ಧಾರವಾಡದ ಮಧ್ಯವರ್ತಿ ಸ್ಥಳ ಕಲಾಭವನದಲ್ಲಿ ಇದೇ ಡಿಸೆಂಬರ್ 23, 24 ಹಾಗೂ 25ರಂದು ಕಟ್ಟಡ ಸಾಮಗ್ರಿಗಳ ಹಾಗೂ ಗೃಹ ಅಲಂಕಾರಿಕ ವಸ್ತುಗಳ ಪ್ರದರ್ಶನ ಬಿಲ್ಟ್ ಎಕ್ಸ್‌ಪೂ 2023 ನಡೆಸಲು ಉದ್ದೇಶಿಸಿದ್ದೇವೆ ಎಂದು ಎಸಿಸಿಇ ಧಾರವಾಡದ ಅಧ್ಯಕ್ಷ ಸುನೀಲ ಬಾಗೇವಾಡಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು ಈ ವಸ್ತು ಪ್ರದರ್ಶನವನ್ನು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ದಿ.23ರಂದು ಬೆಳಿಗ್ಗೆ 10.30ಕ್ಕೆ ಕಲಾಭವನದ ಆವರಣದಲ್ಲಿ ಉದ್ಘಾಟಿಸುವರು. ಇದೇ ಸಂದರ್ಭದಲ್ಲಿ ಶಾಸಕ ಅರವಿಂದ್ ಬೆಲ್ಲದ್ ಹಾಗೂ ವಿನಯ್ ಕುಲಕರ್ಣಿ ಇವರನ್ನು ಆಹ್ವಾನಿಸಲಾಗಿದೆ.
ಬೆಳಿಗ್ಗೆ 10:00ರಿಂದ ರಾತ್ರಿ 8. 30ವರೆಗೆ ಸಾರ್ವಜನಿಕರಿಗಾಗಿ ಉಚಿತವಾಗಿ ವೀಕ್ಷಣೆಗಾಗಿ ತೆರೆದಿರುತ್ತದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪ್ರದರ್ಶನವನ್ನು ವೀಕ್ಷಿಸಿ ಇದರ ಲಾಭ ಪಡೆದುಕೊಳ್ಳಬೇಕಾಗಿ ಈ ಮೂಲಕವಾಗಿ ವಿನಂತಿಸಿಕೊಳ್ಳುತ್ತಿದ್ದೇವೆ ಎಂದರು.
ಬಿಲ್ಟ್ ಎಕ್ಸ್‌ಪೊದಲ್ಲಿ ಭಾಗವಹಿಸುವವರುಈ ಪ್ರದರ್ಶನದಲ್ಲಿ ಒಟ್ಟು 56 ಮಳಿಗೆಗಳಿದ್ದು ಬಹು ರಾಷ್ಟ್ರೀಯ ಉದ್ಯಮದಾರರಿಂದ ಹಿಡಿದು ಸಣ್ಣ ಉದ್ದಿಮೆದಾರರು ತಮ್ಮ ತಮ್ಮ ಉತ್ಪಾದನೆಗಳ ಪರಿಚಯವನ್ನು ಮಾಡಿಕೊಡುಲಿದ್ದಾರೆ.
ಅಸೋಸಿಯೇಷನ್‌ನಿಂದ ಇದು ಒಂದು ಸಾರ್ವಜನಿಕ ಸೇವೆಯಾಗಿದ್ದು ಕಟ್ಟಡ ನಿರ್ಮಾಣಕಾರರು ಹಾಗೂ ಸಂಬಂಧಪಟ್ಟ ಎಲ್ಲ ವರ್ಗದವರು ಇದರ ಸಂಪೂರ್ಣ ಲಾಭ ಪಡೆದುಕೊಳ್ಳಬೇಕು, ಇದಲ್ಲದೆ ಇಂಜಿನಿಯರಿಂಗ್ನಲ್ಲಿ ಓದುತ್ತಿರುವ ಹಾಗೂ ಇಂಜಿನಿಯರಿಂಗ್ ಮುಗಿಸಿ ಕಟ್ಟಡ ನಿರ್ಮಾಣವೃತ್ತಿಗೆ ಪುವೇಶಿಸುವ ಎಲ್ಲರೂ ಇದರ ಲಾಭವನ್ನು ಪಡೆದುಕೊಳ್ಳಬೇಕು ಎಂದರು.
ಈ ಪ್ರದರ್ಶನವು ಕಟ್ಟಡ ನಿರ್ಮಾಣದ ಕುಶಲಕರ್ಮಿಗಳಿಗೆ, ವಾಸ್ತುಶಿಲ್ಪಿಗಳಿಗೆ, ಜನಸಾಮಾನ್ಯರಿಗೆ ಹೊಸ ಹೊಸ ಆಧುನಿಕ ಮಾದರಿಯ ವಸ್ತುಗಳ ಪರಿಚಯ, ಗುಣಮಟ್ಟದ ಮಾಹಿತಿ, ದರ ಹಾಗೂ ಇವುಗಳು ಸಿಗುವ ಸ್ಥಳ ಮುಂತಾದ ಮಾಹಿತಿಗಳನ್ನು ನೀಡುತ್ತದೆ.
ಕಟ್ಟಡ ನಿರ್ಮಾಣದಲ್ಲಿ ತೊಡಗಿಸಿಕೊಳ್ಳುವ ಹೊಸ ಇಂಜಿನಿಯರ್‌ಗಳು ಹೊಸ ಹೊಸ ಮಾಹಿತಿಯನ್ನು ಬಿಲ್ಡ್ ಎಕ್ಸ್ ನೀಡುತ್ತದೆ. ಹೊಸ ಹೊಸ ಸಣ್ಣ ಪುಮಾಣದ ಉದ್ಧಿಮಗಳಾದ ಸಿಮೆಂಟ್ ಬ್ಲ್ಯಾಕ್ ತಯಾರಿಕಾ ಘಟಕ, ರೆಡಿಮೇಡ್ ಕಾಂಪೌಂಡ್ ವಾಲ್, ತಯಾರಿಕ ಘಟಕ, ಸಿಮೆಂಟ್ ಪೈಪುಗಳ ತಯಾರಿಕ ಘಟಕ, ಅದೇ ರೀತಿ ಕಟ್ಟಿಗೆಯ ಸಣ್ಣ ಉದ್ಯಮಿಗಳಾದ ಗ್ರಹ ಅಲಂಕಾರಿಕ ವಸ್ತುಗಳ ತಯಾರಿಕಾ ಘಟಕಗಳು, ಸೋಫಾ, ಕುರ್ಚಿಗಳು, ವಾರ್ಡೋಬ್‌ಗಳು ಹೀಗೆ ಇನ್ನೂ ಅನೇಕ ಸಣ್ಣ ಉದ್ಯಮಿಗಳಿಗೆ ಬಿಲ್ಟ್ ಎಕ್ಸ್ ಪುಚಾರ ಹಾಗೂ ಉತ್ತೇಜನವನ್ನು ನೀಡುತ್ತದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಿಜಯೇಂದ್ರ ಗೌಡ ಪಾಟೀಲ, ಅರುಣ ಶಿಲವಂತ, ವೀರಣ್ಣ ಹವಾಲ್ದಾರ್ ಇದ್ದರು.