ಭಾರತದಲ್ಲಿ ಕೊರೋನಾ ಮತ್ತೆ ಸಕ್ರಿಯ: 1800 ಪ್ರಕರಣ ದಾಖಲು, ಕೇರಳದಲ್ಲಿ ಒಂದು ಸಾವು

Date:

ಭಾರತದಲ್ಲಿ ಕೋವಿಡ್ 19 ಸಕ್ರಿಯವಾಗಿದ್ದು, 1,828 ಪ್ರಕರಣ ದಾಖಲಾಗಿದೆ. ನೂತನ ರೂಪಾಂತರ ಜೆಎನ್‌.1 ವೈರಸ್‌ನಿಂದ ಕೇರಳದಲ್ಲಿ ಒಬ್ಬರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ದೃಢಪಡಿಸಿದೆ.

ಇಲ್ಲಿಯವರೆಗೆ, ಕೋವಿಡ್ -19 ನಿಂದ 5,33,317 ಜನರು ಸಾವನ್ನಪ್ಪಿದ್ದಾರೆ ಮತ್ತು ಪ್ರಕರಣದ ಸಾವಿನ ಪ್ರಮಾಣವು ಶೇಕಡಾ 1.19 ರಷ್ಟಿದೆ. ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 4.46 ಕೋಟಿಗೆ (4,44,69,931) ಏರಿಕೆಯಾಗಿದೆ. ರಾಷ್ಟ್ರೀಯ ಚೇತರಿಕೆ ದರವನ್ನು ಶೇ. 98.81 ಕ್ಕೆ ನಿಗದಿಪಡಿಸಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸಚಿವಾಲಯದ ವೆಬ್‌ಸೈಟ್ ಪ್ರಕಾರ, ದೇಶದಲ್ಲಿ ಇದುವರೆಗೆ 220.67 ಕೋಟಿ ಡೋಸ್ ಕೋವಿಡ್ -19 ಲಸಿಕೆಯನ್ನು ನೀಡಲಾಗಿದೆ. ಭಾನುವಾರ, ಭಾರತದಲ್ಲಿ 335 ಹೊಸ ಕೋವಿಡ್ -19 ಸೋಂಕುಗಳನ್ನು ದಾಖಲಿಸಿದೆ ಮತ್ತು ಸಕ್ರಿಯ ಪ್ರಕರಣಗಳ ಸಂಖ್ಯೆ 1,701 ಕ್ಕೆ ಏರಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಒಟ್ಟು ಐದು ಸಾವು ವರದಿಯಾಗಿದ್ದು, ಕೇರಳದಲ್ಲಿ ನಾಲ್ಕು ಮತ್ತು ಉತ್ತರ ಪ್ರದೇಶದಲ್ಲಿ ಒಂದು ಎಂದು ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ಈ ಸುದ್ದಿ ಓದಿದ್ದೀರಾ? ಮತ್ತೆ ಕೋವಿಡ್ ಆತಂಕ | 60 ವರ್ಷ ಮೇಲ್ಪಟ್ಟವರಿಗೆ ಮಾಸ್ಕ್ ಕಡ್ಡಾಯ: ಆರೋಗ್ಯ ಸಚಿವ ದಿನೇಶ್ ಗುಂಡೂರಾವ್

ಕೇರಳದ ತಿರುವನಂತಪುರಂ ಜಿಲ್ಲೆಯ ಕರಕುಲಂ 79 ವರ್ಷದ ವೃದ್ಧರೊಬ್ಬರಿಗೆ ಅಪಾಯಕಾರಿಯಾದ ರೂಪಾಂತರ ಜೆಎನ್‌.1 ವೈರಸ್‌ ಸೋಂಕು ಪತ್ತೆಯಾಗಿದ್ದು, ಸೋಂಕಿತರನ್ನು ಕಣ್ಗಾವಲಿನಲ್ಲಿ ಇಡಲಾಗಿದೆ ಎಂದು ಐಸಿಎಂಆರ್ ಮಹಾನಿರ್ದೇಶಕ ಡಾ. ರಾಜೀವ್ ಬಹ್ಲ್ ತಿಳಿಸಿದ್ದಾರೆ.

