ಯಾದಗಿರಿ | ಜಾತಿ ವ್ಯವಸ್ಥೆ ಪ್ರತಿಪಾದಕರು ಕಾಂತರಾಜ ವರದಿ ವಿರೋಧಿಸುತ್ತಿದ್ದಾರೆ: ಕೆ.ಎನ್.ಲಿಂಗಪ್ಪ

Date:

Advertisements

ಕರ್ನಾಟಕದಲ್ಲಿ 2013 ರಲ್ಲಿ ಕಾಂತರಾಜ ಆಯೋಗದಿಂದ ನಡೆಸಲಾದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯಲ್ಲಿ ಯಾವುದೇ ಲೋಪವಾಗಿಲ್ಲ, ಅಂದು ಸಮೀಕ್ಷೆಗೆ ಸರಿಯಾಗಿ ಮಾಹಿತಿ ನೀಡದವರೇ ಈಗ ಅದನ್ನು ವಿರೋಧಿಸುತ್ತಿದ್ದಾರೆ ಎಂದು ಕಾಂತರಾಜ್ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದಲ್ಲಿದ್ದ ಸದಸ್ಯ ಕೆ.ಎನ್.ಲಿಂಗಪ್ಪ ಹೇಳಿದರು.

ಸುರಪುರ ನಗರದ ಡಾ.ಬಾಬು ಜಗಜೀವನರಾಮ್ ಸಭಾ ಭವನದಲ್ಲಿ ಅಹಿಂದ ವೇದಿಕೆ ಹಮ್ಮಿಕೊಂಡಿದ್ದ ಕಾಂತರಾಜ್ ವರದಿಯ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2015ರ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದರು.

“ಕಾಂತರಾಜ್ ಆಯೋಗದ ಸಮೀಕ್ಷೆಯಲ್ಲಿ 1.33 ಲಕ್ಷ ಜನರಿಗೆ 2 ಬಾರಿ ತರಬೇತಿ ನೀಡಿ ಮಾನದಂಡ ಪ್ರಕಾರ ಸಮೀಕ್ಷೆಯನ್ನು ಮಾಡಿಸಲಾಗಿದೆ, ಇದಕ್ಕಾಗಿ 22,289 ಜನರನ್ನು ಮೇಲ್ವಿಚಾರಕರನ್ನು ನೇಮಿಸಲಾಗಿತ್ತು. ಅಲ್ಲದೆ ಈ ಸಮೀಕ್ಷೆಗೆ ಜಿಲ್ಲಾಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ಜಿ.ಪಂ ಸಿಇಓ, ತಹಸೀಲ್ದಾರ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ಹಾಗೂ ಶಿಕ್ಷಕರು ಒಳಗೊಂಡು ಸಮೀಕ್ಷೆ ನಡೆಸಲಾಗಿದೆ” ಎಂದರು.

Advertisements

ಕಾಂತರಾಜ ವರದಿಗೆ ಈಗ ವಿರೋಧಿಸುವ ಜನ ವರ್ಣಾಶ್ರಮ ಪದ್ದತಿ ಮುಂದುವರೆಯಬೇಕು ಎನ್ನುವ  ಮನಸ್ಥಿತಿಯಿಂದ ಹೇಳುತ್ತಿದ್ದಾರೆ. ವರದಿ ಜಾರಿಯಾದರೆ ಹಿಂದುಳಿದ ಮತ್ತು ಅತಿ ಹಿಂದುಳಿದ ಸಮುದಾಯಗಳು ಪ್ರಗತಿ ಸಾಧಿಸಲು ಅನುಕೂಲವಾಗುತ್ತದೆ, ಇದರಿಂದ ನಮಗೆ ತೊಂದರೆಯಾಗುತ್ತದೆ ಎನ್ನುವ ಕಾರಣಕ್ಕೆ ವಿರೋಧಿಸುತ್ತಿದ್ದಾರೆ” ಎಂದು ದೂರಿದರು.

