ಕರ್ನಾಟಕದಲ್ಲಿ ಕೊರೊನಾ ವೈರಸ್ ಸೊಂಕಿತರು ಪತ್ತೆಯಾಗಿದ್ದು, ಈಗಾಗಲೇ ಜಿಲ್ಲಾ ಹಾಗೂ ತಾಲೂಕು ಆಸ್ಪತ್ರೆಗಳಿಗೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮದ ಸುತ್ತೋಲೆ ಹೊರಡಿಸಿದ್ದು, ಎಲ್ಲಾ ಸಿದ್ಧತೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದು, ಸರ್ಕಾರದ ಮಾರ್ಗಸೂಚಿ ಪಾಲಿಸುವಂತೆ ಹುಬ್ಬಳ್ಳಿ ಕಿಮ್ಸ್ ನಿರ್ದೇಶಕರು ಮನವಿ ಮಾಡಿದ್ದಾರೆ.
ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಮುಂಜಾಗ್ರತಾ ಕ್ರಮಕೈಗೊಂಡಿದ್ದು, ಕೋವಿಡ್ ಎದುರಿಸಲು ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ. ಕೋವಿಡ್ ರೋಗಿಗಳಿಗಾಗಿ 100 ಬೆಡ್ ಮೀಸಲಿಡಲಾಗಿದ್ದು, 60 ಆಕ್ಸಿಜನ್, 40 ಬೆಡ್ ಆಕ್ಸಿಜನ್ ಜೊತೆಗೆ ಐಸಿಯು ವ್ಯವಸ್ಥೆ ಮಾಡಲಾಗಿದೆ.
ಈಗಾಗಲೇ ವೈದ್ಯರೊಂದಿಗೆ ಮೀಟಿಂಗ್ ನಿರ್ದೇಶಕರು ಸಭೆ ಮಾಡಿದ್ದು, ಕೋ ಆರ್ಡಿನೇಟರ್ ನೇಮಕ ಮಾಡಲಾಗಿದೆ. ಕೋವಿಡ್ ಎದುರಿಸಲು ಎಲ್ಲ ರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿದ್ದೇವೆ. ರೋಗಿಗಳಿಗಾಗಿ 100 ಬೆಡ್ ಮೀಸಲಿಡಾಗಿದೆ. ಕಿಮ್ಸ್‌ನಲ್ಲಿ ಆಕ್ಸಿಜನ್ ಸಮಸ್ಯೆ ಇಲ್ಲ. 40 ಕೆಎಲ್ ಫ್ಲಾಂಟ್ ನಮ್ಮಲ್ಲಿ ಇದೆ ಎಂದು ಕಿಮ್ಸ್ ನಿರ್ದೇಶಕ ಕಮ್ಮಾರ್ ಹೇಳಿದ್ದಾರೆ.