ಚಾಮರಾಜನಗರ | ಕೆಲಸ ಅರಸಿ ನೆರೆ ರಾಜ್ಯಕ್ಕೆ ಗುಳೆ ಹೊರಟ ಮಂದಿ; ಮಕ್ಕಳ ಶಿಕ್ಷಣ ಮೊಟಕು

Date:

Advertisements

ನೆರೆ ರಾಜ್ಯ ಕೇರಳದಲ್ಲಿ ಡಿಸೆಂಬರ್‌ನಿಂದ ಫೆಬ್ರವರಿವರೆಗೆ ಕಾಫಿ ಕೊಯ್ಲು ಸೇರಿದಂತೆ ಇತರ ಕೆಲಸಗಳನ್ನು ಅರಸಿ ರಾಜ್ಯದ ಗಡಿ ಭಾಗದ ಹಲವು ಗ್ರಾಮದ ಜನರು ಕೇರಳಕ್ಕೆ ಗುಳೆ ಹೊರಟಿದ್ದಾರೆ.

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು, ಕೂತನೂರು, ಕೂಡಹಳ್ಳಿ ಆದಿವಾಸಿ ಸಮುದಾಯದವರು ಹಾಗೂ ಮತ್ತಿತರ ಗ್ರಾಮಗಳ ಜನರು ಹೆಚ್ಚಿನ ಕೂಲಿ ನಿರೀಕ್ಷಿಸಿ ಸಂಸಾರ ಸಹಿತ ಕೇರಳಕ್ಕೆ ಗುಳೆ ಹೋಗುವ ಸಂಭವ ಹೆಚ್ಚಿರುತ್ತದೆ. ನಾವು ಕೂಲಿ ಕೆಲಸಕ್ಕೆ ತೆರಳುವಾಗ ಅವರ ಮಕ್ಕಳ ಆಶ್ರಯದ ಜವಾಬ್ದಾರಿ ನೋಡಿಕೊಳ್ಳುವವರಿಲ್ಲದೆ ಅವರ ಮನೆಯ ಮಕ್ಕಳನ್ನು ಜತೆಯಲ್ಲಿಯೇ ಕರೆದುಕೊಂಡು ಹೋಗುವ ಸಾಧ್ಯತೆಯಿದೆ.

ಓದುತ್ತಿರುವ ಮಕ್ಕಳನ್ನು ಅನಿವಾರ್ಯವಾಗಿ ಶಾಲೆ ಬಿಡಿಸಿ ಹೆಚ್ಚಿನ ಕೂಲಿ ಆಸೆ ಮತ್ತು ಜೀವನ ನಿರ್ವಹಣೆಗೆಂದು ಸಂಸಾರ ಸಹಿತ ಹೋಗುವುದರಿಂದ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿಸುತ್ತಾರೆ.
ಮೂರ್ನಾಲ್ಕು ತಿಂಗಳು ಶಾಲೆಯಿಂದ ದೂರ ಉಳಿದ ಮಕ್ಕಳು ಮತ್ತೆ ಓದುವ ಆಸೆಯಿಂದ ಯುವಕರಾಗುವುದು ಸಹಜವಾಗಿರುತ್ತದೆ. ಕಷ್ಟಪಟ್ಟು ಓದಿದ ಮಕ್ಕಳು ಪರಿಕ್ಷೆ ಸಮಯದಲ್ಲಿ ಶಾಲೆಯಿಂದ ದೂರ ಉಳಿದರೆ, ಪಾಸ್ ಆಗುವುದಾದರೂ ಹೇಗೆ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ ತಾಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆ, ಗಮನಹರಿಸಿ ಮಕ್ಕಳ ಭವಿಷ್ಯಗಳು ಹಾಳಾಗದಂತೆ ಮುನ್ನೆಚ್ಚರಿಕೆ ವಹಿಸಲು ಮುಂದಾಗಬೇಕಾಗಿದೆ.

