ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಚಾಲಕ ರಹಿತ ಮೆಟ್ರೋ ರೈಲು ಬೆಂಗಳೂರಿನಲ್ಲಿ ಆರಂಭಗೊಳ್ಳಲಿದೆ. ಹಳದಿ ಮಾರ್ಗದಲ್ಲಿ ಈ ರೈಲು ಸಂಚಾರ ಆರಂಭಿಸಲಿದೆ. ಈ ಹಿನ್ನೆಲೆ, ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (ಸಿಆರ್‌ಆರ್‌ಸಿ)ಯ ಲೋಕೋ-ಪೈಲಟ್‌ಗಳು, ತಂತ್ರಜ್ಞರು ಮತ್ತು ಎಂಜಿನಿಯರ್ ಒಳಗೊಂಡ 21 ಚೀನಾದ ತಾಂತ್ರಿಕ ಸಿಬ್ಬಂದಿ ಭಾರತಕ್ಕೆ ಭೇಟಿ ನೀಡಲು ವೀಸಾ ಪಡೆದಿದೆ.
ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (ಸಿಆರ್‌ಆರ್‌ಸಿ) ಎಂಜಿನಿಯರ್, ಲೋಕೋ ಪೈಲೆಟ್ ಹಾಗೂ ಟೆಕ್ನಿಕಲ್ ಸಿಬ್ಬಂದಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸಲು ಭಾರತ ಸರ್ಕಾರ ವೀಸಾ ನೀಡಿದೆ. ಒಟ್ಟು 64 ಸಿಬ್ಬಂದಿ ಬೆಂಗಳೂರಿಗೆ ಆಗಮಿಸಲಿದ್ದು, ಈ ಪೈಕಿ 21 ಮಂದಿಗೆ ವೀಸಾ ನೀಡಲಾಗಿದೆ. ಇನ್ನುಳಿದ ಸಿಬ್ಬಂದಿ ಡೇಟಾ ಪರಿಶೀಲನೆ ಕಾರ್ಯ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಚೀನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ (ಸಿಆರ್‌ಆರ್‌ಸಿ) ರೈಲನ್ನು ಸಿದ್ಧಪಡಿಸಿದ್ದು, ಡಿಸೆಂಬರ್ 15ರಂದು ಈ ರೈಲು ಭಾರತಕ್ಕೆ ರವಾನೆಯಾಗಲಿದೆ. ಮೊದಲಿಗೆ ರೈಲು ಚೆನ್ನೈ ಬಂದರನ್ನು ತಲುಪಲಿದ್ದು, ಜನವರಿ 15ರಂದು ಬೆಂಗಳೂರಿನ ಹೆಬ್ಬಗೋಡಿಗೆ ತಲುಪುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಮೊದಲ ರೈಲಿನ ಪರೀಕ್ಷಾ ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಪರಿಣತರ ಅಗತ್ಯವಿದೆ. ಉಳಿದ ರೈಲುಗಳ ನಿರ್ವಹಣೆಗೂ ಮಾರ್ಗದರ್ಶನದ ಅಗತ್ಯವಿರುತ್ತದೆ. ಇದಕ್ಕೆ ಚೀನಾದ ತಾಂತ್ರಿಕ ಸಿಬ್ಬಂದಿ ನೆರವಾಗಲಿದ್ದಾರೆ.
ಟೆಸ್ಟಿಂಗ್, ಟೆಸ್ಟ್ ರೈಲು ಚಾಲನೆ, ಇಲ್ಲಿನ ಸಿಬ್ಬಂದಿಗೆ ತರಬೇತಿ, ಸಮಸ್ಯೆ, ಸವಾಲು ಎದುರಿಸುವ ರೀತಿ ಸೇರಿದಂತೆ ಹಲವು ವಿಚಾರಗಳ ಕುರಿತು ಚೀನಾ ಸಿಬ್ಬಂದಿ ಕೆಲಸ ಮಾಡಲಿದ್ದಾರೆ.
ಎಲೆಕ್ಟ್ರಾನಿಕ್ಸ್ ಸಿಟಿ ಮತ್ತು ಸೆಂಟ್ರಲ್ ಸಿಲ್ಕ್ ಬೋರ್ಡ್ ಮೂಲಕ ಆರ್ ವಿ ರಸ್ತೆ-ಬೊಮ್ಮಸಂದ್ರದ ಹಳದಿ ಮಾರ್ಗದಲ್ಲಿ ಚಾಲಕ ರಹಿತ ಮೆಟ್ರೋ ಸಂಚರಿಸಲಿದೆ. ಅಂದುಕೊಂಡಂತೆ ಆದರೆ, ಚಾಲಕ ರಹಿತ ಮೊದಲ ಮೆಟ್ರೋ ರೈಲು ಮುಂದಿನ ವಾರ ಕಾರ್ಯಾಚರಣೆ ನಡೆಸುವ ಸಾಧ್ಯತೆಗಳಿವೆ.
ಈ ಸುದ್ದಿ ಓದಿದ್ದೀರಾ? ಕೇವಲ 1 ಕಿ.ಮೀ ವೈಟ್ ಟಾಪಿಂಗ್ ರಸ್ತೆ ನಿರ್ಮಾಣಕ್ಕೆ ₹15 ಕೋಟಿ ಖರ್ಚು : ತನಿಖೆಗೆ ಎಎಪಿ ಆಗ್ರಹ
ಕಮ್ಯುನಿಕೇಷನ್ ಬೇಸ್ಡ್ ಟ್ರೇನ್ ಕಂಟ್ರೊಲ್ ಸಿಗ್ನಲಿಂಗ್ ಸಿಸ್ಟಂ ತಂತ್ರಜ್ಞಾನವನ್ನು ಎರಡನೇ ಹಂತದ ಯೋಜನೆಯಡಿ ಅನುಷ್ಠಾನಗೊಳಿಸಲಾಗುತ್ತದೆ. ರೈಲು ಸಂಚಾರವನ್ನು ನಿಯಂತ್ರಣ ಕೊಠಡಿಯಿಂದಲೇ ನಿರ್ವಹಣೆ ಮಾಡಲಾಗುತ್ತದೆ. ಆದರೆ, ಆರಂಭದಿಂದಲೇ ಚಾಲಕ ರಹಿತ ರೈಲು ಓಡುವುದಿಲ್ಲ. ಎರಡು ವರ್ಷಗಳ ಕಾಲ ಚಾಲಕ ಸಹಿತ ರೈಲುಗಳೇ ಈ ಮಾರ್ಗದಲ್ಲಿ ಸಂಚರಿಸಲಿದ್ದು, ಸಾಕಷ್ಟು ಪೂರ್ವಾಭ್ಯಾಸದ ಬಳಿಕವಷ್ಟೇ ಇವು ಸಂಚರಿಸಲಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ.