ಧಾರವಾಡ | ಭಾರತದಲ್ಲಿ ಸಾವಯವ ಉತ್ಪಾದನೆ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯಕ್ಕಾಗಿ ತಯಾರಿ; ಸಮಾರೋಪ ಕಾರ್ಯಕ್ರಮ

Date:

Advertisements

ಈ ತರಬೇತಿಯಲ್ಲಿ ಒಟ್ಟು 37 ಉಪನ್ಯಾಸಗಳು, 7 ಪ್ರಾಯೋಗಿಕ ತರಗತಿಗಳು ಮತ್ತು 6 ವಿವಿಧ ಸಾವಯವ ಮತ್ತು ನೈಸರ್ಗಿಕ ಕೃಷಿಕರ ರೈತರ ಕ್ಷೇತ್ರಗಳಿಗೆ ಭೇಟಿ ನೀಡಿ, ಭಾರತದಲ್ಲಿ ಈ ವಿಷಯದಲ್ಲಿ ಅತಿ ನುರಿತ ತಜ್ಞರಿಂದ ಸಾವಯವ ಪದ್ಧತಿಗಳ ಉತ್ಪಾದನೆ, ಸಂಸ್ಕರಣೆ, ಪ್ರಾಮಾಣೀಕರಣ, ಮಾರುಕಟ್ಟೆಯ ವ್ಯವಸ್ಥೆ ಮತ್ತು ರಫ್ತು ವಹಿವಾಟು ಮಾಡುವ ಬಗ್ಗೆ ಉಪನ್ಯಾಸ ನೀಡಿದ್ದು, ವಿವಿಧ ರಾಜ್ಯಗಳ ವಿಜ್ಞಾನಿಗಳಿಗೆ ತರಬೇತಿ ನೀಡಲಾಗಿದೆ ಎಂದು ತರಬೇತಿ ನಿರ್ದೇಶಕ ಸೂಕ್ಷ್ಮಜೀವ ಶಾಸ್ತ್ರದ ಪ್ರಾಧ್ಯಾಪಕ ಡಾ ಸಿ ಆರ್ ಪಾಟೀಲ ತಿಳಿಸಿದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯ ಧಾರವಾಡ ಮತ್ತು ಕೃಷಿ ಅನುಸಂದಾನ ಪರಿಷತ್ ನವದೆಹಲಿಯ ಸಾಂಸ್ಥಿಕ ಅಭಿವೃದ್ಧಿ ಯೋಜನೆ ಇವರ ಸಂಯುಕ್ತ ಆಶ್ರಯದಲ್ಲಿ ಭಾರತದ ವಿವಿಧ ರಾಜ್ಯದ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳಿಗೆ ಧಾರವಾಡದ ಕೃಷಿ ವಿವಿ ಕುಲಪತಿಗಳ ಸಭಾಂಗಳದಲ್ಲಿ ನವೆಂಬರ್ 29ರಿಂದ ಡಿಸೆಂಬರ್ 12ರವರೆಗೆ ಹಮ್ಮಿಕೊಂಡಿದ್ದ ಭಾರತದಲ್ಲಿ ಸಾವಯವ ಉತ್ಪಾದನೆ ಪ್ರಸ್ತುತ ಸ್ಥಿತಿ ಮತ್ತು ಭವಿಷ್ಯಕ್ಕಾಗಿ ತಯಾರಿ ಎಂಬ ರಾಷ್ಟ್ರ ಮಟ್ಟದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

“ತರಬೇತಿಯಲ್ಲಿ ಭಾಗವಹಿಸಿದ ವಿವಿಧ ಶಿಭಿರಾರ್ಥಿಗಳು ಅವರ ಅನಿಸಿಕೆಗಳನ್ನು ಹಂಚಿಕೊಳ್ಳುತ್ತ ನಮ್ಮೆಲ್ಲರಿಗೂ ಸಾವಯವ ಕೃಷಿ ಎಂದರೆ ಏನು?, ಸಾವಯವ ಕೃಷಿಯನ್ನು ಬೆಳೆಯಲು ಯಾವ ಯಾವ ಜೈವಿಕ ಉತ್ಪನ್ನಗಳು ಬೇಕು, ಪೋಷಕಾಂಶಗಳನ್ನು, ಕೀಟ ಮತ್ತು ರೋಗವನ್ನು ಹೇಗೆ ನಿರ್ವಹಣೆ ಮಾಡಬೇಕು, ನೈಸರ್ಗಿಕ ಮತ್ತು ಸಾವಯವ ಕೃಷಿಗೂ ವ್ಯತ್ಯಾಸವೇನು, ಪ್ರಮಾಣೀಕರಣ, ಮಾರುಕಟ್ಟೆ ಮತ್ತು ಇರುವ ಸೌಲಭ್ಯಗಳು ಯಾವುವು ಎಂಬುದು ಸಂಪೂರ್ಣವಾಗಿ ತಿಳಿಯಿತು. ಇದರಿಂದ ನಮ್ಮ ವಿಶ್ವ ವಿದ್ಯಾಲಯಗಳಲ್ಲಿ ಸಂಶೋಧನೆ ಕೈಗೊಳ್ಳಲು ಮತ್ತು ರೈತರಿಗೆ ತರಬೇತಿ ನೀಡಲು ಬಹಳ ಅನುಕೂಲವಾಗಿದೆ” ಎಂದು ತಿಳಿಸಿದರು.

Advertisements

ತರಬೇತಿಯ ಸಮಾರೋಪ ಸಮಾರಾಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬೆಂಗಳೂರಿನ ಕೃಷಿ ವಿ ವಿ ವಿಶ್ರಾಂತ ಕುಲಪತಿ ಡಾ ಎಂ ಎನ್ ಶೀಲವಂತರವರು ಮಾತನಾಡಿ, “ತರಬೇತಿಯ ಶಿಬಿರಾರ್ಥಿಗಳನ್ನು ಉದ್ಧೇಶಿಸಿ, ಮಣ್ಣು ಎಂಬುದು ಒಂದು ಜೀವಂತವಿರುವ ವಸ್ತು, ಸಾಕಷ್ಟು ಪ್ರಮಾಣದ ಸಾವಯವ ವಸ್ತುಗಳನ್ನು ಬಳಸಿದರೆ ಮಣ್ಣು ಚೆನ್ನಾಗಿ ಉಸಿರಾಡುವುದು. ಇದರಿಂದ ಸಾವಯವ ಇಂಗಾಲ ಹೆಚ್ಚಾಗುವುದು. ಭಾರತದ ಬಹಳಷ್ಟು ಮಣ್ಣಿನಲ್ಲಿ ಸಾವಯವ ಇಂಗಾಲ ಶೇ.0.4 ಕ್ಕಿಂತ ಕಡಿಮೆಯಾಗಿದೆ. ರಾಸಾಯನಿಕ ಗೊಬ್ಬರಗಳ ಮೂಲಕ ಕೆಲವೇ ಕೆಲವು ಪೋಷಕಾಂಶಗಳನ್ನು ಮಾತ್ರ ಒದಗಿಸಲಾಗುತ್ತಿದೆ. ಆದರೆ ಬೆಳೆಗೆ ಸುಮಾರು 16 ಪೋಷಕಾಂಶಗಳ ಅವಶ್ಯವಿದೆ. ಇದರಿಂದ ಮಣ್ಣಿನಲ್ಲಿ ಸಾಕಷ್ಟು ಲಘು ಪೋಷಕಾಂಶಗಳು ಕೊರತೆಯಾಗಿದ್ದು, ನಾವು ಬಳಸುವ ಆಹಾರದಲ್ಲೂ ಸಹ ಈ ಲಘು ಪೋಷಕಾಂಶಗಳು ಕೊರತೆಯಾಗಿ ಮನುಷ್ಯರೂ ಕೂಡ ಕೀಲು ನೋವು, ಬೊಜ್ಜು ಮತ್ತು ಅನೀಮಿಯಾದಿಂದ ಬಳಲುತ್ತಿದ್ದಾರೆ” ಎಂದು ತಿಳಿಸಿದರು.

ಯೂರೋಪ್ ಮತ್ತು ಆಸ್ಟ್ರೇಲಿಯಾ ದೇಶಗಳಿಗೆ ಭೇಟಿ ನೀಡಿದ ಅನುಭವವನ್ನು ಅಂಚಿಕೊಳ್ಳುತ್ತಾ, “ಸಾವಯವ ವಸ್ತುಗಳನ್ನು ನಿರ್ವಹಣೆ ಮಾಡಲು ಯುರೋಪ್‌ನಂತಹ ದೇಶಗಳಲ್ಲಿ ಬೇಸಿಗೆಯಲ್ಲಿ ಹನಿ ನೀರಾವರಿ ಮಾಡಿ ಮಣ್ಣು ಗಾಳಿಯಿಂದ ಸವಕಳಿಯಾಗುವುದನ್ನು ನಿರ್ವಹಿಸಿತ್ತಿದ್ದಾರೆ. ಇದರಿಂದ ಭೂಮಿಯಲ್ಲಿ ಸಾಕಷ್ಟು ಪ್ರಮಾಣದ ಸಾವಯವ ವಸ್ತುಗಳು ಸಂಗ್ರಹಣೆಯಾಗಿ ಎರೆ ಹುಳುಗಳ ಸಂಖ್ಯೆ ಸಾಕಷ್ಟಿದೆ. ಹವಾಮಾನಕ್ಕೆ ಸೂಕ್ತವಿರುವ ಬೆಳೆಗಳನ್ನು ಮತ್ತು ಬಹುವಾರ್ಷಿಕ ಬೆಳೆ ಪದ್ದತಿಯನ್ನು ಅಳವಡಿಸಿಕೊಳ್ಳಬೇಕು” ಎಂದು ತಿಳಿಸಿ, ತರಬೇತಿಯ ಎಲ್ಲ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿದರು.

ತರಬೇತಿಯ ಉದ್ಘಾಟನೆ ಮತ್ತು ಮುಕ್ತಾಯ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕೃ.ವಿ.ವಿ. ಧಾರವಾಡದ ಕುಲಪತಿ ಡಾ. ಪಿ ಎಲ್ ಪಾಟೀಲರು ಮಾತನಾಡಿ, “ಧಾರವಾಡದ ಸಾವಯವ ಕೃಷಿ ಸಂಸ್ಥೆ ಬಹಳ ಶ್ರೀಮಂತ ಅನುಭವವನ್ನು ಹೊಂದಿದ್ದು, ತಾವುಗಳು ಆ ಅನುಭವವನ್ನು ಪಡೆದು ಭೂಮಾತಾ ಮತ್ತು ಗೋಮಾತ ಇವುಗಳನ್ನು ನಿರ್ಲಕ್ಷ್ಯ ಮಾಡದೆ ಪಂಚ ಮಹಾಭೂತಗಳಲ್ಲಿ ಒಂದಾದ ಭೂಮಿಯನ್ನು ಜೀವಂತಗೊಳಿಸಬೇಕು” ಎಂದು ತಿಳಿಸಿದರು.

ಈ ಸಾವಯವ ಕೃಷಿ ಸಂಸ್ಥೆಯಲ್ಲಿರುವ ಮೂಲ ಸೌಕರ್ಯಗಳು ಪ್ರಯೋಗಾಲಯಗಳು, ಸಮೂಹ ಉತ್ಪಾದನಾ ಘಟಕಗಳನ್ನು ಮತ್ತು ಅಭಿವೃದ್ಧಿಗೊಂಡಿರುವ ತಾಂತ್ರಿಕತೆಗಳನ್ನು ಶಿಬಿರಾರ್ಥಿಗಳೇ ನೋಡಿ ಅನುಭವಿಸಿದ್ದನ್ನು ಮತ್ತು ಈ ತರಬೇತಿಯಲ್ಲಿ ಸಂಪೂರ್ಣವಾಗಿ ಕಲಿತಿದ್ದನ್ನು ವಿವರಿಸಿದ್ದಾರೆ.

“ಇತ್ತೀಚಿನ ದಿನಮಾನಗಳಲ್ಲಿ ಮಣ್ಣು, ನೀರು, ಗಾಳಿ ಮತ್ತು ವಾತಾವರಣ ಕಲುಷಿತಗೊಳ್ಳುತ್ತಿದೆ. ಕೃಷಿಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ಮಾಡುವುದರ ಜತೆಗೆ ಅಂತರ್ಜಲ ಮರುಪೂರಣಕ್ಕೆ ಆದ್ಯತೆ ಕೊಟ್ಟು ಸಾವಯವ ಕೃಷಿ ಕಡೆ ಹೆಚ್ಚು ಗಮನ ಹರಿಸಬೇಕು. ಸಾವಯವ ಕೃಷಿಯು ಪರಿಸರ ಸ್ನೇಹಿ ಕೃಷಿಯಾಗಿದ್ದು, ಗುಣಮಟ್ಟದ ಆಹಾರ ಉತ್ಪಾದನೆಗೆ ಸಹಕಾರಿಯಾಗಿದೆ ಹಾಗೂ ವಿಜ್ಞಾನಿಗಳೂ ಸಾವಯವ ಕೃಷಿಯನ್ನು ಹಂತ ಹಂತವಾಗಿ ಅರಿತುಕೊಂಡು ರೈತರು ಅಳವಡಿಕೆ ಮಾಡಿಕೊಳ್ಳಲು ತರಬೇತಿ ನೀಡಿ ಹೆಚ್ಚೆಚ್ಚು ಪ್ರೇರೆಪಿಸಬೇಕು” ಎಂದು ತಿಳಿಸಿದರು.

