ಲೋಕಸಭೆಯ ಕಲಾಪದ ವೇಳೆ ಅಶಿಸ್ತಿನ ವರ್ತನೆಯ ಆರೋಪದ ಮೇಲೆ ಕರ್ನಾಟಕದ ಸಂಸದ ಡಿಕೆ ಸುರೇಶ್, ನಕುಲ್ ನಾಥ್ ಮತ್ತು ದೀಪಕ್ ಬೈಜ್ ಸೇರಿದಂತೆ ಮತ್ತೆ ಮೂವರು ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಲಾಗಿದೆ.
ಇಂದು ಚಳಿಗಾಲ ಅಧಿವೇಶನದ ಕೊನೆಯ ದಿನವಾಗಿದ್ದು, ಈ ಮೂವರು ಅಮಾನತಾದ ಸಂಸದರ ಸಂಖ್ಯೆ ಸೇರಿ ಒಟ್ಟು ಅಮಾನತಾದ ಸಂಸದರ ಸಂಖ್ಯೆ 146ಕ್ಕೇರಿದೆ.
ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಈ ಪ್ರಸ್ತಾವವನ್ನು ಲೋಕಸಭೆಯಲ್ಲಿ ಮಂಡಿಸಿದರು. ಈ ವೇಳೆ ಸ್ಪೀಕರ್ ಸ್ಥಾನದಲ್ಲಿದ್ದ ರಮಾ ದೇವಿ ಅದನ್ನು ಅನುಮೋದಿಸಿದರು.
Three more Opposition MPs, including DK Suresh, Nakul Nath, and Deepak Baij, suspended from the Lok Sabha.
A total of 146 Opposition MPs have been suspended so far from the Parliament.@amitk_journo shares more details with @kritsween. pic.twitter.com/dQp7vuhoBL
— TIMES NOW (@TimesNow) December 21, 2023
ಸಂಸತ್‌ನ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿ ಚರ್ಚೆಗೆ ಪಟ್ಟು ಹಿಡಿದಿದ್ದ ವಿರೋಧ ಪಕ್ಷಗಳಿಂದ ನಿನ್ನೆಯವರೆಗೆ ಒಟ್ಟು 143 ಸಂಸದರನ್ನು ರಾಜ್ಯಸಭೆ ಹಾಗೂ ಲೋಕಸಭೆಯಿಂದ ಅಮಾನತು ಮಾಡಲಾಗಿತ್ತು. ಇದನ್ನು ಖಂಡಿಸಿ, ದೆಹಲಿಯ ಜಂತರ್ ಮಂತರ್ ಸೇರಿ ದೇಶಾದ್ಯಂತ ನಾಳೆ(ಡಿ.22) ಪ್ರತಿಭಟಿಸಲು ‘ಇಂಡಿಯಾ’ ಮೈತ್ರಿಕೂಟ ಕರೆ ನೀಡಿದೆ.
ಇದನ್ನು ಓದಿದ್ದೀರಾ? 143 ಸಂಸದರ ಅಮಾನತು | ಡಿ.22ರಂದು ದೇಶಾದ್ಯಂತ ಪ್ರತಿಭಟಿಸಲು ‘ಇಂಡಿಯಾ’ ಮೈತ್ರಿಕೂಟ ಕರೆ
ಇಂದು ಬೆಳಗ್ಗೆ ಸಂಸತ್ ಭವನದಿಂದ ವಿಜಯ್ ಚೌಕ್‌ವರೆಗೆ ರ್‍ಯಾಲಿ ನಡೆಸಿದ ವಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ನಾಯಕರು, ಕೇಂದ್ರ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯ ವಿರುದ್ಧ ಘೋಷಣೆಗಳನ್ನು ಕೂಗಿದರು.