ಹಿರಿಯ ಮುತ್ಸದ್ದಿ ರಾಜಕಾರಣಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ಆದರೆ 12ನೇ ಶತಮಾನದ ಬಸವ ರಾಜ್ಯದ ಆಡಳಿತ ಆರಂಭವಾಗುತ್ತದೆ ಎಂದು ಹಿರಿಯ ಲಿಂಗಾಯತ ಮುಖಂಡ ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ಅಭಿಪ್ರಾಯಪಟ್ಟರು.
ಮಲ್ಲಿಕಾರ್ಜುನ ಖರ್ಗೆಯವರನ್ನು ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿಯನ್ನಾಗಿಸಿದ್ದಕ್ಕೆ ಹರ್ಷ ವ್ಯಕ್ತಪಡಿಸಿ ಧಾರವಾಡ ಜಿಲ್ಲೆಯ ಹುಬ್ಬಳ್ಳಿ ನಗರದಲ್ಲಿ ಪತ್ರಿಕೆ ಹೇಳಿಕೆ ನೀಡಿದ್ದಾರೆ.
“ಈ ಹಿಂದೆ ಅನೇಕರು ಈ ದೇಶವನ್ನು ನಾವು ಪ್ರಧಾನಿಗಳಾದಾಗ ರಾಮರಾಜ್ಯ ಮಾಡುತ್ತೇವೆ, ರೈತರ ರಾಜ್ಯ ಮಾಡುತ್ತೇವೆಂದು ಘೋಷಣೆ ಕೂಗಿ ಅಧಿಕಾರಕ್ಕೆ ಬಂದು ರಾಮರಾಜ್ಯವನ್ನೂಮಾಡಲಿಲ್ಲ, ರೈತ ರಾಜ್ಯವನ್ನೂ ಮಾಡಲಿಲ್ಲ” ಎಂದು ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಸಚಿವ ಸಂಪುಟ ಸಭೆ | ಕಾಲೇಜುಗಳಿಗೆ ನೌಕರರ ನೇಮಕ; ಬುಡಕಟ್ಟು ಪಂಗಡಗಳಿಗೆ ಪೌಷ್ಟಿಕ ಆಹಾರ ಖರೀದಿಗೆ ಒಪ್ಪಿಗೆ
“ಕಲ್ಯಾಣ ಕರ್ನಾಟಕದ ಜಗಜ್ಯೋತಿ ಬಸವಣ್ಣನವರ ಪರಿಸರದಲ್ಲಿ ಬೆಳೆದು ಬಂದ ಮಲ್ಲಿಕಾರ್ಜುನ ಖರ್ಗೆ ಅಪ್ಪಟ ಬಸವವಾದಿಯಾಗಿದ್ದು ಬಸವಣ್ಣನವರ ಕಲ್ಪನೆಯ ಬಸವ ನಾಡು ನಿರ್ಮಿಸುವಲ್ಲಿ ಯಶಸ್ವಿಯಾಗುವ ಎಲ್ಲ ಅರ್ಹತೆ ಪಡೆದಿದ್ದಾರೆ” ಎಂದು ಕೆಪಿಸಿಸಿ ವಕ್ತಾರ ಗಂಗಾಧರ ದೊಡವಾಡ ವಿಶ್ವಾಸ ವ್ಯಕ್ತಪಡಿಸಿದರು.