ಗ್ರಾಮೀಣ ಅಂಚೆ ನೌಕರರಿಗೆ 08 ಗಂಟೆ ಕೆಲಸ ಹಾಗೂ ಪಿಂಚಣಿ ಯೋಜನೆ ಜಾರಿ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಸಂಘದಿಂದ ರಾಯಚೂರಿನ ಕೇಂದ್ರ ಅಂಚೆ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದ್ದಾರೆ.
“ಏಳನೇ ವೇತನ ಆಯೋಗದ ಕಮಲೇಶ ಚಂದ್ರ ನೇತೃತ್ವದ ಸಮಿತಿ ಶಿಫಾರಸುಗಳನ್ನು ಜಾರಿಗೊಳಿಸದೇ ಅಂಚೆ ಸೇವಕರಿಗೆ ವಂಚಿಸಲಾಗುತಿದೆ. 2014ರಿಂದ ನಿರಂತರ ಹೋರಾಟ ನಡೆಸುತ್ತಿದ್ದರೂ ಸೂಕ್ತ ಸ್ಪಂದನೆ ದೊರೆತಿಲ್ಲ. ಅಂಚೆ ಸೇವಕರ ಸೇವಾ ಹಿರಿತನ ಆಧಾರದ ಮೇಲೆ ವೇತನ ಹೆಚ್ಚಳ ಮಾಡುವುದು, ಮೇಳಗಳನ್ನು ನಡೆಸಿ ಅವೈಜ್ಞಾನಿಕ ಗುರಿಗಳನ್ನು ನೀಡುತ್ತಿರುವುದನ್ನು ಕೈ ಬಿಡಬೇಕು” ಎಂದು ಆಗ್ರಹಿಸಿದರು.
“ಜಿಡಿಎಸ್ ನೌಕರರಿಗೆ ಆಗುತ್ತಿರುವ ಕಿರುಕಳ ತಡೆದು, ಗ್ರೂಪ್ ಇನ್ಸೂರೆನ್ಸ್ ₹5 ಲಕ್ಷಕ್ಕೆ ವಿಸ್ತರಿಸಬೇಕು. ಗ್ರಾಚ್ಯೂಟಿ ಹಣವನ್ನು 5 ಲಕ್ಷ ರೂಗಳಿಗೆ ಹೆಚ್ಚಿಸಬೇಕು” ಎಂಬುದು ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಪ್ರತಾಪ್ ಸಿಂಹ ಕಚೇರಿಗೆ ಬಿಗಿ ಭದ್ರತೆ; ಸಂಸದನ ಅಮಾನತಿಗೆ ಆಗ್ರಹ
ಧರಣಿಯಲ್ಲಿ ಸಂಘದ ಅಧ್ಯಕ್ಷ ದೊಡ್ಡಯ್ಯಸ್ವಾಮಿ, ಕಾರ್ಯದರ್ಶಿ ನರಸಿಂಹಾಚಾರ್ಯ, ರಾಮನಗೌಡ, ಹನುಮಂತಪ್ಪ ಮಾವಿನಭಾವಿ, ಮಲ್ಲಯ್ಯ, ಬಸವರಾಜ, ಚೆನ್ನಾರೆಡ್ಡಿ, ಗೋಪಾಲಕೃಷ್ಣ, ತಿಮ್ಮಪ್ಪ, ಶರಣಪ್ಪ, ಈರಣ್ಣ, ಭೀಮಣ್ಣ, ಯಲ್ಲಪ್ಪ, ಬೂದೆಯ್ಯಸ್ವಾಮಿ, ಶರಣಬಸವ, ಪಂಪಾಪತಿ, ಸುಜಾತ, ಅಬ್ದುಲ್ ಖಾದರ, ಕೃಷ್ಣಪ್ಪ ನಾಯಕ, ಮಲ್ಲಿಕಾರ್ಜುನ, ಅಜೀಜಮಿಯಾ, ಚಿದಾನಂದ ಪಾಟೀಲ್ ಸೇರಿದಂತೆ ಇತರರು ಇದ್ದರು.
ವರದಿ : ಹಫೀಜುಲ್ಲ