ಲೋಕಸಭೆ ಚುನಾವಣೆ | ತಮ್ಮ ಸಂಬಂಧಿಕರಿಗೆ ಟಿಕೆಟ್‌ ಗಿಟ್ಟಿಸಲು ಪ್ರಮುಖ ಕಾಂಗ್ರೆಸ್ಸಿಗರ ಲಾಬಿ

Date:

ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಬಲಿಷ್ಠ ಆಕಾಂಕ್ಷಿಗಳು ಇಲ್ಲದಿರುವ ಕಾರಣ ತಮ್ಮ ಮಗನಿಗೆ ಟಿಕೆಟ್ ದೊರೆಯುವ ಭರವಸೆಯಲ್ಲಿದ್ದಾರೆ ಸಚಿವ ಮಹದೇವಪ್ಪ

ಕರ್ನಾಟಕ ಮತ್ತು ತೆಲಂಗಾಣ ವಿಧಾನಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ, ಸಂಸತ್ ಚುನಾವಣೆಯಲ್ಲಿ ದಕ್ಷಿಣ ಭಾರತವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಕಾಂಗ್ರೆಸ್‌ ಹವಣಿಸುತ್ತಿದೆ. ಅದಕ್ಕಾಗಿ, ಜಾತಿ ಲೆಕ್ಕಾಚಾರದಿಂದ ಹಿಡಿದು ಸ್ಥಳೀಯ ಶಾಸಕರಲ್ಲಿ ಒಮ್ಮತವನ್ನು ಖಚಿತಪಡಿಸಿಕೊಳ್ಳುವುದು ವರಿಷ್ಠರ ಬಲವಾದ ಇರಾದೆ. ಈ ನಡುವೆ, ತಮ್ಮ ಸಂಬಂಧಿಕರಿಗೆ ಟಿಕೆಟ್ ಗಿಟ್ಟಿಸಲು ಪ್ರಮುಖ ಕಾಂಗ್ರೆಸ್ಸಿಗರು ಲಾಬಿ ಮಾಡಲು ಆರಂಭಿಸಿದ್ದಾರೆ.‌ ಪಕ್ಷದ ನಾಯಕರ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ.

ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ ಅವರು ತಮ್ಮ ಮಗ ಸುನೀಲ್ ಬೋಸ್ ಅವರಿಗೆ ಚಾಮರಾಜನಗರ ಮೀಸಲು ಕ್ಷೇತ್ರದ ಟಿಕೆಟ್ ಬಯಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ತಮ್ಮ ಸೋದರಿ ಗೀತಾ ಶಿವರಾಜ್ ಕುಮಾರ್ ಅವರನ್ನು ಶಿವಮೊಗ್ಗದಿಂದ ಕಣಕ್ಕಿಳಿಸಲು ಇಚ್ಛಿಸಿದ್ದಾರೆ.

ಶಾಸಕ ವಿಜಯಾನಂದ ಕಾಶಪ್ಪನವರ್ ತಮ್ಮ ಪತ್ನಿ ವೀಣಾ ಅವರಿಗೆ ಟಿಕೆಟ್ ಬಯಸಿದ್ದರೆ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಬೆಳಗಾವಿಯಿಂದ ತಮ್ಮ ಮಗಳ ರಾಜಕೀಯ ಪ್ರವೇಶ ಬಯಸಿದ್ದಾರೆ. ತಮ್ಮ ಪುತ್ರ ಯತೀಂದ್ರ ಅವರನ್ನು ಮೈಸೂರು-ಕೊಡಗು ಕ್ಷೇತ್ರದಿಂದ ಕಣಕ್ಕಿಳಿಸುವ ಇರಾದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದು ಎನ್ನಲಾಗುತ್ತಿದೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ

ಈ ಆಕಾಂಕ್ಷಿಗಳಲ್ಲಿ ಹೆಚ್ಚಿನವರು ಪ್ರಬಲ ಅಭ್ಯರ್ಥಿಗಳಾಗಿದ್ದರೂ, ಜಾತಿ ಲೆಕ್ಕಾಚಾರ ಮತ್ತು ಇತರ ಮಾನದಂಡಗಳ ಹೊಂದಾಣಿಕೆಯನ್ನು ಸಾಧಿಸುವ, ಇಲ್ಲವೇ ಸಮತೂಕ ಕಾಪಾಡುವ ಕಸರತ್ತು ಕಠಿಣವಾದೀತು ಎಂಬ ಅಭಿಪ್ರಾಯವಿದೆ.

