ಬೀದರ್‌ | ಬಗರ್‌ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡುವಂತೆ ಸಿಪಿಐ, ಎಐಕೆಎಸ್ ಆಗ್ರಹ

Date:

Advertisements

ಕಮಲನಗರ ತಾಲೂಕಿನ ಬಗರ್‌ ಹುಕುಂ ಸಾಗುವಳಿದಾರರ ಭೂಮಿ ಸಕ್ರಮಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅಖಿಲ ಭಾರತ ಕಿಸಾನ ಸಭಾ ಹಾಗೂ ಸಿಪಿಐ ಜಂಟಿಯಾಗಿ ಪ್ರತಿಭಟನೆ ನಡೆಸಿತು.

ಕಮಲನಗರ ಪಟ್ಟಣದ ಮುಖ್ಯ ರಸ್ತೆಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತಹಶೀಲ್‌ ಕಚೇರಿಗೆ ತೆರಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಶೀಲ್ದಾರ್‌ ಅಮಿತ್‌ ಕುಲಕರ್ಣಿ ಅವರಿಗೆ ಸಲ್ಲಿಸಿದರು.

“ತಾಲೂಕಿನ ಭೂರಹಿತ ಬಡ ರೈತರು 1978 ರಿಂದ ಸರ್ಕಾರಿ ಭೂಮಿಯನ್ನು ಕಾಸ್ತು ಮಾಡುತ್ತ ಉಪಜೀವನ ನಡೆಸುತ್ತಿದ್ದಾರೆ. ಆದರೆ ಕೆಲವು ಕಡೆ ಗೇಣಿ ಭೂಮಿ ಮತ್ತು ಸರ್ಕಾರಿ ಭೂಮಿ ಸಕ್ರಮಗೊಳಿಸಲು ಕಮಿಟಿಗಳನ್ನು ಮಾಡಲಿಲ್ಲ. ಇದರಿಂದಾಗಿ ಕೃಷಿ ಕಾರ್ಮಿಕರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಭೂಮಿಯಿಂದ ವಂಚಿತರಾಗುತ್ತಿದ್ದಾರೆ. ಫಾರಂ ನಂ.50, 53 ಮತ್ತು ಫಾರಂ 57 ಇವುಗಳ ವಿಲೇವಾರಿ ಮಾಡಲಾಗುತ್ತಿಲ್ಲ. ಇದರಿಂದ ನಿಜವಾದ ಭೂ ಸಾಗುವಳಿ ಮಾಡುವವರಿಗೆ ಭೂಮಿ ಸಿಗುತ್ತಿಲ್ಲ. ಅರಣ್ಯ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದ ಕಾರಣದಿಂದ ಅರಣ್ಯ ಭೂಮಿಯನ್ನು ಬಹುರಾಷ್ಟ್ರೀಯ ಕಂಪನಿಗಳಿಗೆ ಕೊಡಲು ಕೇಂದ್ರ ಸರ್ಕಾರ ಮುಂದಾಗಿರುತ್ತದೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.

Advertisements

ಸಿಪಿಐ ಜಿಲ್ಲಾ ಮುಖಂಡ ಬಾಬುರಾವ ಹೊನ್ನಾ ಮಾತನಾಡಿ, “ಕೇಂದ್ರ ಸರ್ಕಾರ ʼಬೇಟಿ ಬಚಾವೋ ಬೇಟಿ ಪಡಾವೋʼ ಎಂದು ಹೇಳುತ್ತದೆ, ಆದರೆ ಉತ್ತರಪ್ರದೇಶ, ಗುಜರಾತ್‌ ಸೇರಿ ಬೇರೆ ಬೇರೆ ರಾಜ್ಯಗಳಲ್ಲಿ ಅತ್ಯಾಚಾರಗಳ ಸಂಖ್ಯೆ ಮಿತಿಮೀರಿದರೂ ಪ್ರಧಾನಿಗಳು ಧ್ವನಿ ಎತ್ತಲ್ಲ. 1975ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೋಷಿಸಿ ಎಲ್ಲರಿಗೂ ಜೈಲಿಗಟ್ಟಿತ್ತು, ಆದರೆ ಇಂದಿನ ಸರ್ಕಾರ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಹೇರುವ ಮೂಲಕ ಎಲ್ಲರಿಗೂ ಜೈಲಿಗಟ್ಟುವ ಪ್ರಯತ್ನ ನಡೆಸುತ್ತಿದೆ. ಯಾವುದೇ ಪಕ್ಷಕ್ಕೆ ಸೇರದ ಪ್ರಗತಿಪರ ಚಿಂತಕರಿಗೆ, ಬರಗಾರರಿಗೆ ಭೀಮಾಕೋರೆಗಾಂವ ಪ್ರಕರಣದ ಆರೋಪದಲ್ಲಿ ಜೈಲಿನಲ್ಲಿ ಇಟ್ಟಿದ್ದಾರೆ” ಎಂದು ಆಕ್ಷೇಪಿಸಿದರು.

