ಇಂದು ಲೋಕಸಭೆಯಲ್ಲಿ ಅನುಚಿತ ವರ್ತನೆಗಾಗಿ ಇಬ್ಬರು ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಲಾಗಿದ್ದು, ಉಭಯ ಸದನಗಳಿಂದ ಅಮಾನತುಗೊಂಡವರ ಸಂಖ್ಯೆ 143ಕ್ಕೆ ಏರಿಕೆಯಾಗಿದೆ.
ಕಳೆದ ನಾಲ್ಕು ಅಧಿವೇಶನ ದಿನಗಳಿಂದ ಸಂಸತ್ತಿನಲ್ಲಿ ಭದ್ರತಾ ಲೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ಒತ್ತಾಯಿಸಿದ ಎರಡು ಸದನಗಳಾದ್ಯಂತ ಒಟ್ಟು 143 ಪ್ರತಿಪಕ್ಷ ಸಂಸದರನ್ನು ಅಮಾನತುಗೊಳಿಸಲಾಗಿದೆ. ಲೋಕಸಭೆಯೊಂದರಲ್ಲೇ 97 ಲೋಕಸಭಾ ಸಂಸದರನ್ನು ಅಮಾನತುಗೊಳಿಸಲಾಗಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಅವರು ಮಂಡಿಸಿದ ನಿರ್ಣಯವನ್ನು ಸದನವು ಅಂಗೀಕರಿಸಿದ ನಂತರ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರು ಕೇರಳ ಕಾಂಗ್ರೆಸ್ (ಮಣಿ)ನ ಥಾಮಸ್ ಚಾಜಿಕಡನ್ ಮತ್ತು ಸಿಪಿಐ(ಎಂ)ನ ಎ ಎಮ್ ಆರಿಫ್ ಅವರನ್ನು ಅಮಾನತುಗೊಳಿಸಿದರು. ಈ ಇಬ್ಬರು ಸಂಸದರನ್ನು ಅಧಿವೇಶನದ ಉಳಿದ ಅವಧಿಗೆ ಅಮಾನತು ಮಾಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ದೂಷಣೆ ಬಿಡಲಿ, ಆತ್ಮಹತ್ಯೆಯಿಂದ ರೈತರನ್ನು ದೂರ ಮಾಡಲಿ
ಲೋಕಸಭೆಯಲ್ಲಿನ 142 ಪ್ರತಿಪಕ್ಷಗಳ ಸಂಸದರಲ್ಲಿ 97 ಮಂದಿಯನ್ನು ಈಗ ಅಮಾನತುಗೊಳಿಸಲಾಗಿದೆ. ಇದು ಶೇಕಡಾ 68 ಕ್ಕಿಂತ ಹೆಚ್ಚಾಗಿದೆ.
ಅಮಾನತು ಪರ್ವದ ನಂತರ ರಾಜ್ಯಸಭೆಯಲ್ಲಿ 100 ಕ್ಕಿಂತ ಕಡಿಮೆ ಪ್ರತಿಪಕ್ಷಗಳ ಸಂಸದರು ಉಳಿದಿರುವುದರಿಂದ, ಆ ಸದನದಲ್ಲಿ ಸರ್ಕಾರವು ಯಾವುದೇ ಪ್ರಮುಖ ಚರ್ಚೆಯನ್ನು ನಡೆಸುವುದು ಸಾಧ್ಯವಾಗುವುದಿಲ್ಲ. ಸದನದ ಮೂಲಕ ಯಾವುದೇ ಶಾಸನವನ್ನು ಚರ್ಚೆಗೊಳಪಡಿಸಬೇಕಿದ್ದರೆ 100ಕ್ಕಿಂತ ಹೆಚ್ಚು ಸಂಸದರು ಉಪಸ್ಥಿತರಿರಬೇಕು.
ಚಳಿಗಾಲದ ಅಧಿವೇಶನದ ಅಂತ್ಯಕ್ಕೆ ಇನ್ನೆರಡು ದಿನಗಳು ಬಾಕಿ ಇದ್ದು, ಮುಂದಿನ ವರ್ಷ ಲೋಕಸಭೆ ಚುನಾವಣೆಗೆ ಮುನ್ನ ನಡೆಯುತ್ತಿರುವ ಕೊನೆಯ ಪೂರ್ಣ ಅಧಿವೇಶನ ಇದಾಗಿದೆ.