ಹಾವೇರಿ ಜಿಲ್ಲೆಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ನಡೆದ ಅಕ್ರಮ ನೇಮಕಾತಿ ಬಗ್ಗೆ, ಅಧಿವೇಶನದಲ್ಲಿ ಧ್ವನಿ ಎತ್ತಿದ ಹುಬ್ಬಳ್ಳಿ – ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಸಾದ ಅಬ್ಬಯ್ಯ ಅವರಿಗೆ ಡಾ. ಶಿವಸೋಮಪ್ಪ ನಿಟ್ಟೂರು ಧನ್ಯವಾದ ತಿಳಿಸಿದರು.
ಧಾರವಾಡ ನಗರದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, “ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಗೋಟಗೋಡಿಯ ಜಾನಪದ ವಿಶ್ವವಿದ್ಯಾಲಯ ಜಗತ್ತಿನ ಏಕೈಕ ಜಾನಪದ ವಿಶ್ವವಿದ್ಯಾಲಯ. ಇಂತಹ ವಿಶ್ವವಿದ್ಯಾಲಯದ ಕುಲಪತಿ ಟಿ ಎಂ ಭಾಸ್ಕರ, ಕುಲಸಚಿವ ಹಾಗೂ ಶಹಜಾನ್ ಮುದಕವಿ ಎಂಬ ವ್ಯಕ್ತಿ ಸೇರಿ 24 ಬೋಧಕ ಹಾಗೂ ಬೋಧಕೇತರ ಹುದ್ದೆಗೆ ನೇಮಕ ಮಾಡಿಕೊಂಡಿದ್ದಾರೆ. ಈ ಕುರಿತು ತನಿಖೆ ನಡೆಸಿ, ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳು ನ್ಯಾಯ ಕೋರಿ ರಾಜ್ಯಪಾಲರಿಗೆ, ಉನ್ನತ ಶಿಕ್ಷಣ ಸಚಿವರಿಗೆ ಹಾಗೂ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಿದ್ದರೂ, ಯಾವುದೇ ಪುಯೋಜನ ಆಗಿಲ್ಲ” ಎಂದು ಆರೋಪಿಸಿದರು.
“ಅಲ್ಲಿ ನಡೆದಿರುವ ಅಕ್ರಮಗಳನ್ನು ತುರ್ತಾಗಿ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕು. ಅರ್ಹತೆಯುಳ್ಳವರನ್ನು ಗಮನಿಸಬೇಕೆಂದು ಶಾಸಕ ಪ್ರಸಾದ ಅಬ್ಬಯ್ಯ ಅವರು ಬೆಳಗಾವಿ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತಿರುವುದು ಖುಷಿ ತಂದಿದೆ” ಎಂದರು .
ರಾಜ್ಯ ಸರ್ಕಾರ ನಿವೃತ್ತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಕಮಿಟಿ ರಚಿಸುವ ಮೂಲಕ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಂಡು, ಅನ್ಯಾಯಕ್ಕೆ ಒಳಗಾದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು. ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಸಚಿವ ಎಚ್.ಕೆ.ಪಾಟೀಲ್ ಹಾಗೂ ನೊಂದವರ ಪ್ರತಿಭಾವಂತರ ಬೆನ್ನಿಗೆ ಇರಲಿ ಎಂಬುದು ನೊಂದ ಅಭ್ಯರ್ಥಿಗಳ ವಿನಂತಿ ಎಂದರು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಪ್ರತ್ಯೇಕ ಮಹಾನಗರ ಪಾಲಿಕೆ ರಚನೆಗೆ ಶೀಘ್ರ ಕ್ರಮ: ನಗರಾಭಿವೃದ್ಧಿ ಸಚಿವ
“ಜಾನಪದ ವಿಶ್ವವಿದ್ಯಾಲಯ ಸ್ಮಾಪನೆ ಆದಾಗಿಂದಲೂ ಅಲ್ಲಿನ ಅವ್ಯವಸ್ಥೆ, ನಡೆದ ಅಕ್ರಮ, ಭ್ರಷ್ಟಾಚಾರ ಎಲ್ಲವೂ ತನಿಖೆಯ ಮೂಲಕ ಹೊರಗೆ ಬರಬೇಕು. ನೊಂದ ಅಭ್ಯರ್ಥಿಗಳಿಗೆ ನ್ಯಾಯ ಒದಗಿಸಬೇಕು” ಎಂದರು
ಡಾ. ಬಸವರಾಜ ದುಗಾಣಿ, ಕುಮಾರ ಓಲೇಕಾರ, ಶರಣಪ್ಪ ಪೂಜಾರ, ಭೀಮಪ್ಪ ಬಜಂತ್ರಿ, ಡಾ ಎಂ ವೈ ಬ್ಯಾಲ್ಯಾಳ, ಡಾ ಮಾಲತೇಶ ಬಾರ್ಕಿ ಇದ್ದರು.