Advertisements

ಕೆಲಸ ಹರಸಿ ಹೊರಟ ಮಂದಿ

ಗುಂಡ್ಲುಪೇಟೆ ತಾಲೂಕು, ಮಳೆಯಾಶ್ರಿತ ಪ್ರದೇಶ ಈ ಬಾರಿ ಬರಗಾಲದ ಬಿಸಿ, ತುಸು ಹೆಚ್ಚು ತಟ್ಟಿದೆ ಎನ್ನಬಹುದು. ದುಡಿಯುವ ಕೈಗಳಿಗೆ ಕೆಲಸ ಇಲ್ಲದ ಪರಿಸ್ಥಿತಿ ನಿರ್ಮಾಣ ಆಗಿರುವುದು ಸುಳ್ಳಲ್ಲ ಎಂಬುದು ಸ್ಪಷ್ಟ. ಇದರಿಂದ ನೆರೆಯ ಕೇರಳ ರಾಜ್ಯಕ್ಕೆ ಕೂಲಿ ಅರಸಿ ವಲಸೆ ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ತಾಲೂಕು ಆಡಳಿತ ಇದನ್ನೆಲ್ಲ ನೋಡಿಯೂ ನೋಡದಂತೆ ಇದ್ದಾರೆಂಬ ಆರೋಪ ಕೇಳಿಬರುತ್ತಿದೆ. ವ್ಯಾಸಂಗ ಮಾಡಬೇಕಾದ ಮಕ್ಕಳು ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಭವಿಷ್ಯ ಹಾಳಾಗುತ್ತಿರುವುದನ್ನು ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸಬೇಕು.

ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಸುಭಾಷ್ ಮಾಡ್ರಹಳ್ಳಿ ಈ ದಿನ.ಕಾಮ್ ಜೊತೆ ಮಾತನಾಡಿ, “ಪೇಟೆ ಗಡಿ ತಾಲೂಕು ಕೇಂದ್ರವಾಗಿರುವುದರಿಂದ ಸಹಜವಾಗಿ ಕೂಲಿ ಅರಸಿ ವಲಸೆ ಹೋಗುವುದು ಸರ್ವೇ ಸಾಮಾನ್ಯವಾಗಿದೆ. ಆದರೆ ಮಕ್ಕಳನ್ನು ಶಾಲೆ ಬಿಡಿಸಿ ಕರೆದುಕೊಂಡು ಹೋಗುವುದರಿಂದ ಶಿಕ್ಷಣದಿಂದ ವಂಚಿತರಾಗುವುದಲ್ಲದೆ ಮಕ್ಕಳ ಭವಿಷ್ಯ ಕಮರುತ್ತದೆ. ಜಿಲ್ಲೆಯಲ್ಲಿ ಡ್ರಾಪೌಟ್ ಮಕ್ಕಳ ಸಂಖ್ಯೆ ಕೊಟ್ಟಿರುವ ಮಾಹಿತಿ ಇದೆ. ಇದನ್ನು ತಾಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಪುನರ್ವಸತಿ ಕೇಂದ್ರ ತೆರೆದು ಮಕ್ಕಳಿಗೆ ಆಶ್ರಯ ನೀಡಬೇಕು. ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಸಬೇಕು” ಎಂದು ಒತ್ತಾಯಿಸಿದರು.

ಇದನ್ನೂ ಓದಿದ್ದೀರಾ? ಲೋಕಸಭೆ ಚುನಾವಣೆ | ತಮ್ಮ ಸಂಬಂಧಿಕರಿಗೆ ಟಿಕೆಟ್‌ ಗಿಟ್ಟಿಸಲು ಪ್ರಮುಖ ಕಾಂಗ್ರೆಸ್ಸಿಗರ ಲಾಬಿ

ರಾಘವಾಪುರ ಗ್ರಾಮ ಪಂಚಾಯಿತಿ ಸದಸ್ಯ ಆರ್ ಡಿ ಉಲ್ಲಾಸ್ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, “ಕೂಲಿ ಅರಸಿ ಹೋಗುವುದು ಸರ್ವೇಸಾಮಾನ್ಯವಾಗಿದೆ. ಅದರಿಂದ ಮಕ್ಕಳನ್ನು ಶಾಲೆ ಬಿಡಿಸಿ ಬಾಲ ಕಾರ್ಮಿಕರನ್ನಾಗಿಸುವುದು ಒಂದು ಅಪರಾಧ. ತಾಲೂಕು ಆಡಳಿತ ಮತ್ತು ಶಿಕ್ಷಣ ಇಲಾಖೆ ಇದರ ಬಗ್ಗೆ ಗಮನ ಹರಿಸಿ ಮಕ್ಕಳ ಭವಿಷ್ಯ ಹಾಳಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು” ಎಂದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಕರ್ನಾಟಕ ಕೃಷಿ ಇಲಾಖೆಯಿಂದ ರೈತರಿಗೆ ಡಿಜಿಟಲ್ ಬಲ: ಬಿಇಎಲ್ ಜೊತೆ ಒಡಂಬಡಿಕೆ

ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

Download Eedina App Android / iOS

X