ದೇಶದ ಸಮಸ್ಯೆ ನಿರುದ್ಯೋಗದ ಬಗ್ಗೆ ಧ್ವನಿಯೆತ್ತದ ಪ್ರಧಾನಿ ಮಣಿಪುರದಲ್ಲಿ ಅಮಾನವೀಯ ಘಟನೆ ನಡೆದರೂ ಇಲ್ಲಿಯವರೆಗೆ ಭೇಟಿ ನೀಡಲಿಲ್ಲ. ಆದರೆ ಅಂಬಾನಿ, ಅದಾನಿ ಪರ ಮಾತನಾಡುತ್ತಾರೆ. ಅದಾನಿ ಅಕ್ರಮ ಕುರಿತು ಧ್ವನಿಯೆತ್ತಿದ ಸಂಸತ್‌ ನಿಂದ ಹೊರಗಿಡಲು ಅಮಾನತು ಮಾಡುತ್ತಾರೆ.ಸಂಸತ್‌ ಮೇಲೆ ದಾಳಿ ನಡೆಸಿದ ಪ್ರಕರಣದಲ್ಲಿ 141 ಸಂಸದರಿಗೆ ಅಮಾನತು ಮಾಡಲಾಗಿದೆ. ಮೈಸೂರು ಸಂಸದ ಪ್ರತಾಪ ಸಿಂಹ ಅವರು ಪಾಸ್‌ ಕೊಟ್ಟಿದ್ದಾರೆ. ಆದರೆ ಅವರ ವಿರುದ್ದ ಯಾವುದೇ ಕ್ರಮ ಕೈಗೊಳ್ಳದ ಪ್ರಧಾನಿ ಹಾಗೂ ಗೃಹ ಮಂತ್ರಿಗಳು ಮೌನವಾಗಿದ್ದಾರೆ” ಎಂದರು.

ಬೇಡಿಕೆಗಳು: 

1. ಈ ಹಿಂದೆ ಇದ್ದ ಸರ್ಕಾರ ಭೂ ಕಾಯ್ದೆಯಲ್ಲಿ ತಿದ್ದುಪಡಿ ಮಾಡಿದ್ದು, ಕೃಷಿಕರಲ್ಲದವರು ಭೂಮಿ ಖರೀದಿ ಮಾಡಲು ಅನುಕೂಲ ಮಾಡಿಕೊಟ್ಟಿದ್ದು, ಅದನ್ನು ಈಗಿನ ಸರ್ಕಾರ ಹಿಂಪಡೆಯಬೇಕೆಂದು ಒತ್ತಾಯಿಸಲಾಗುತ್ತಿದೆ.

2. ಕಮಲನಗರ ಮತ್ತು ಔರಾದ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಹತ್ತಿ ಬೆಳೆ ಬೆಳೆಯಲಾಗುತ್ತಿದೆ. ಆದ್ದರಿಂದ ಹತ್ತಿ ಖರೀದಿ ಕೇಂದ್ರಗಳನ್ನು ಹಿಂದುಳಿದ ಎರಡು ತಾಲ್ಲೂಕುಗಳಲ್ಲಿ ಸ್ಥಾಪಿಸಬೇಕು.

3. ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಲ್ಯಾಣ ಮಂಡಳಿಯಿಂದ ವಿದ್ಯಾರ್ಥಿ ವೇತನ ಕಡಿಮೆಗೊಳಿಸಿರುವುದನ್ನು ಹಿಂಪಡೆಯಬೇಕೆಂದು ಒತ್ತಾಯ.

4. ವೃದ್ದಾಪ ವೇತನ ಕೆಲವು ಗ್ರಾಮಗಳಲ್ಲಿಯ ಹಿರಿಯ ನಾಗರಿಕರಿಗೆ ಕೊಡುವುದನ್ನು ನಿಲ್ಲಿಸಿರುವುದು ಹಿಂತೆಗೆದುಕೊಂಡು ಪುನಃ ಅವರುಗಳಿಗೆ ಮಾಸಿಕ 5 ಸಾವಿರ ರೂ.ಗೆ ಹೆಚ್ಚಿಸಬೇಕು.

5. ರೈತರ ಸರ್ಕಾರಿ ಸಾಲ ಮತ್ತು ಬ್ಯಾಂಕುಗಳ ಸಾಲಗಳನ್ನು ಸಂಪೂರ್ಣವಾಗಿ ಮನ್ನಾ ಮಾಡಬೇಕು.

6. ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವವರೆಗೆ ನಿರುದ್ಯೋಗ ಭತ್ಯೆ ಬಿಡುಗಡೆ ಮಾಡಬೇಕು.

