ಶಾಲೆಗಳಲ್ಲಿ ಕೊರೊನಾ ವೈರಸ್ ತಡೆಗಟ್ಟಲು ತುರ್ತು ಮಾರ್ಗಸೂಚಿ ಹೊರಡಿಸಲು ಗ್ರಾಮೀಣ ಶಿಕ್ಷಕರ ಸಂಘ ಆಗ್ರಹಿಸಿದೆ. ಕೋವಿಡ್-19ರ ಎರಡು ಅಲೆಗಳಲ್ಲಿ ಕಿರಿಯ ವಯಸ್ಸಿನ ಶಿಕ್ಷಕರು ಅಧಿಕಾರಿಗಳು ಜೀವ ತೆತ್ತಿದ್ದಾರೆ. ಗಂಭೀರವಾಗಿ ಪರಿಗಣಿಸಲು ಶಿಕ್ಷಕರ ಸಂಘದ ಅಶೋಕ ಸಜ್ಜನ ಒತ್ತಾಯಿಸಿದ್ದಾರೆ.
ಈಗಾಗಲೇ ಕೋವಿಡ್ ಸೋಂಕಿತ ರೋಗಿಗಳ ಸಂಖ್ಯೆ ವಿಶ್ವ, ದೇಶ, ರಾಜ್ಯಗಳಾದ್ಯಂತ ವೇಗವಾಗಿ ಹೊಸ ರೂಪಾಂತರಿ ಜೆ-1 ತಳಿ ಪ್ರಸರಣ ತಡೆಯುವಲ್ಲಿದೆ. ಮುಖ್ಯಮಂತ್ರಿಗಳು, ಆರೋಗ್ಯ ಸಚಿವರು, ಸಾರಿಗೆ ಸಚಿವರು ತೀವ್ರನಿಗಾ ಮಾರ್ಗಸೂಚಿ ಹೊರಡಿಸುತ್ತಿದ್ದಾರೆ.
ಆದರೆ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಲ್ಲಿ ಐದು ಲಕ್ಷದಷ್ಟು ಅಧ್ಯಾಪಕರು ಒಂದು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳಿದ್ದು, ಮಾನವ ಸಂಪನ್ಮೂಲ ಸಂಪತ್ತು ಉಳಿಸಿ ಬೆಳೆಸುವಲ್ಲಿ ಶಾಲಾ ಶಿಕ್ಷಣ ಸಚಿವರು ಹಾಗೂ ಉನ್ನತ ಹಂತದ ಅಧಿಕಾರಿಗಳು ತುರ್ತಾಗಿ ಇತ್ತ ಕಡೆ ಗಮನಹರಿಸಿ, ಕಟ್ಟು ನಿಟ್ಟಿನ ಮಾರ್ಗಸೂಚಿ ಹೊರಡಿಸಬೇಕೆಂದು ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ರಾಜ್ಯ ಘಟಕ ಹುಬ್ಬಳ್ಳಿಯ ರಾಜ್ಯಾಧ್ಯಕ್ಷ ಅಶೋಕ.ಎಮ್.ಸಜ್ಜನ ಹಾಗೂ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಸಿ.ಉಪ್ಪಿನ ಸರ್ಕಾರಕ್ಕೆ ಮತ್ತು ಸಚಿವರಿಗೆ ಆಗ್ರಹಿಸಿದ್ದಾರೆ.