ರಾಜ್ಯದಲ್ಲಿ ಗಂಭೀರ ಬರಗಾಲ ಆವರಿಸಿದೆ. ರಾಜಕೀಯ ಬಿಟ್ಟು ರಾಜ್ಯ ಸರ್ಕಾರ ಆರ್ಥಿಕ ಪರಸ್ಥಿತಿ ಕುರಿತು ಶ್ವೇತಪತ್ರ ಹೊರಡಿಸಬೇಕೆಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜ್ಯದಲ್ಲಿ ಬರದಿಂದ ತತ್ತರಿಸಿರುವ ರೈತರಿಗೆ ಪರಿಹಾರ ನೀಡಲಾಗಿಲ್ಲ. ರೈತರ ಪರಿಸ್ಥಿತಿಯನ್ನು ಅರಿಯಲು ಸರ್ಕಾರ ಮುಂದಾಗಿಲ್ಲ. ಉಸ್ತುವಾರಿ ಸಚಿವರುಗಳು ರೈತರ ಬಳಿ ಹೋಗಿ ವಸ್ತುಸ್ಥಿತಿ ಅರಿತುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಯಾವುದೇ ಜಿಲ್ಲೆಯ ಜಿಲ್ಲಾಧಿಕಾರಿಗಳ ಬಳಿ ಹಣವಿಲ್ಲ. ಇರುವ ಹಣ ಕುಡಿಯುವ ನೀರು, ಮೇವು ಸಂಗ್ರಹಿಸಲು ಸಾಧ್ಯವಾಗುತ್ತದೆ ಹೊರತು ಬರ ಪರಿಹರಕ್ಕೆ ಹಣವೇ ಇಲ್ಲ” ಎಂದು ಹೇಳಿದ್ದಾರೆ.
“ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಾಣಿಕೆಯಲ್ಲಿ ಸರ್ಕಾರ ತೊಡಗಿದೆ. ಆದರೂ, ಗ್ಯಾರಂಟಿ ಯೋಜನೆ ಎಲ್ಲ ಫಲಾನುಭವಿಗಳಿಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ. ಘೋಷಿತ ಫಲಾನುಭವಿಗಳಿಗೆ ಯೋಜನೆಯನ್ನು ಮೊದಲ ತಲುಪಿಸಲಿ. ಕೇವಲ ಘೋಷಣೆ ಮಾಡುತ್ತಲೇ ಹೋದರೆ ಜಾರಿ ಸಾಧ್ಯವಾಗುವುದಿಲ್ಲ” ಎಂದಿದ್ದಾರೆ.
ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ನರಸಪ್ಪ ಯಕ್ಲಾಸಪುರು, ನಾಗೇಶ್ವರರಾವ್, ಬಂಡೇಶ ವಲ್ಕಂದಿನ್ನಿ, ಶಿವರಾಜ, ಮಹಾಂತೇಶ ಅತ್ತನೂರು ಉಪಸ್ಥಿತರಿದ್ದರು.
ವರದಿ : ಹಫೀಜುಲ್ಲ