ಶಿವಮೊಗ್ಗ ನಗರದ ಆರ್‌ಎಂಎಲ್ ನಗರ ನಿವಾಸಿಯೊಬ್ಬ ತನ್ನ ಕವಸಾಕಿ ಬಜಾಜ್ ಬೈಕನ್ನು ಯಮಹಾ ಆರ್‌ಎಕ್ಸ್ 100 ಬೈಕ್ ಆಗಿ ಸಂಪೂರ್ಣ ಮಾರ್ಪಡು ಮಾಡಿಕೊಂಡು ಕರ್ಕಶ ಶಬ್ದ ಉಂಟುಮಾಡುವ ಸೈಲೆನ್ಸರ್ ಅಳವಡಿಸಿಕೊಂಡು ತನ್ನ ವಾಹನವನ್ನು ನಗರಾದ್ಯಂತ ಚಲಾಯಿಸಿತಿದ್ದು, ಇದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂಬ ದೂರುಗಳು ಪೊಲೀಸರಿಗೆ ಬಂದಿವೆ.
ದೂರಿನನ್ವಯ ಶಿವಮೊಗ್ಗ ಪೂರ್ವ ಸಂಚಾರಿ ಠಾಣೆ ಪಿಎಸ್‌ಐ ನವೀನ್ ಕುಮಾರ್ ಮಠಪತಿ ಅವರು ಪ್ರಕರಣ ಭೇದಿಸಿ ವ್ಯಕ್ತಿ ಹಾಗೂ ದ್ವಿಚಕ್ರ ವಾಹನ ಸಹಿತ ಪೊಲೀಸ್ ಠಾಣೆಗೆ ಕರೆತಂದು ಆತನ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೋಲಾರ | ಕರಾಟೆಯ ಕಿರೀಟ ಕೀರ್ತಿ ರುಮಾನ ಕೌಸರ್
ಈ ಸಂಬಂಧ ಶಿವಮೊಗ್ಗದ ನ್ಯಾಯಾಲಯಕ್ಕೆ ದೋಷಾರೋಪಣ ಸಲ್ಲಿಸಿದ್ದು, 3ನೇ ಎಸಿಜೆ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರು ಆರೋಪಿಗೆ ₹16,500 ದಂಡ ವಿಧಿಸಿರುತ್ತಾರೆ.