ಮಧ್ಯಪ್ರದೇಶದ ಮುಖ್ಯಮಂತ್ರಿ ಸ್ಥಾನಕ್ಕೆ ಬಿಜೆಪಿ ಹೈಕಮಾಂಡ್ ಶಿವರಾಜ್ ಸಿಂಗ್ ಚೌಹಾಣ್ ಅವರ ಬದಲಿಗೆ ಮೋಹನ್ ಯಾದವ್ ಅವರನ್ನು ಆಯ್ಕೆ ಮಾಡಿದೆ. ಯಾದವ್ ಬಿಜೆಪಿ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಸೋಮವಾರ ಸಂಜೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ರಾಜಭವನಕ್ಕೆ ಭೇಟಿ ನೀಡಿದ ಚೌಹಾಣ್, ರಾಜ್ಯಪಾಲ ಮಂಗೂಭಾಯಿ ಪಟೇಲ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದರು.
ಒಬಿಸಿ ನಾಯಕ ಮತ್ತು ಮೂರು ಬಾರಿ ಶಾಸಕರಾಗಿರುವ ಮೋಹನ್ ಯಾದವ್ (58) ಅವರನ್ನು ಮಧ್ಯಪ್ರದೇಶದ ಮುಂದಿನ ಮುಖ್ಯಮಂತ್ರಿಯಾಗಿ ಬಿಜೆಪಿ ಆಯ್ಕೆ ಮಾಡಿದೆ ಎಂದು ಪಕ್ಷದ ರಾಜ್ಯಾಧ್ಯಕ್ಷ ವಿಡಿ ಶರ್ಮಾ ಹೇಳಿದರು. ಈ ಮೂಲಕ ಮಧ್ಯಪ್ರದೇಶದಲ್ಲಿ ಮೂರು ಬಾರಿ ಸಿಎಂ ಆಗಿ ಆಡಳಿತ ನಡೆಸಿದ್ದ, ಮಹಿಳೆಯರ ವಲಯದಲ್ಲಿ ‘ಮಾಮಾ’ ಆಗಿ ಗುರುತಿಸಿಕೊಂಡಿದ್ದ ಚೌಹಾಣ್ ಅವರ ಯುಗ ಅಂತ್ಯವಾಯಿತು. ಆ ಮೂಲಕ ನಾಲ್ಕು ಬಾರಿಯ ಸಿಎಂ ಅನ್ನು ಬಿಜೆಪಿ ಹೈಕಮಾಂಡ್ ಸಾಮಾನ್ಯ ಕಾರ್ಯಕರ್ತನಾಗಿ ಮಾಡಿತು.
ಮಧ್ಯಪ್ರದೇಶ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಶಿವರಾಜ್ ಸಿಂಗ್ ಚೌಹಾಣ್ ಮನೆಗೆ ಭೇಟಿ ನೀಡಿದ ಮಹಿಳಾ ಬೆಂಬಲಿಗರು ಭಾವುಕರಾಗಿ, ಬಿಜೆಪಿ ಹೈಕಮಾಂಡ್ ಸಿಎಂ ಸ್ಥಾನ ತಪ್ಪಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.
#WATCH | Bhopal: Former Madhya Pradesh Chief Minister and senior BJP leader Shivraj Singh Chouhan meets women supporters.
(Source: Shivraj Singh Chouhan’s office) pic.twitter.com/oWlHYUYlpJ
— ANI (@ANI) December 12, 2023
ಇವರೊಂದಿಗೆ ಶಿವರಾಜ್ ಸಿಂಗ್ ಚೌಹಾಣ್ ಕೂಡ ಭಾವುಕರಾದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದೆ. ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ‘ಲಾಡ್ಲಿ ಬೆಹನ್’ ಯೋಜನೆಯ ಫಲಾನುಭವಿಗಳು ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಅಪ್ಪಿಕೊಂಡು ಅಳುತ್ತಿರುವುದನ್ನು ಕಾಣಬಹುದು. ಜೊತೆಗೆ ನೀವು ಮುಖ್ಯಮಂತ್ರಿ ಸ್ಥಾನವನ್ನು ತೊರೆಯಬೇಡಿ ಎಂದು ಆಗ್ರಹಿಸುತ್ತಿರುವುದು ದಾಖಲಾಗಿದೆ.
