು ರಂಗಮಂದಿರದ ಕೊಠಡಿಯೇ ಗತಿ
ಸಭೆಯಲ್ಲಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಶಿವಕುಮಾರ ಕಟ್ಟೆ, ಉಪಾಧ್ಯಕ್ಷ ದಾನಿ ಬಾಬುರಾವ, ಸೇರಿದಂತೆ ಕಸಾಪದ ಪ್ರಮುಖರಾದ ಗೌರೆ ವಿಜಯಕುಮಾರ, ವಿಜಯಕುಮಾರ ಸೋನಾರೆ, ಶಿವಕುಮಾರ ಚನ್ನಶಟ್ಟಿ, ಶ್ರೀಕಾಂತ ಬಿರಾದಾರ, ಸುನೀಲ ಭಾವಿಕಟ್ಟಿ, ಪರಮೇಶ್ವರ ಬಿರಾದಾರ, ಯೋಗೇಶ ಮಠದ, ರೇಖಾ ಅಪ್ಪರಾವ ಸೌದಿ, ಡಾ. ಸಿ. ಆನಂದರಾವ, ಮಂಜುನಾಥ ಮುದ್ದಾ, ವಿಜಯಕುಮಾರ ಅಷ್ಠೂರೆ, ಸಿದ್ಧಾರೂಢ ಭಾಲ್ಕೆ ಇತರಿದ್ದರು.