ಕಲಬುರಗಿ | ದಿನಗೂಲಿ ಪೌರಕಾರ್ಮಿಕರ ನೇರನೇಮಕಾತಿಗೆ ಆಗ್ರಹ; ಡಿ.15ರಿಂದ ಅನಿರ್ದಿಷ್ಟಾವಧಿ ಧರಣಿ

Date:

Advertisements

ಪೌರಕಾರ್ಮಿಕರ ನೇರನೇಮಕಾತಿ ಮತ್ತು ಕಾಯಮಾತಿ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿರುವುದನ್ನು ಕೂಡಲೇ ರದ್ದುಗೊಳಿಸಿ, ದಿನಗೂಲಿ ಪೌರಕಾರ್ಮಿಕರ ನೇರನೇಮಕಾತಿ, ಕಾಯಮಾತಿ ಆಯ್ಕೆಗೊಳಿಸಬೇಕೆಂದು ಒತ್ತಾಯಿಸಿ ಡಿಸೆಂಬರ್ 15 ರಂದು ಕಲಬುರಗಿ ಭೀಮ್‌ ಆರ್ಮಿ ಕರ್ನಾಟಕ, ಭಾರತ್ ಏಕತಾ ಮಿಷನ್ ಜಿಲ್ಲಾ ಸಮಿತಿಯಿಂದ ನಿರಂತರ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಮಿಕ ಮುಖಂಡ ಸೂರ್ಯಕಾಂತ ನಿಂಬಾಳಕರ್ ತಿಳಿಸಿದರು.

ಕಲಬುರಗಿ ನಗರದಲ್ಲಿ ನಡೆದ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, “ಮಹಾನಗರ ಪಾಲಿಕೆಯಲ್ಲಿ ದುಡಿಯುತ್ತಿರುವ ದಿನಗೂಲಿ ನೌಕರರ ಕಾಯಮಾತಿಯಲ್ಲಿ ಪಾಲಿಕೆ ಮತ್ತು ಜಿಲ್ಲಾಡಳಿತದಲ್ಲಿನ ಅಧಿಕಾರಿಗಳಿಂದ ನೇಮಕಾತಿ ಪ್ರಕ್ರಿಯೆಯಲ್ಲಿ ಕಾನೂನು ಪಾಲಿಸದೇ ಪೌರಕಾರ್ಮಿಕರು ಅಲ್ಲದವರನ್ನು ಮತ್ತು ಮೃತಪಟ್ಟಿರುವರನ್ನು ಆಯ್ಕೆಗೊಳಿಸಿ ಸಕ್ರಮ ಪ್ರಾಧಿಕಾರ ನೇರನೇಮಕಾತಿ ಪೌರಕಾರ್ಮಿಕರ ನೇಮಕಾತಿ ಕರ್ತವ್ಯಲೋಪವೆಸಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಶಿಸ್ತುಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದರು.

“ದಿನಗೂಲಿ ಪೌರಕಾರ್ಮಿಕರನ್ನು ಆಯ್ಕೆಯಲ್ಲಿ ಪ್ರಥಮ ಆದ್ಯತೆ ನೀಡಲು ಮತ್ತು ಸೇಡಂ ತಾಲೂಕಿನ ಮಳಖೇಡ ಅಲ್ಟ್ರಾಟೆಕ್ ಸಿಮೆಂಟ್ ಲೋಡಿಂಗ್ ಮತ್ತು ಪ್ಯಾಕಿಂಗ್ ವಿಭಾಗದ ಕಾರ್ಮಿಕರ ಬೇಡಿಕೆಗಾಗಿ ಮನವಿ ಪತ್ರ ಸಲ್ಲಿಸಲ್ಲಿಸಿದರೂ ಕೂಡ ಈವರೆಗೆ ಯಾರೂ ಸ್ಪಂದಿಸಿರುವುದಿಲ್ಲ. ಇತರ ಜಿಲ್ಲೆಯಲ್ಲಿನ ಜ್ವಲಂತ ಸಮಸ್ಯೆಗಳ ಪರಿಹಾರಕ್ಕಾಗಿ ಭೀಮ್ ಆರ್ಮಿ ಜಿಲ್ಲಾ ಸಮಿತಿ‌ ಮನವಿ ಪತ್ರಗಳನ್ನು ಸಲ್ಲಿಸಲಾಗಿತ್ತು. ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳದಿರುವುದರಿಂದ ಡಿಸೆಂಬರ್ 15 ರಂದು ಬೆಳಿಗ್ಗೆ  11ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಬೇಡಿಕೆ ಈಡೇರುವವರೆಗೆ ನಿರಂತರ ಧರಣಿ ಹಮ್ಮಿಕೊಳ್ಳಲಾಗಿದೆ” ಎಂದು ತಿಳಿಸಿದರು.

Advertisements

ಈ ಸುದ್ದಿ ಓದಿದ್ದೀರಾ? ರಾಯಚೂರು | ಒಳಮೀಸಲಾತಿಗೆ ಆಗ್ರಹಿಸಿ ಡಿ.17ರಂದು ಮಾದಿಗ ಮುನ್ನಡೆ, ಮಾದಿಗರ ಆತ್ಮಗೌರವ ಸಮಾವೇಶ

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸೂರ್ಯಕಾಂತ ಬೆಡಗಾ, ಸೂರ್ಯಕಾಂತ ನಿಂಬಾಳಕರ್, ಸೋಮಶೇಖರ್ ಬಂಗರಗಿ ಸೇರಿದಂತೆ ಇತರರು ಇದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗದಗ | ನಾಲ್ಕು ದಿನಗಳಿಂದ ರೈತರು ಪ್ರತಿಭಟನೆ, ಸ್ಪಂದಿಸದ ಆಡಳಿತ: ಜೆಡಿಎಸ್ ರಾಜ್ಯ ವಕ್ತಾರ ವೆಂಕನಗೌಡ ಗೋವಿಂದಗೌಡ್ರ ಕಿಡಿ

"ಬಗರ್‌ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ರೈತರು ನಾಲ್ಕು ದಿನಗಳಿಂದ...

ಕೊಪ್ಪಳ | ಅಕ್ರಮ ಗಾಂಜಾ ಮಾರಾಟ : ಒಂದೇ ಕುಟುಂಬದ 3 ಸೇರಿ ನಾಲ್ವರ ಬಂಧನ

ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ...

ಧಾರವಾಡ | ಹೆಬ್ಬಳ್ಳಿ ಗ್ರಾಮದಲ್ಲಿ 91 ಪಿಓಪಿ ಗಣೇಶ ವಿಗ್ರಹಗಳ ವಶಕ್ಕೆ ಪಡೆದ ತಪಾಸಣೆ ತಂಡ

ತಾಲೂಕಿನ ಹೆಬ್ಬಳ್ಳಿಯಲ್ಲಿ 91 ಪಿಓಪಿ ಗಣಪತಿಗಳನ್ನು ಜಿಲ್ಲಾಧಿಕಾರಿ ಆದೇಶದಂತೆ ರಚಿಸಿದ ಕಾರ್ಯ...

ಚಿಕ್ಕಮಗಳೂರು l ಪೋಕ್ಸೋ ಪ್ರಕರಣ: ಆರೋಪಿಗಳಿಗೆ ದಂಡ, ತಲಾ ಹತ್ತು ವರ್ಷ ಜೈಲು ಶಿಕ್ಷೆ

ಪೋಕ್ಸೋ ಪ್ರಕರಣದಲ್ಲಿ ಇಬ್ಬರು ಆರೋಪಿಗಳಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ...

Download Eedina App Android / iOS

X