“ಉದಾಹರಣೆಗೆ, ಮೈಸೂರು-ಕೊಡಗು ಕ್ಷೇತ್ರದಲ್ಲಿ ಪಕ್ಷಗಳು ಬಹುತೇಕ ಒಕ್ಕಲಿಗ ಹುರಿಯಾಳುಗಳನ್ನೇ ಇಳಿಸುತ್ತಿವೆ. ಯತೀಂದ್ರ ಅವರನ್ನು ಕಣಕ್ಕಿಳಿಸಿದರೆ ಈ ಕ್ಷೇತ್ರದ ಒಕ್ಕಲಿಗ ಪ್ರಾಬಲ್ಯದ ಅಂಶವನ್ನು ಪಕ್ಷ ಹೇಗೆ ನಿರ್ವಹಿಸುತ್ತದೆ ಎಂಬುದು ಕುತೂಹಲಕರ ಸಂಗತಿ. ಅದೇ ರೀತಿ ಬೆಳಗಾವಿಯಲ್ಲಿ ಲಿಂಗಾಯತ-ವಾಲ್ಮೀಕಿ ಸಮುದಾಯದಕ್ಕೆ ಟಿಕೆಟ್ ನೀಡಿಕೆಯ ಇಬ್ಬಂದಿಯು ಕಾಂಗ್ರೆಸ್‌ನಲ್ಲಿ ತೊಡಕು-ಒಡಕು ಉಂಟು ಮಾಡುವ ಸಾಧ್ಯತೆ ಇದೆ” ಎಂಬುದು ಹಿರಿಯ ಕಾಂಗ್ರೆಸ್ಸಿಗರೊಬ್ಬರ ಅನಿಸಿಕೆ.

ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಬಲಿಷ್ಠ ಆಕಾಂಕ್ಷಿಗಳು ಇಲ್ಲದಿರುವ ಕಾರಣ ತಮ್ಮ ಮಗನಿಗೆ ಟಿಕೆಟ್ ದೊರೆಯುವ ಭರವಸೆಯಲ್ಲಿ ಸಚಿವ ಮಹದೇವಪ್ಪ ಇದ್ದಾರೆ. 2019ರಲ್ಲಿ ಬಾಗಲಕೋಟೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ವೀಣಾ ಕಾಶಪ್ಪನವರ್ ಮರುನಾಮಕರಣ ಬಯಸಿದ್ದು, ಟಿಕೆಟ್‌ಗಾಗಿ ತೀವ್ರ ಪ್ರಯತ್ನ ನಡೆಸುತ್ತಿರುವುದಾಗಿ ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಬಹಿರಂಗವಾಗಿ ಹೇಳಿದ್ದಾರೆ.

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಶಿವರಾಜ್ ಕುಮಾರ್ ಅವರನ್ನು ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಕೋರಿದ್ದೂ ಇದೆ. ಆದರೆ, ಗೀತಾ ಶಿವರಾಜ್‌ ಕುಮಾರ್‌ ಅವರ ಸ್ಪರ್ಧೆಗೆ ಅವಕಾಶ ನೀಡುವಂತೆ ಬಹಿರಂಗವಾಗಿಯೇ ಶಿವರಾಜ್ ಕುಮಾರ್ ಕೋರಿದ್ದಾರೆ. ಹಾಗೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಹುಬ್ಬಳ್ಳಿ-ಧಾರವಾಡ ಕ್ಷೇತ್ರದಿಂದ ಜಗದೀಶ್ ಶೆಟ್ಟರ್ ಕಣಕ್ಕಿಳಿಸಲು ಸಿದ್ಧ ಎಂದು ಶೆಟ್ಟರ್ ಅವರಿಗೆ ಬಹಿರಂಗ ಆಹ್ವಾನವನ್ನು ನೀಡಿದ್ದಾರೆ.