ಹೊಸ ರೂಪಾಂತರದ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್, ಸಿಂಗಾಪುರ್ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾದ ಭಾರತೀಯ ಪ್ರಯಾಣಿಕರಲ್ಲಿ ತಿಂಗಳ ಹಿಂದೆ ಉಪ ರೂಪಾಂತರ ತಳಿ ಪತ್ತೆಯಾಗಿದೆ ಆದಾಗ್ಯೂ, ಕೇರಳ ಆರೋಗ್ಯ ಸಚಿವರು, ಸಾರ್ವಜನಿಕರು ಜಾಗರೂಕರಾಗಿರಲು ಮನವಿ ಮಾಡಿದ್ದಾರೆ.

ಕೇರಳದಲ್ಲಿ ಹೆಚ್ಚು ಸಕ್ರಿಯವಾಗುತ್ತಿರುವ ಹೊಸ ರೂಪಾಂತರ ಕೊರೋನಾ ವೈರಸ್‌ ಬಗ್ಗೆ ಕರ್ನಾಟಕದಲ್ಲಿ ಕಟ್ಟೆಚ್ಚರ ವಹಿಸಲಾಗುತ್ತಿದೆ. 60 ವರ್ಷ ಮೇಲ್ಪಟ್ಟವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆದೇಶಿಸಿದ್ದಾರೆ.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪೊಲೀಸ್‌ ಕಸ್ಟಡಿಯಲ್ಲೇ ನಡೆದಿವೆ 275 ಅತ್ಯಾಚಾರ ಪ್ರಕರಣಗಳು: ಎನ್‌ಸಿಆರ್‌ಬಿ ಡೇಟಾ

2017 ರಿಂದ 2022ರವರೆಗೆ 275 'ಪೊಲೀಸ್‌ ಕಸ್ಟಡಿಯಲ್ಲಿ ಅತ್ಯಾಚಾರ' ಪ್ರಕರಣಗಳು ದಾಖಲಾಗಿವೆ...

ಗುಜರಾತ್ | ಭಾರತದ ಅತಿ ಉದ್ದದ ಸೇತುವೆ ‘ಸುದರ್ಶನ್ ಸೇತು’ ಉದ್ಘಾಟಿಸಿದ ಪ್ರಧಾನಿ ಮೋದಿ

ಗುಜರಾತ್‌ನ ದ್ವಾರಕಾ ಜಿಲ್ಲೆಯ ಬೇಟ್ ದ್ವಾರಕಾ ದ್ವೀಪದಿಂದ ಓಖಾ ಪ್ರದೇಶಕ್ಕೆ ಸಂಪರ್ಕಿಸುವ,...

ಲೋಕಸಭಾ ಚುನಾವಣೆ | ಮುಂದಿನ ವಾರ ಬಿಜೆಪಿ 100 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ವರದಿ

ಮುಂದಿನ ತಿಂಗಳು ಚುನಾವಣಾ ಆಯೋಗದಿಂದ ಲೋಕಸಭೆ ಚುನಾವಣೆಯ ದಿನಾಂಕ ಘೋಷಣೆಗೂ ಮುನ್ನವೇ...

ಆಂಧ್ರ ಪ್ರದೇಶ | ಟಿಡಿಪಿ-ಜನಸೇನಾ ಮೈತ್ರಿ: 24 ಕ್ಷೇತ್ರ ಪವನ್‌ ಕಲ್ಯಾಣ್‌ಗೆ ಬಿಟ್ಟುಕೊಟ್ಟ ಚಂದ್ರಬಾಬು ನಾಯ್ಡು

ಲೋಕಸಭೆ ಚುನಾವಣೆ ಸಂದರ್ಭದಲ್ಲಿಯೇ ನಡೆಯಲಿರುವ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತೆಲುಗು ದೇಶಂ...