“ನೀವು ಎಲ್ಲರಿಗೂ ಪ್ರೀತಿಪಾತ್ರರು. ನಾವು ನಿಮಗೋಸ್ಕರ ಮತ ಹಾಕಿದ್ದೇವೆ. ನಿಮ್ಮನ್ನು ನಾವು ಬಿಟ್ಟುಕೊಡಲ್ಲ” ಎಂದು ಮಹಿಳೆಯರು ಭಾವುಕರಾಗಿ ಹೇಳಿದಾಗ, “ನಾನು ಯಾವತ್ತಿಗೂ ನಿಮ್ಮೊಂದಿಗೆ ಇದ್ದೇನೆ. ನಾನೂ ನಿಮ್ಮೊಂದಿಗೆ ಇರುತ್ತೇನೆ. ನಾನು ಕೂಡ ಎಲ್ಲಿಗೂ ಹೋಗಲ್ಲ” ಎನ್ನುತ್ತಿದ್ದಂತೆಯೇ ಶಿವರಾಜ್ ಸಿಂಗ್ ಚೌಹಾಣ್ ಕೂಡ ಭಾವುಕರಾಗಿದ್ದಾರೆ.
एक बड़े मिशन के लिए हम भारतीय जनता पार्टी का काम करते हैं और मिशन तय करता है कि हम कहां रहेंगे…
– माननीय श्री @ChouhanShivraj जी pic.twitter.com/HYsKg6jUAE
— Office of Shivraj (@OfficeofSSC) December 12, 2023
ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಕಾಲ ಮುಖ್ಯಮಂತ್ರಿಯಾಗಿದ್ದ ಶಿವರಾಜ್ ಸಿಂಗ್ ಚೌಹಾಣ್ ಅವರು 16 ವರ್ಷ 5 ತಿಂಗಳುಗಳ ಆಡಳಿತ ನಡೆಸಿದ ನಂತರ ರಾಜೀನಾಮೆ ನೀಡಿದ್ದಾರೆ.
ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿದ್ದ ಬಿಜೆಪಿ ಸರ್ಕಾರವು ‘ಲಾಡ್ಲಿ ಬೆಹ್ನಾ ಯೋಜನೆ’ಯನ್ನು ಮೊದಲು ಪರಿಚಯಿಸಿತ್ತು. ಆರಂಭದಲ್ಲಿ ಈ ಯೋಜನೆಯಡಿ ಮಹಿಳೆಯರಿಗೆ 1,000 ರೂಪಾಯಿ ಆರ್ಥಿಕ ನೆರವು ನೀಡಲಾಗುತ್ತಿದ್ದು, ಆಗಸ್ಟ್‌ನಲ್ಲಿ 1,250 ರೂಪಾಯಿಗೆ ಹೆಚ್ಚಿಸಲಾಗಿತ್ತು.
ಈ ಬಾರಿಯ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆ ಇದ್ದರೂ ಕೂಡ, ಅಚ್ಚರಿ ಎಂಬಂತಹ ಫಲಿತಾಂಶ ಹೊರಬಂದಿತ್ತು. ಒಟ್ಟು 230 ಸ್ಥಾನಗಳ ಪೈಕಿ 163 ಸ್ಥಾನಗಳನ್ನು ಗೆಲ್ಲುವ ಮೂಲಕ ಮತ್ತೊಮ್ಮೆ ಅಧಿಕಾರದ ಗದ್ದುಗೆ ಹಿಡಿದಿತ್ತು. ಉಳಿದಂತೆ ಕಮಲ್‌ನಾಥ್ ನೇತೃತ್ವದ ಕಾಂಗ್ರೆಸ್ ಪಕ್ಷವು 66 ಸ್ಥಾನಗಳಲ್ಲಿ ಗೆದ್ದಿದ್ದರೆ, ಒಂದರಲ್ಲಿ ಭಾರತ್ ಆದಿವಾಸಿ ಪಕ್ಷವು ಗೆಲುವು ಪಡೆದುಕೊಂಡಿತ್ತು.
एक बात मैं बड़ी विनम्रता से कहता हूं…
अपने लिए कुछ मांगने से बेहतर, मैं मरना पसंद करूंगा।– माननीय श्री @ChouhanShivraj जी pic.twitter.com/rkLlBQgqBO
— Office of Shivraj (@OfficeofSSC) December 12, 2023