ಈ ಸುದ್ದಿ ಓದಿದ್ದೀರಾ? ನಿಗಮ ಮಂಡಳಿ ನೇಮಕ ಪಟ್ಟಿ ಅಂತಿಮ ಮಾಡಿಕೊಂಡು ಬರುತ್ತೇವೆ: ಡಿ ಕೆ ಶಿವಕುಮಾರ್

ಸಚಿವ ಜಮೀರ್ ಅಹ್ಮದ್ ಅವರು ಹಾವೇರಿ ಮತ್ತು ಬೆಂಗಳೂರು ಸೆಂಟ್ರಲ್ ಸೇರಿದಂತೆ ಕನಿಷ್ಠ ಎರಡು ಸ್ಥಾನಗಳಿಂದ ಅಲ್ಪಸಂಖ್ಯಾತರ ಟಿಕೆಟ್ ಬಯಸಿದ್ದಾರೆ. ಅಭ್ಯರ್ಥಿಗಳ ಪಟ್ಟಿಯನ್ನು ಪರಿಶೀಲಿಸಿ ಎಐಸಿಸಿಗೆ ಕಳುಹಿಸಲಾಗುವುದು, ನಂತರ ಕೇಂದ್ರ ಮತ್ತು ರಾಜ್ಯ ಕಾಂಗ್ರೆಸ್ ನಾಯಕರು ಅಭ್ಯರ್ಥಿಗಳ‌ ಪಟ್ಟಿಯನ್ನು ಅಂತಿಮಗೊಳಿಸಲು ಎರಡು ಸಮೀಕ್ಷೆಗಳನ್ನು ನಡೆಸುತ್ತಾರೆ. ಜನವರಿ ಅಂತ್ಯದ ವೇಳೆಗೆ ಪಟ್ಟಿ ಸಿದ್ಧವಾಗುತ್ತದೆಂಬ ನಿರೀಕ್ಷೆ ನಮ್ಮದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್‌ ಹೇಳಿದ್ದಾರೆ.

+ posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಂಗಳೂರು | ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ: ಓರ್ವ ಮೃತ್ಯು; ಮತ್ತೋರ್ವ ಗಂಭೀರ

ನಿರ್ಲಕ್ಷ್ಯದಿಂದ ಬೈಕ್ ಚಲಾಯಿಸಿದ ಪರಿಣಾಮ ಸವಾರನೋರ್ವ ಮೃತಪಟ್ಟು, ಸಹ ಸವಾರ ಗಂಭೀರ...

ಗುಬ್ಬಿ | ಮೀಡಿಯಾ ಬ್ಯಾಕ್ ಆಫೀಸ್ ಕಂಪೆನಿಯ ಎಸ್.ರಘು ಅವರಿಗೆ ‘ಉದ್ಯೋಗದಾತ’ ಬಿರುದು ಪ್ರದಾನ

ಗ್ರಾಮೀಣ ಭಾಗದ ಕನಿಷ್ಠ ವಿದ್ಯಾಭ್ಯಾಸದ ಯುವಕ ಯುವತಿಯರಿಗೆ ಕಂಪ್ಯೂಟರ್ ತರಬೇತಿ...

ಹಾವೇರಿ | ಕನ್ನಡದ ಅಭಿವೃದ್ಧಿಗೆ ಶಿಕ್ಷಣ, ಉದ್ಯೋಗ ಬೇಕೇ ಹೊರತು ರಾಜಕಾರಣಿಗಳ ಭಾಷಣಗಳಲ್ಲ: ಬಸವರಾಜ ಪೂಜಾರ

ನಮ್ಮ ರಾಜ್ಯದ ಮಾತೃ ಭಾಷೆ ಕನ್ನಡ ಉಳಿವಿಗಾಗಿ, ಅಭಿವೃದ್ಧಿಗಾಗಿ ಕನ್ನಡಿಗರಿಗೆ ಶಿಕ್ಷಣ...

ಸಾಗರ | ಆಟೋ-ಕಾರು ಮುಖಾಮುಖಿ ಡಿಕ್ಕಿ: ಇಬ್ಬರು ಮೃತ್ಯು

ಶಿವಮೊಗ್ಗ ಜಿಲ್ಲೆಯ ಸಾಗರ ಸಮೀಪದಲ್ಲಿ ಆಟೋ ಹಾಗೂ ಕಾರಿನ ನಡುವೆ ಭೀಕರ...