7. ಕಮಲನಗರ ಪಟ್ಟಣದಲ್ಲಿ ತಾಲ್ಲೂಕಿಗೆ ಸಂಬಂಧಿಸಿದ ಎಲ್ಲಾ ಕಚೇರಿಗಳ ಕಟ್ಟಡಗಳನ್ನು ನಿರ್ಮಿಸುವುದು.

8. ಗಡಿ ಭಾಗದಲ್ಲಿರುವ ಗ್ರಾಮಗಳ ಶಾಲೆಗಳಲ್ಲಿ ಶಿಕ್ಷಕರುಗಳನ್ನು ನೇಮಿಸಬೇಕು.

ಈ ಸುದ್ದಿ ಓದಿದ್ದೀರಾ? ಕಲಬುರಗಿ | ಚಾಕು ತೋರಿಸಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಇಬ್ಬರು ಬಾಲಕರು

ಪ್ರತಿಭಟನೆಯಲ್ಲಿ ಅಖಿಲ ಭಾರತ ಕಿಸಾನ ಸಭಾ ಜಿಲ್ಲಾಧ್ಯಕ್ಷ ನಜೀರ್‌ ಅಹ್ಮದ್‌, ಸಿಪಿಐ ಜಿಲ್ಲಾ ಕಾರ್ಯದರ್ಶಿ ಅಲಿ ಅಹಮದ್‌ ಖಾನ್‌, ಸಹ ಕಾರ್ಯದರ್ಶಿ ಎಂ.ಡಿ.ಶಫಾಯತ್‌ ಅಲಿ, ಔರಾದ ತಾಲೂಕು ಕಾರ್ಯದರ್ಶಿ ಶೇಖ ನವಾಜ್‌, ಕಮಲನಗರ ತಾಲೂಕಾಧ್ಯಕ್ಷ ಚಾಂದೋಬಾ ಭೋಸ್ಲೆ, ಎಐಕೆಎಸ್‌ ಔರಾದ ಕಾರ್ಯದರ್ಶಿ ಮೊಗಲಪ್ಪ ಸುಂದಾಳ, ಗಣೇಶ ಶಿಂಧೆ, ಶಿವಾಜಿರಾವ ಭೋಸ್ಲೆ, ಉಮಾಕಾಂತ ಸಿಂಧೆ, ಖಮರ್‌ ಪಟೇಲ್‌, ವಿಮಲಾಬಾಯಿ ಚಂದೋಬಾ, ಉತ್ತಮರಾವ ಮಾನೆ, ಪ್ರವೀಣ ಕುಲಕರ್ಣಿ ಸೇರಿದಂತೆ ಸೇರಿದಂತೆ ಇತರರಿದ್ದರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದೀಕ್ಷಾ ಭೂಮಿ ಯಾತ್ರೆಗೆ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳ ನಿಯೋಜನೆ – ಅರ್ಜಿ ಆಹ್ವಾನ

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪ್ರಸಕ್ತ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು...

ಉಡುಪಿ | ಪರಿಸರ ಸ್ನೇಹಿ ಗೌರಿ, ಗಣೇಶ ಹಬ್ಬ ಆಚರಿಸಿ

ಪ್ರಸಕ್ತ ಸಾಲಿನ ಸ್ವರ್ಣಗೌರಿ ಹಾಗೂ ವರಸಿದ್ದಿ ವಿನಾಯಕ ಚತುರ್ಥಿ ಹಬ್ಬವು ಸಮೀಪಿಸುತ್ತಿದ್ದು....

ಜಾತಿ ನಿಂದನೆ ಆರೋಪ: ಬಿಗ್‌ಬಾಸ್‌ನ ಮಾಜಿ ಸ್ಪರ್ಧಿ ವಕೀಲ ಕೆ ಎನ್ ಜಗದೀಶ್ ಬಂಧನ

ಜಾತಿ ನಿಂದನೆ ಮಾಡಿದ ಆರೋಪದಲ್ಲಿ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಸಿದ ಬಳಿಕ ಸೋಷಿಯಲ್...

ಕಲಬುರಗಿ | ಚುನಾವಣಾ ನೀತಿ ಬದಲಾಗಬೇಕೆಂಬುದು ಸಿಪಿಐ(ಎಂ) ನಿಲುವು : ಕೆ.ಪ್ರಕಾಶ

ದೇಶದಲ್ಲಿ ಸರ್ವಾಧಿಕಾರವು ತಾಂಡವವಾಡುತ್ತಿದ್ದು, ಅಘೋಷಿತವಾಗಿ ತುರ್ತುಸ್ಥಿತಿ ಎದುರಿಸುತ್ತಿದ್ದೇವೆ. ಚುನಾವಣೆ ಆಯೋಗದ ಇಂದಿನ...

Download Eedina App Android / iOS

X