ಮೂರು ತಿಂಗಳಿಂದ ಮನರೇಗಾದಲ್ಲಿ ಕೂಲಿ ಮಾಡಿದ ಹಣವನ್ನು ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿ ಮನರೇಗಾದಲ್ಲಿ ಕೆಲಸ ಮಾಡಿದ ದಾವಣಗೆರೆ ಜಿಲ್ಲೆ ಜಗಳೂರು ತಾಲೂಕಿನ ಪಲ್ಲಾಗಟ್ಟೆ, ಅಣಬೂರು, ದೊಣೆಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಕೂಲಿ ಕಾರ್ಮಿಕರು ಪ್ರಧಾನಮಂತ್ರಿಗೆ ಅಂಚೆ ಕಳಿಸುವ ಮುಖಾಂತರ ಪತ್ರ ಚಳುವಳಿ ನಡೆಸಿದರು.
“ಮೂರು ತಿಂಗಳಿಂದ ಮನರೇಗಾ ಯೋಜನೆಯಲ್ಲಿ ಕೂಲಿ ಮಾಡಿದ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತಿಲ್ಲ. ತಾಲೂಕುಗಳಲ್ಲಿ ಬರಗಾಲವೆಂದು ಘೋಷಣೆ ಮಾಡಿದರೂ ಕೂಡ ಹೆಚ್ಚುವರಿ 50 ದಿನ ಮಾನವ ದಿನಗಳನ್ನು ಕೊಡುತ್ತಿಲ್ಲ” ಎಂದು ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ತಾಲೂಕು ಕಾರ್ಯಕರ್ತೆ ಸುಧಾ ಪಲ್ಲಾಗಟ್ಟಿ ಆರೋಪಿಸಿದರು.
“ಇಡೀ ಕರ್ನಾಟಕದಲ್ಲಿ ಮಳೆ ಇಲ್ಲದೆ ಜನರು ಕಂಗಾಲಾಗಿದ್ದಾರೆ. ಜನರು ಜೀವನ ಮಾಡುವುದೇ ಕಷ್ಟಕರವಾಗಿದೆ. ಕೇಂದ್ರ ಸರ್ಕಾರ ಕೂಡಲೇ ಹಣ ಬಿಡುಗಡೆ ಮಾಡಬೇಕು” ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ದಕ್ಷಿಣ ಕನ್ನಡ | ಟೋಲ್ ಹೋರಾಟಗಾರರ ವಿರುದ್ಧ ಚಾರ್ಜ್ ಶೀಟ್
ಪ್ರತಿಭಟನೆಯಲ್ಲಿ ದೊಣ್ಣೆಹಳ್ಳಿ ಜಿಪಿ ಕಾರ್ಯಕರ್ತೆ ಮಾಲಾಶ್ರೀ, ದೊಣ್ಣೆಹಳ್ಳಿ ಗ್ರಾಮದ ಬೋರಯ್ಯ, ಕೆಚ್ಚೇನಹಳ್ಳಿ ಜಿಪಿ ಕಣ್ಣುಕುಪ್ಪೆ ಶೃತಿ, ಕೆಚ್ಚೇನಹಳ್ಳಿ ವಸಂತಮ್ಮ, ಹನುಮವ್ವ, ನಾಗತಿಹಳ್ಳಿ ಪ್ರತಿಭಾ, ಗೀತಮ್ಮ, ಚಂದ್ರಪ್ಪ, ಜ್ಯೋತಿಪುರ ಮಹಾಲಕ್ಷ್ಮಿ, ಬಸಮ್ಮ, ದೇವಮ್ಮ, ಮಹಾಲಕ್ಷ್ಮಿ ಸೇರಿದಂತೆ ಇತರ ಗ್ರಾಮೀಣ ಕೂಲಿ ಕಾರ್ಮಿಕರು ಭಾಗವಹಿಸಿದ್ದರು.