 “ಹಿಂದಿನ ಸರಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾಸ್ವಾಮಿ, ಬಿ.ಎಸ್.ಯಡಿಯೂರಪ್ಪನವರು ವರದಿ ಸ್ವೀಕರಿಸಲು ಒಪ್ಪದೆ ಏನಾದರೂ ಸಬೂಬು ಹೇಳಿ ನಮ್ಮ ಆಯೋಗದ ತಂಡಕ್ಕೆ ವಾಪಸ್ ಕಳುಹಿಸಿದ್ದಾರೆ. ನಂತರ ಆಯೋಗವನ್ನೆ ರದ್ದುಗೊಳಿಸಿದರು. ಸಮೀಕ್ಷಾ ವರದಿಯ 45 ಸಂಪುಟಗಳನ್ನು ಒಂದು ಕೋಣೆಯಲ್ಲಿ ಭದ್ರವಾಗಿಟ್ಟು ಬೀಗ ಹಾಕಿ ಐಎಎಸ್ ಅಧಿಕಾರಿಯೊಬ್ಬರನ್ನು ಅದರ ಜವಾಬ್ದಾರಿ ನೀಡಲಾಗಿತ್ತು. ಆದರೆ ನಂತರದ ದಿನಗಳಲ್ಲಿ ಕೋಣೆಯ ಬೀಗ ತೆಗೆದು ವರದಿ ನೋಡಿರುವ ಕಾರಣಕ್ಕೆ ಇಂದು ವಿರೋಧ ಮಾಡುತ್ತಿರಬಹುದು ಎಂಬ ಅನುಮಾನ ಮೂಡುತ್ತಿದೆ” ಎಂದರು.

“ಈಗ ನೇಮಕಗೊಂಡಿರುವ ಆಯೋಗ ನಮ್ಮ ವರದಿಯನ್ನು ಸರಕಾರ ಸ್ವೀಕರಿಸುವ ಕುರಿತು ಯಾವುದೇ ರೀತಿಯ ಪ್ರಯತ್ನ ಮಾಡುತ್ತಿಲ್ಲ. ರಾಜ್ಯದಲ್ಲಿರುವ ಒಟ್ಟು 1351 ಜಾತಿಗಳ ಸಮಗ್ರವಾದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಸೇರಿದಂತೆ ಎಲ್ಲಾ ವಿಧದ ಸಮೀಕ್ಷೆಯನ್ನು ಮಾಡಲಾಗಿದೆ. ಇದರಿಂದ ರಾಜ್ಯದಲ್ಲಿನ ಹಿಂದುಳಿದ ಸಮುದಾಯಗಳ ಸರ್ವಾಂಗೀಣ ಏಳಿಗೆಗೆ ಅನುಕೂಲವಾಗಲಿದೆ. ಆದರೆ ಅದಕ್ಕೆ ನಮ್ಮ ಹಿಂದುಳಿದ ಜನರೆ ಧ್ವನಿ ಎತ್ತುತ್ತಿಲ್ಲ ಎನಿಸುತ್ತದೆ, ಧ್ವನಿ ಎತ್ತಿದರೆ ಸರಕಾರ ವರದಿಯನ್ನು ಸ್ವೀಕರಿಸಿ ಬಹಿರಂಗಗೊಳಿಸಬಹುದು” ಎಂದರು.

ಈ ಸುದ್ದಿ ಓದಿದ್ದೀರಾ? ಆಮೆಗತಿಯಲ್ಲಿ ಸಾಗುತ್ತಿದೆ ಜೆಜೆಎಂ; ರಾಜ್ಯದಲ್ಲಿ ಶೇ.10ರಷ್ಟು ಪೂರ್ಣಗೊಳ್ಳದ ಕಾಮಗಾರಿ

ಕಾರ್ಯಕ್ರಮದಲ್ಲಿ ಅಹಿಂದ ವೇದಿಕೆ ಮುಖಂಡರಾದ ಮಲ್ಲಯ್ಯ ಕಮತಗಿ, ವೆಂಕಟೇಶ ಹೊಸ್ಮನಿ, ಅಹ್ಮದ್ ಪಠಾಣ್, ದೇವಿಂದ್ರಪ್ಪ ಪತ್ತಾರ, ನಂದಕುಮಾರ ಬಾಂಬೆಕರ್ ಕನ್ನಳ್ಳಿ, ಮಹಾಂತೇಶ ದೇವರಗೋನಾಲ, ಅಜಯ್ ಬಿಲ್ಲವ್ ಸೇರಿದಂತೆ ಸಾಮಾಜಿಕ ಕಾರ್ಯಕರ್ತರು, ವಿವಿಧ ಸಮುದಾಯಗಳ ಮುಖಂಡರು ಉಪಸ್ಥಿತರಿದ್ದರು. ನಂದಕುಮಾರ ಬಾಂಬೆಕರ್ ಸ್ವಾಗತಿಸಿದರು, ರಾಹುಲ್ ಹುಲಿಮನಿ ನಿರೂಪಿಸಿ ವಂದಿಸಿದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X