ಕರ್ನಾಟಕದೊಳಗೆ ಜಾತಿ ಮೀರಿದ ಆಲೋಚನೆಗಳೇನಾದರೂ ನಡೆಯುತ್ತಿದ್ದರೆ ಅದರಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪಾಲು ದೊಡ್ಡದಿದೆ ಎಂದು ದಸಂಸ ರಾಜ್ಯ ಸಂಚಾಲಕ ಶಿವಮೊಗ್ಗ ಗುರುಮೂರ್ತಿ ತಿಳಿಸಿದರು.
ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಹೊರಕೆರೆ- ದೇವರಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಗ್ರಾಮ ಶಾಖೆ ಉದ್ಘಾಟನೆ ಮತ್ತು ಡಾ. ಬಿ ಆರ್ ಅಂಬೇಡ್ಕರ್ ಅವರ 67ನೇ ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
“ಕರ್ನಾಟಕದಲ್ಲಿ ದಲಿತ ಸಂಘರ್ಷ ಸಮಿತಿ ನಡೆಸಿದ ಚಳವಳಿ ಒಂದು ಭಾರತದ ಸಂವಿಧಾನ ಬದ್ಧ ಆಶಯಗಳ ಚಳವಳಿ ಮತ್ತು ಅಖಂಡ ಸಂವಿಧಾನದ ಆಶಯಗಳನ್ನು ತನ್ನ ಅಜೆಂಡಾವನ್ನಾಗಿಸಿಕೊಂಡಿರುವ ಏಕೈಕ ಸಂಘಟನೆ. ಆ ಎಲ್ಲ ಆಶಯ ಆದರ್ಶಗಳನ್ನು ಆಚರಣೆಗೆ ತರಬೇಕೆನ್ನುವುದು ಈ ಸಂಘಟನೆ ಹಾಗೂ ಚಳವಳಿಯ ಆಶಯವಾಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಡಗು | ಸಂಸತ್ ದಾಳಿಗೆ ನೇರ ಹೊಣೆಗಾರರಾದ ಪ್ರತಾಪ್ ಸಿಂಹ ರಾಜೀನಾಮೆ ನೀಡಲಿ; ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಒತ್ತಾಯ
ಈ ಸಂದರ್ಭದಲ್ಲಿ ಸಮಿತಿಯ ಜಿಲ್ಲಾ ಸಂಚಾಲಕ ಕೆಂಗುಂಟೆ ಜಯಣ್ಣ, ತಾಲೂಕು ಸಂಚಾಲಕ ಸುಂದರ್ಮೂರ್ತಿ, ಜಿಲ್ಲಾ ಸಂಘಟನಾ ಸಂಚಾಲಕ ನವೀನ್ ಮದ್ದೇರು, ಶಾಂತನಳ್ಳಿ ಮಂಜುನಾಥ್, ಶ್ರೀನಿವಾಸ್ ಬಂಡೆ ಹಟ್ಟಿ, ಮಂಜು ಗುಂಡಿಮಡು, ಚಿತ್ರಹಳ್ಳಿ ಮಂಜು, ಪ್ರಭು, ಕೆಮ್ಮುಂಟೆ, ವಿಜಯ್ ಗ್ರಾಮ ಪಂಚಾಯತಿ ಅಧ್ಯಕ್ಷ ದಿವಾಕರ್, ಎಚ್ ಡಿ ರಂಗಯ್ಯ, ಅಂಜನ್ ಕುಮಾರ್, ಪ್ರಕಾಶ್, ರಮೇಶ್, ಶಿವಮೊಗ್ಗ ಜಿಲ್ಲಾ ಸಂಚಾಲಕ ಎಂ ಏಳು ಕೋಟಿ ಮತ್ತು ಪ್ರೊಫೆಸರ್ ಜೋಗಿ ಚಂದ್ರಪ್ಪ ಸೇರಿದಂತೆ ಇತರರು ಇದ್ದರು.