“ಧಾರವಾಡದ ಕೃಷಿ ವಿಶ್ವ ವಿದ್ಯಾಲಯ ರೈತರ ವಿಶ್ವ ವಿದ್ಯಾಲಯ ಇಲ್ಲಿಗೆ ಲಕ್ಷೋಪಲಕ್ಷ ರೈತರು ಭೇಟಿ ನೀಡಿ ನವೀನ ತಾಂತ್ರಿಕತೆಗಳನ್ನು, ಹೊಸ ತಳಿಯ ಬೀಜಗಳನ್ನು, ಜೈವಿಕ ಕೀಟನಾಶಕಗಳನ್ನು ಮತ್ತು ಜೈವಿಕ ಗೊಬ್ಬರಗಳನ್ನು ಪಡೆದು ತಮ್ಮ ಹೊಲಗಳಲ್ಲಿ ಅಳವಡಿಸಿಕೊಂಡು ಉಳಿದ ರೈತರಿಗೂ ಮಾದರಿಯಾಗಿದ್ದಾರೆ. ಇಲ್ಲಿ ಎಲ್ಲ ಹತ್ತು ಸಿರಿಧಾನ್ಯಗಳ ಉತ್ಪಾದನಾ ತಾಂತ್ರಿಕತೆಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಅಲ್ಲದೆ ಅವುಗಳ ಬಳಕೆಯ ವಿವಿಧ ಖಾದ್ಯಗಳನ್ನು ತಯಾರಿಸುವ ಆಹಾರ ತಯಾರಿಕಾ ತಾಂತ್ರಿಕತೆಗಳ ಬಗ್ಗೆಯೂ ಸಾಕಷ್ಟು ತಂತ್ರಜ್ಞಾನವಿದೆ. ಇದೇ ರೀತಿ ನೀವು ನಿಮ್ಮ ವಿಶ್ವ ವಿದ್ಯಾಲಯಗಳಲ್ಲಿ ಸಂಶೊಧನೆ ಕೈಗೊಂಡು ಸಾವಯವ ಮತ್ತು ನೈಸರ್ಗಿಕ ಕೃಷಿಯನ್ನು ದಿನೇ ದಿನೆ ಹೆಚ್ಚು ಕ್ಷೇತ್ರದಲ್ಲಿ ಪಸರಿಸಲು ರೈತರಿಗೆ ಪ್ರೋತ್ಸಾಹ ನೀಡಬೇಕು” ಎಂದು ಶಿಬಿರಾರ್ಥಿಗಳನ್ನು ಹುರಿದುಂಬಿಸಿದರು.

ಈ ಸುದ್ದಿ ಓದಿದ್ದೀರಾ? ಹಾವೇರಿ | ಡಿಸೆಂಬರ್ 18ರಂದು ‘ಮಾದಿಗರ ಆತ್ಮಗೌರವ ಸಮಾವೇಶ’

ಕಾರ್ಯಕ್ರಮದಲ್ಲಿ ಕೃಷಿ ವಿಶ್ವವಿದ್ಯಾಲಯ ಧಾರವಾಡದ ಶಿಕ್ಷಣ ನಿರ್ದೇಶಕ ಡಾ.ವಿ ಆರ್ ಕಿರೇಸುರ್, ಹಣಕಾಸು ನಿಯಂತ್ರಣಾಧಿಕಾರಿ ಶಿವಪುತ್ರ ಹೊನ್ನಾಳಿ, ಕೃಷಿ ಮತ್ತು ಸಮುದಾಯ ಮಹಾ ವಿದ್ಯಾಲಯದ ವಿಧ್ಯಾಧಿಕಾರಿ ಡಾ. ಎಚ್ ಬಿ ಬಬಲಾದ ಮತ್ತು ಡಾ ವಿ ಎಸ್ ಪಾಟೀಲ, ಸಹ ಸಂಶೋದನಾ ನಿರ್ದೇಶಕ ಡಾ. ಶೇಖರಪ್ಪ, ಸಹಾಯಕ ವಿಸ್ತರಣಾ ನಿರ್ದೇಶಕ ಡಾ. ಎಸ್ ಎ ಗದ್ದನಕೇರಿ, ಸಾವಯವ ಕೃಷಿ ಸಂಸ್ಥೆಯ ಮತ್ತು ಸೂಕ್ಷ್ಮಜೀವ ಶಾಸ್ತ್ರ ವಿಭಾಗದ ವಿಜ್ಞಾನಿಗಳು, ವಿಶ್ವ ವಿದ್ಯಾಲಯದ ವಿವಿಧ ವಿಭಾಗದ ಮುಖ್ಯಸ್ಥರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಡಿಕೆ ಬೆಳೆಗಾರರ ಸಮಸ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರೊಂದಿಗೆ ಸಭೆ

ಶಿವಮೊಗ್ಗ, ರಾಜ್ಯ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತಂತೆ ಕೇಂದ್ರ ಕೃಷಿ...

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

Download Eedina App Android / iOS

X